– ತೊರಕೆ ಮೀನುಗಳ ಗಾತ್ರ ಕಂಡು ದಂಗಾದ ಮೀನುಗಾರರು
ಉಡುಪಿ: ಜಿಲ್ಲೆಯ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಬೃಹತ್ ಮೀನುಗಳು ಬಲೆಗೆ ಬಿದ್ದಿವೆ. ಭಾರೀ ಗಾತ್ರದ ಎರಡು ತೊರಕೆ ಮೀನುಗಳು ಆಳಸಮುದ್ರ ದೋಣಿಯ ಮೀನುಗಾರರ ಬಲೆಗೆ ಬಿದ್ದಿವೆ.
ಒಂದು ಮೀನು 750 ಕೆ.ಜಿ. ಹಾಗೂ ಇನ್ನೊಂದು 250 ಕೆ.ಜಿ. ತೂಗುತ್ತಿದೆ. ಮಲ್ಪೆ ಸುಭಾಸ್ ಸಾಲಿಯಾನ್ ಅವರ ಮಾಲೀಕತ್ವದ ನಾಗಸಿದ್ಧಿ ದೋಣಿಯ ಬಲೆಗೆ ಬಿದ್ದಿರುವ ಈ ಮೀನುಗಳನ್ನು ಬಂದರಿನಲ್ಲಿ ಕ್ರೇನ್ ಮೂಲಕ ಇಳಿಸಲಾಯಿತು.
Advertisement
Advertisement
ತೊರಕೆ ಮೀನು ತುಂಬಾ ರುಚಿಕರವಾಗಿದ್ದು, ವಿದೇಶಗಳಿಗೆ ರಫ್ತಾಗುತ್ತದೆ. ಬೃಹತ್ ಗಾತ್ರದ ಈ ಮೀನು ಮತ್ಸ್ಯಪ್ರಿಯರ ಬಾಯಿಯಲ್ಲಿ ನೀರಿಳಿಯುವಂತೆ ಮಾಡಿದೆ. ತುಳು ಭಾಷೆಯಲ್ಲಿ ಇದನ್ನು ಕೊಂಬು ತೊರಕೆ ಎನ್ನುತ್ತಾರೆ. ಕಳೆದ ವರ್ಷ ಮಲ್ಪೆಯಲ್ಲಿ 1.2 ಟನ್ ತೂಕದ ಭಾರೀ ಗಾತ್ರದ ಮೀನು ಬಲೆಗೆ ಬಿದ್ದಿತ್ತು. ಈ ಬಾರಿ ಬಂದರಿನಲ್ಲಿ ಸಿಕ್ಕ ತೊರಕೆ ಮೀನು ಬೃಹತ್ ಗಾತ್ರದ್ದಾಗಿದೆ.
Advertisement
ಈ ಮೀನನ್ನು ನೋಡಲು ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು. ಕಾಲ ಮುಗಿದ ಸಂದರ್ಭದಲ್ಲಿ ಭಾರಿ ಗಾತ್ರದ ತೊರಕೆ ಮೀನು ಗಳು ಅರಬ್ಬಿ ಸಮುದ್ರದಲ್ಲಿ ಕಾಣಸಿಗುತ್ತದೆ ಸಣ್ಣ ಗಾತ್ರದ ಮೀನುಗಳು ಸಮುದ್ರ ತಟಕ್ಕೂ ಬರುತ್ತವೆ.
Advertisement
ಮೀನು ಸಿಕ್ಕಿರುವ ಕುರಿತು ಬೋಟ್ ಮಾಲೀಕ ಮಾತನಾಡಿ, ಅರಬ್ಬಿ ಸಮುದ್ರದ ನಡುವೆ ಈ ಗಾತ್ರದ ಮೀನು ಸಿಗುತ್ತದೆ. ಬಂಡೆಗಳ ಬಳಿ ತೊರಕೆ ಮೀನುಗಳು ಇರುತ್ತವೆ. ಯಾವಾಗಲು ಸಣ್ಣ ಮೀನುಗಳು ಬಲೆಗೆ ಬೀಳುವೆ. ಈ ಬಾರಿ ಇಷ್ಟು ಗಾತ್ರದ ಮೀನು ಸಿಕ್ಕಿದ್ದು, ಬಹಳ ಖುಷಿಯಾಗಿದೆ. ಮಾಂಸಕ್ಕೆ ಮೀನು ರವಾನಿಸಲಾಗಿದೆ ಎಂದರು.