ಮಸೀದಿಯಲ್ಲಿ ನಮಾಜ್ ಮಾಡ್ತಿದ್ದಾಗಲೇ ಕುಸಿದು ಬಿದ್ದು ವ್ಯಕ್ತಿ ಸಾವು

Public TV
1 Min Read
MNG 1 copy

ಮಂಗಳೂರು: ಮಸೀದಿಯಲ್ಲಿ ನಮಾಜ್ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಕಳಾರ ಎಂಬಲ್ಲಿ ಈ ಘಟನೆ ನಡೆದಿದೆ. ಮೃತ ದುರ್ದೈವಿ ವ್ಯಕ್ತಿಯನ್ನು ಕಳಾರ ನಿವಾಸಿ ಅಬ್ದುಲ್ ಖಾದರ್ ಎಂದು ಗುರುತಿಸಲಾಗಿದೆ.

ಪ್ರತಿನಿತ್ಯ ನಮಾಜ್ ಮಾಡಲು ಹೋಗುತ್ತಿದ್ದ ಅಬ್ದುಲ್ ಖಾದರ್ ಇಂದು ಕೂಡ ಮುಂಜಾನೆ 4 ಗಂಟೆ ಸುಮಾರಿಗೆ ಮಸೀದಿ ತೆರಳಿದ್ದಾರೆ. ಹೀಗೆ ಬಂದವರೆ ತಮ್ಮ ಪಾಡಿಗೆ ನಮಾಜ್ ಮಾಡುತ್ತಿದ್ದರು. ನಿಂತಿದ್ದ ಅಬ್ದುಲ್ ಖಾದರ್ ಕೂಡಲೇ ಕುಸಿದು ಬಿದ್ದಿದ್ದಾರೆ.

MNG copy

ಇದೇ ಸ್ಥಳದಲ್ಲೇ ಇದ್ದ ವ್ಯಕ್ತಿಯೊಬ್ಬರು ಎಬ್ಬಿಸಲು ಹೋದಾಗ ಖಾದರ್ ಅದಾಗಲೇ ಮೃತಪಟ್ಟಿದ್ದಾರೆ. ಈ ಎಲ್ಲಾ ದೃಶ್ಯಗಳು ಮಸೀದಿಯಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *