ಹಾಸನ: ಮಳೆಯಿಂದ ಮನೆಯ ಗೋಡೆ ಕುಸಿತವಾಗಿ ಇಡೀ ಕುಟುಂಬವೇ ಸಂಕಷ್ಟಕ್ಕೆ ಸಿಲುಕಿರುವ ಘಟನೆ ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದಲ್ಲಿ ನಡೆದಿದೆ.
ಶ್ರೀಕಂಠನಗರದಲ್ಲಿ ಮಂಜುಳಮ್ಮ ಎಂಬುವವರು ತಮ್ಮ ಇಬ್ಬರು ಹೆಣ್ಣು ಮಕ್ಕಳೊಂದಿಗೆ ವಾಸವಾಗಿದ್ದರು. ಇರಲು ಮನೆ ಬಿಟ್ಟರೆ ಬೇರೆ ಆಸ್ತಿಯಿಲ್ಲದ ಮಂಜುಳಮ್ಮ ಗಾರೆ ಕೆಲಸ ಮಾಡಿಕೊಂಡು ಇಬ್ಬರು ಹೆಣ್ಣು ಮಕ್ಕಳ ಜೊತೆ ಜೀವನ ಸಾಗಿಸುತ್ತಿದ್ದರು.
ಲಾಕ್‍ಡೌನ್ ನಂತರ ಸರಿಯಾಗಿ ಕೂಲಿ ಕೆಲಸ ಕೂಡ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದರು. ಇದೀಗ ಮಳೆಯಿಂದ ಮನೆಗೋಡೆ ಕುಸಿದಿದ್ದು, ಇಡೀ ಕುಟುಂಬ ಸಂಕಟಕ್ಕೆ ಸಿಲುಕಿದೆ. ಅದಷ್ಟು ಬೇಗ ಅಧಿಕಾರಿಗಳು ನಮ್ಮ ಕಷ್ಟಕ್ಕೆ ಸ್ಪಂದಿಸಿ ಸರ್ಕಾರದಿಂದ ಧನ ಸಹಾಯ ಮಾಡಿಸುವಂತೆ ಮನೆ ಹಾನಿಗೊಳಗಾದವರು ಮನವಿ ಮಾಡಿದ್ದಾರೆ.