ಮಾಸ್ಕೋ: ಎಲೆಕ್ಟ್ರಿಕ್ ಕಾರು ಕಂಪನಿ ಟೆಸ್ಲಾದ ಸ್ಥಾಪಕ ಎಲೋನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಸ್ಟಾರ್‌ಲಿಂಕ್ ಇಂಟರ್‌ನೆಟ್ ಬಳಸುವ ಜನರ ಮೇಲೆ ರಷ್ಯಾ ಸರ್ಕಾರ ದಂಡ ವಿಧಿಸುವ ಸಾಧ್ಯತೆಯಿದೆ.
ಸ್ಪೇಸ್ ಎಕ್ಸ್ ಸ್ಟಾರ್‌ಲಿಂಕ್ ಸರ್ವಿಸ್, ಒನ್‌ವೆಬ್ ಅಲ್ಲದೇ ರಷ್ಯಾ ಉಪಗ್ರಹ ಹೊರತಾದ ವಿದೇಶಿ ಉಪಗ್ರಹ ಬಳಸಿ ಇಂಟರ್‌ನೆಟ್ ಬಳಕೆಗೆ ನಿರ್ಬಂಧ ಹೇರುವ ಸಂಬಂಧ ಕಾನೂನು ತರಲು ರಷ್ಯಾ ಸರ್ಕಾರ ಮುಂದಾಗಿದೆ. ಈ ಉಪಗ್ರಹ ಇಂಟರ್‌ನೆಟ್‌ಗಳಿಂದ ದೇಶಕ್ಕೆ ಭವಿಷ್ಯದಲ್ಲಿ ಬೆದರಿಕೆಗೆ ಕಾರಣವಾಗಬಹುದು ಎಂಬ ಕಾರಣಕ್ಕೆ ನಿಷೇಧ ಹೇರಲು ಮುಂದಾಗಿದೆ.
Advertisement
Advertisement
ರಷ್ಯಾ ಮಾಧ್ಯಮಗಳಲ್ಲಿ ಪ್ರಕಟವಾದಂತೆ ಸಾಮಾನ್ಯ ಜನರು ವಿದೇಶಿ ಉಪಗ್ರಹಗಳ ಇಂಟರ್‌ನೆಟ್ ಬಳಕೆ ಮಾಡಿದರೆ 135 ಡಾಲರ್‌ನಿಂದ 405 ಡಾಲರ್(ಅಂದಾಜು 9 ಸಾವಿರದಿಂದ 29 ಸಾವಿರ ರೂ.), ಕಂಪನಿಗಳು ಬಳಕೆ ಮಾಡಿದರೆ 6,750 ಡಾಲರ್ ನಿಂದ 13,500( ಅಂದಾಜು 4.90 ಲಕ್ಷದಿಂದ 9.84 ಲಕ್ಷ ರೂ.) ದಂಡ ವಿಧಸುವ ಸಾಧ್ಯತೆಯಿದೆ.
Advertisement
Advertisement
ರಷ್ಯಾದ ನಿರ್ಧಾರಕ್ಕೆ ಎಲೋನ್ ಮಸ್ಕ್ ಪ್ರತಿಕ್ರಿಯಿಸಿ, ನಾವು ಜನರನ್ನು ಮಂಗಳ ಗ್ರಹಕ್ಕೆ ಸೇರಿಸಲು ಪ್ರಯತ್ನಿಸುತ್ತಿದ್ದೇವೆ. ಸಹಾಯ ಮಾಡುವವರನ್ನು ಪ್ರಶಂಸಿಸುತ್ತೇವೆ ಎಂದು ಹೇಳಿದ್ದಾರೆ.
ಸ್ಪೇಸ್ ಎಕ್ಸ್ ಕಂಪನಿ ತನ್ನ ಫಾಲ್ಕನ್ 9 ರಾಕೆಟ್‌ನಿಂದ 944 ಉಪಗ್ರಹವನ್ನು ಉಡಾವಣೆ ಮಾಡಿದೆ. ಒಟ್ಟು 42 ಸಾವಿರ ಸ್ಟಾರ್‌ಲಿಂಕ್ ಉಪಗ್ರಹವನ್ನು ಉಡಾವಣೆ ಮಾಡಿ ವಿಶ್ವಕ್ಕೆ ಸೂಪರ್ ಫಾಸ್ಟ್ ಇಂಟರ್‌ನೆಟ್ ನೀಡುವ ಮಹತ್ವದ ಯೋಜನೆಗೆ ಮಸ್ಕ್ ಕೈ ಹಾಕಿದ್ದಾರೆ.
We’re just trying to get people to Mars. Help would be appreciated.
— Elon Musk (@elonmusk) January 13, 2021