ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಪ್ರಾರಂಭವಾಗಿ ಮೂರು ದಿನಗಳು ಕಳೆದಿವೆ. ಕೊರೊನಾ ಕಾರಣಕ್ಕೆ ಎರಡು ದಿನಗಳ ಕಾಲ ಮೀನುಗಾರರು ಮತ್ಸ್ಯ ಬೇಟೆಗೆ ತೆರಳಿರಲಿಲ್ಲ. ಇಂದು ಮೀನುಗಾರಿಕೆಗೆ ತೆರಳಿದ್ದು, ತಾವು ಬೀಸಿದ ಬಲೆಗೆ ರಾಶಿ ರಾಶಿ ಮೀನುಗಳು ಅನಾಯಾಸವಾಗಿ ದೊರೆಯುತ್ತಿವೆ.
ಕಳೆದ ನಾಲ್ಕು ತಿಂಗಳಲ್ಲಿ ಸಮುದ್ರದಲ್ಲಿ ಆದ ಹವಾಮಾನ ಬದಲಾವಣೆ ಮೀನುಗಳ ಸಂತಾನೋತ್ಪತ್ತಿಗೆ ಹೆಚ್ಚು ಪೂರಕವಾಗಿತ್ತು. ಇದೀಗ ಮೀನುಗಳು ಎತೇಚ್ಚವಾಗಿ ದರೆಯುತ್ತಿವೆ. ಲೋಡ್ ಗಟ್ಟಲೆ ಮೀನುಗಳು ಸಿಕ್ಕರೂ ಕೇರಳ, ಆಂಧ್ರ ಭಾಗದಲ್ಲಿ ಲಾಕ್‍ಡೌನ್ ಇರುವುದರಿಂದ ಉತ್ತಮ ಬೆಲೆ ಸಿಗದಂತಾಗಿದೆ.
Advertisement
Advertisement
ಮಳೆಯ ಅಬ್ಬರ ಜೋರು
ಬೆಳಗಿನಿಂದ ಬಿಡುವುಕೊಟ್ಟಿದ್ದ ಮಳೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೆ ಪ್ರಾರಂಭವಾಗಿದ್ದು, ಜಿಲ್ಲೆಯಾದ್ಯಂತ ಅಬ್ಬರದ ಮಳೆ ಸುರಿಯುತ್ತಿದೆ. ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಹವಾಮಾನ ಇಲಾಖೆ ಮಾಹಿತಿ ನೀಡಿ, ಇನ್ನೂ ಮೂರು ದಿನ ಹೆಚ್ಚಿನ ಮಳೆಯಾಗುತ್ತದೆ ಎಂದು ಸೂಚಿಸಿದೆ. ಹೆಚ್ಚಿನ ಮಳೆಯಾದರೆ ಸಂಪ್ರದಾಯಿಕ ಮೀನುಗಾರರಿಗೆ ಈ ಬಾರಿ ಹೆಚ್ಚಿನ ಲಾಭ ತರುವ ನಿರೀಕ್ಷೆ ಮಾಡಲಾಗಿದೆ.