ಬಿಗ್‍ಬಾಸ್ ಮನೆಯಲ್ಲಿರುವ ಕ್ಯೂಟೆಸ್ಟ್ ಸ್ಪರ್ಧಿಯಾಗಿರುವ ಶುಭಾ ಪೂಂಜಾ ಬಿಗ್‍ಬಾಸ್ ಬಳಿ ಹಠವನ್ನು ಮಾಡುತ್ತಿದ್ದಾರೆ. ಶುಭಾ ಮನವಿಗೆ ಬಿಗ್‍ಬಾಸ್ ಮನಕರಗಿದೆ.
ಶುಭಾ ತಮ್ಮ ಮುಗ್ಧತೆಯಿಂದಲೇ ಹೆಚ್ಚು ಸುದ್ದಿಯಾಗುತ್ತಾರೆ. ಮನೆಯಲ್ಲಿ ಮುದ್ದು ಮಕ್ಕಳಂತೆ ಹಠಮಾಡುತ್ತಾರೆ. ಆಟ ಎಂದು ಬಂದರೆ ಅಷ್ಟೇ ಚೆನ್ನಾಗಿ ಆಡುತ್ತಾರೆ. ಆದರೆ ಸಣ್ಣ ಮಕ್ಕಳಂತೆ ಹಠಮಾಡಿರುವ ವೀಡಿಯೋವನ್ನು ಖಾಸಗಿ ವಾಹಿನಿ ತನ್ನ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ.
ಮಳೆ ಬರುತ್ತಿರುವುದನ್ನು ನೋಡಿದ ಶುಭಾ ಬಿಗ್‍ಬಾಸ್ ಡೋರ್ ಓಪನ್ ಮಾಡಿ ನಾನು ಮಳೆಯಲ್ಲಿ ನೆನೆಯಬೇಕು ಎಂದು ಹೇಳಿದ್ದಾರೆ. ಆದರೆ ಬಿಗ್‍ಬಾಸ್ ಮಾತ್ರ ಏನು ಮಾತನಾಡದೇ ಸುಮ್ಮನೇ ಇದ್ದರು. ಬಿಗ್‍ಬಾಸ್ ಮತ್ತೆ ಮಳೆ ಬರಲ್ಲ. ನಾನು ಮಳೆಯಲ್ಲಿ ನೆನೆಯಬೇಕು ಡೋರ್ ಓಪನ್ ಮಾಡಿ ಎಂದು ಸಣ್ಣ ಮಗುವಿನಂತೆ ಹಠಮಾಡಿದ್ದರೆ. ಡೋರ್ ಓಪನ್ ಮಾಡದೇ ಇದ್ದಾಗ ನೆಲದಲ್ಲಿ ಬಿದ್ದು ಹೊರಳಾಡಿದ್ದಾರೆ. ಇದನ್ನು ಕಂಡು ಮಂಜು ನೀವು ಹೀರೋಯಿನ್ ಮೇಡಂ ಎಂದು ಹೇಳಿದ್ದಾರೆ. ಶುಭಾ ಸಣ್ಣ ಮಗುವಿನಂತೆ ಕಣ್ಣೀರು ಹಾಕುತ್ತಾ ನೆಲದಲ್ಲಿ ಬಿದ್ದು ಹೊರಳಾಡುತ್ತಿದ್ದನ್ನು ನೋಡಿ ಸ್ಫರ್ಧಿಗಳು ನಿಜವಾಗಿಯೂ ಅಳುತ್ತಿದ್ದಾರಾ ಎಂದು ತಮಾಷೆ ಮಾಡಿ ನಕ್ಕಿದ್ದಾರೆ.
ಬಿಗ್‍ಬಾಸ್ ಶುಭಾ ಕಣ್ಣೀರಿಗೆ ಕರಗಿ ಡೋರ್ ಓಪನ್ ಮಾಡಿದ್ದಾರೆ. ಆಗ ಶುಭಾ ಓಡಿ ಹೋಗಿ ಗಾರ್ಡನ್ ಏರಿಯಾದಲ್ಲಿ ನಿಂತು ಡಾನ್ಸ್ ಮಾಡಿದ್ದಾರೆ. ಮನೆಯ ಸ್ಪರ್ಧಿಗಳು ಮಳೆಯಲ್ಲಿ ನೆಂದು ಹೆಜ್ಜೆ ಹಾಕಿ ಆಟವಾಡಿ ಸಂತೋಷಪಟ್ಟಿದ್ದಾರೆ.