ರಾಯಚೂರು: ಉಪಚುನಾವಣೆ ಹಿನ್ನೆಲೆಯಲ್ಲಿ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ರ‍್ಯಾಂಡಮ್ ಟೆಸ್ಟ್ ಗೆ ಪ್ಲಾನ್ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ್ ಕುಮಾರ್ ಹೇಳಿದ್ದಾರೆ.
ಜಿಲ್ಲೆಯಾದ್ಯಂತ ಕೊರೊನಾ ಸೋಂಕು ದಿನೇ ದಿನೇ ಹೆಚ್ಚಳವಾಗುತ್ತಿದ್ದು, ಚುನಾವಣೆ ಬಳಿಕ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ರ‍್ಯಾಂಡಮ್ ಟೆಸ್ಟ್ ಆರಂಭಿಸಲಾಗುತ್ತದೆ. ಮಸ್ಕಿ ಕ್ಷೇತ್ರವನ್ನು ಸ್ಪೆಷಲ್ ಆಗಿ ಪರಿಗಣಿಸಿ ಈ ರ್ಯಾಂಡಮ್ ಟೆಸ್ಟ್ ಮಾಡಲಾಗುತ್ತದೆ ಎಂದರು.
Advertisement
Advertisement
ಮಸ್ಕಿ ಕ್ಷೇತ್ರದಲ್ಲಿ ಅಧಿಕ ಜನರು ಸೇರಿದ ಭಾಗವಾಗಿ ನಿತ್ಯ 1000ಕ್ಕೂ ಅಧಿಕ ಜನರಿಗೆ ಟೆಸ್ಟ್ ಮಾಡಲು ಜಿಲ್ಲಾಡಳಿತ ಗುರಿ ಹೊಂದಿದೆ. ಮಸ್ಕಿ ಕ್ಷೇತ್ರದಲ್ಲಿ ರ‍್ಯಾಲಿ, ಸಮಾವೇಶ ನಡೆದ ಕಡೆಗಳಲ್ಲಿ ಕಡ್ಡಾಯವಾಗಿ ರ‍್ಯಾಂಡಮ್ ಟೆಸ್ಟ್ ನಡೆಸಲಾಗುತ್ತದೆ. ತುರ್ವಿಹಾಳ, ಬಳಗನೂರು, ಪಾಮನಕೆಲ್ಲೂರಿನಲ್ಲಿ ರ‍್ಯಾಂಡಮ್ ಟೆಸ್ಟ್ ಹಾಗೂ ಸಭೆ, ಸಮಾವೇಶ ನಡೆದ ಸ್ಥಳದಲ್ಲೇ ರ‍್ಯಾಂಡಮ್ ಟೆಸ್ಟ್ ಮಾಡಲಾಗುತ್ತದೆ ಎಂದು ಡಿಸಿ ವಿವರಿಸಿದರು.
Advertisement