ಟಿ.ದಾಸರಹಳ್ಳಿ: ಎರಡು ದಿನದಿಂದ ಸತತವಾಗಿ ಸುರಿದ ಮಳೆಯಿಂದಾಗಿ ಬೆಂಗಳೂರು ಹೊರವಲಯ ಟಿ ದಾಸರಹಳ್ಳಿಯ ವಿವಿಧೆಡೆ ತಗ್ಗುಪ್ರದೇಶದ ಸಾವಿರಾರು ಮನೆಗಳಿಗೆ ರಾಜಕಾಲುವೆಯ ನೀರು ನುಗ್ಗಿದೆ. ಪರಿಣಾಮ ಸಾಕಷ್ಟು ಹಾನಿಯಾಗಿ ಜನರು ತೊಂದರೆ ಅನುಭವಿಸುವಂತಾಗಿತ್ತು.
ಶಾಸಕರಾದ ಆರ್ ಮಂಜುನಾಥ್ ಇಂದು ಅಧಿಕಾರಿಗಳ ಜೊತೆಗೆ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಮಳೆ ಹಾನಿಯಿಂದ ಮನೆ ಕುಸಿತಗೊಂಡು ತೊಂದರೆಗೀಡಾಗಿದ್ದ ಸೋಮಶೆಟ್ಟಿಹಳ್ಳಿ ಗ್ರಾಮದ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದರು.
ಸರ್ಕಾರದಿಂದ ನೂತನ ಮನೆ ನಿರ್ಮಿಸಿಕೊಡಲು ವರದಿ ನೀಡುವಂತೆ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು. ಹಾಗೂ ಕೆರೆಗುಡ್ಡದಹಳ್ಳಿ ಎಸ್.ಎಲ್.ವಿ ಗಾರ್ಡನ್ ಬಡಾವಣೆ, ಬಾಗಲಗುಂಟೆ ವಾರ್ಡ್ ರಾಯಲ್ ಎನ್ಕ್ಲೇವ್ ಬಡಾವಣೆ ಹಾಗೂ ಚೊಕ್ಕಸಂದ್ರ ವಾರ್ಡ್ ಕೆರೆ ಭಾಗದ ರಸ್ತೆಗಳು ಹಾಗೂ ಹಿಂಭಾಗದ ರಸ್ತೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಬಿ.ಬಿ.ಎಂ.ಪಿ ಮುಖ್ಯ ಅಭಿಯಂತರರು ರಾಜಕಾಲುವೆ ಮುಖ್ಯ ಅಭಿಯಂತರರು ಕೆರೆ ನಿರ್ವಹಣೆ ಮುಖ್ಯ ಅಭಿಯಂತರರು ಸಹಾಯಕ ಅಭಿಯಂತರರು ಹಾಗೂ ಹಿರಿಯ ಅಧಿಕಾರಿಗಳು ಹಾಜರಿದ್ದರು.