– ವೈದ್ಯರ ವಿರುದ್ಧ ಕುಟುಂಬಸ್ಥರ ಆರೋಪ
ಚಿಕ್ಕಬಳ್ಳಾಪುರ: ಕೋವಿಡ್ 19 ಮಹಾಮಾರಿಗೆ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಮೃತಪಟ್ಟಿದ್ದು, ವೈದ್ಯರು ಸೂಕ್ತ ಚಿಕಿತ್ಸೆ ನೀಡಿಲ್ಲ ಅಂತ ಮೃತ ಶಿಕ್ಷಕನ ಕುಟುಂಬ ಆರೋಪಿಸಿದೆ.
ಚಿಂತಾಮಣಿ ನಗರದ 48 ವರ್ಷದ ಸರ್ಕಾರಿ ಶಾಲೆಯ ಶಿಕ್ಷಕ ವೆಂಕಟೇಶಪ್ಪ ಮೃತ ದುರ್ದೈವಿ. ಶುಕ್ರವಾರ ಉಸಿರಾಟದ ಸಮಸ್ಯೆಯಿಂದ ಚಿಕ್ಕಬಳ್ಳಾಪುರ ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ವೆಂಕಟೇಶಪ್ಪ ಮೃತಪಟ್ಟಿದ್ದಾರೆ.
ಈ ಸಾವಿಗೆ ಆಸ್ಪತ್ರೆ ವೈದ್ಯರೇ ನೇರ ಕಾರಣ ಸಮರ್ಪಕ ಸೂಕ್ತ ಚಿಕಿತ್ಸೆ ನೀಡದ ಹಿನ್ನೆಲೆ ತಮ್ಮ ತಂದೆ ಸಾವನ್ನಪ್ಪಿದ್ದಾರೆ ಅಂತ ಮಗ ವಂಶಿಕೃಷ್ಣ ಆರೋಪಿಸಿದ್ದಾರೆ. ವೆಂಕಟೇಶಪ್ಪ ಸಾವಿನಿಂದ ತಾಯಿ- ಮಗನ ಕಣ್ಣೀರು ಹಾಕಿ ಗೋಳಾಡುತ್ತಿದ್ದು ಎಲ್ಲರ ಮನಕಲುವಂತಿತ್ತು.