ಮಳೆಯಲ್ಲಿ ನೆನೆಯುತ್ತಿದ್ದ ಶ್ವಾನವನ್ನು ಪುಟ್ಟ ಬಾಲಕಿ ತನ್ನ ಛತ್ರಿಯ ಸಹಾಯದಿಂದ ರಕ್ಷಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
12 ಸೆಕೆಂಡುಗಳಿರುವ ಈ ವೀಡಿಯೋವನ್ನು ಭಾರತೀಯ ಅರಣ್ಯ ಸೇವೆ(ಐಎಫ್‍ಎಸ್) ಅಧಿಕಾರಿ ಸುಸಂತಾ ನಂದ ಎಂಬವರು, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ಪುಟ್ಟ ಬಾಲಕಿ, ಮಳೆಯಲ್ಲಿ ನೆನೆಯುತ್ತಿದ್ದ ಶ್ವಾನವನ್ನು ತನ್ನ ಛತ್ರಿಯನ್ನು ಬಳಸಿ ರಕ್ಷಿಸುತ್ತಾಳೆ. ಅಲ್ಲದೇ ಶ್ವಾನ ಎಲ್ಲಿಯೇ ಹೋದರೂ ಅದನ್ನು ಹಿಂಬಾಲಿಸುತ್ತಾಳೆ. ಆದರೆ ಶ್ವಾನ ಮಾತ್ರ ಛತ್ರಿಯನ್ನು ನಿರಾಕರಿಸುವುದನ್ನು ನೋಡಬಹುದಾಗಿದೆ.
Advertisement
Advertisement
ಈ ಕ್ಯೂಟ್ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಬಾಲಕಿಯ ನಿಸ್ವಾರ್ಥ ಮನಸ್ಸಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ‘ದಯೆಯೊಂದಿದ್ದರೆ ಬೇರೆಯವರಿಗೆ ಪ್ರತಿಯೊಬ್ಬರು ಸಣ್ಣಪುಟ್ಟ ಕೆಲಸವನ್ನು ಮಾಡುತ್ತಾರೆ. ಏಕೆಂದರೆ ನಿಮಗೆ ಅದನ್ನು ಮಾಡುವ ಶಕ್ತಿ ಇರುತ್ತದೆ’ ಎಂದು ಐಎಫ್‍ಎಸ್ ಅಧಿಕಾರಿ ವೀಡಿಯೋ ಜೊತೆಗೆ ಕ್ಯಾಪ್ಷನ್ ಕೂಡ ಹಾಕಿಕೊಂಡಿದ್ದಾರೆ.
Advertisement
Kindness is doing little things for someone else because you can???? pic.twitter.com/Pkgeg9u1am
— Susanta Nanda IFS (@susantananda3) May 3, 2021
Advertisement
ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಮನ ಗೆದ್ದಿದ್ದು, ಲೈಕ್ಸ್‌ಗಳ ಸುರಿ ಮಳೆ ಬರುತ್ತಿದೆ. ಬಾಲಕಿ ಚಿನ್ನದಂತ ಮನಸ್ಸು ಹೊಂದಿದ್ದಾಳೆ, ಬಾಲಕಿ ಸಹಾಯ ಮಾಡುವ ಗುಣ ಹೊಂದಿದ್ದಾಳೆ. ಹೀಗೆ ಹಲವಾರು ಕಾಮೆಂಟ್‍ಗಳು ಹರಿದು ಬರುತ್ತಿದೆ.