ಚಾಮರಾಜನಗರ: ಸ್ಯಾಂಡಲ್‍ವುಡ್ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರಿಗೆ ಪ್ರಾಣಿ, ಪಕ್ಷಿಗಳೆಂದರೇ ಅಚ್ಚುಮೆಚ್ಚು. ವಿರಾಮ ಸಿಕ್ಕ ಸಮಯದಲ್ಲೆಲ್ಲಾ ಅವರು ಕಾಡು ಸುತ್ತಾಟ ನಡೆಸುತ್ತಾರೆ. ಸದ್ಯ ಚಾಮರಾಜನಗರ ಮಲೆಮಹದೇಶ್ವರ ಅರಣ್ಯದಲ್ಲಿ ದರ್ಶನ್ ಸುತ್ತಾಡಿದ್ದಾರೆ.
ಕೊರೊನಾ ಕಾರಣದಿಂದ ಸಾಕಷ್ಟು ಸಿನಿಮಾ ಶೂಟಿಂಗ್‍ನಿಂದ ದೂರು ಉಳಿದಿರುವ ದರ್ಶನ್, ವಿರಾಮದ ಸಮಯವನ್ನು ತಮ್ಮ ಫಾರ್ಮ್ ಹೌಸ್‍ನಲ್ಲಿ ಕಳೆಯುತ್ತಿದ್ದರು. ನಿನ್ನೆಯ ಲಾಕ್‍ಡೌನ್ ನಡೆಯೂ ಮಲೆಮಹದೇಶ್ವರ ವನ್ಯಧಾಮದ ದೊಡ್ಡಮಾಕಳಗಿ ವ್ಯಾಪ್ತಿಯ ಅರಣ್ಯದಲ್ಲಿ ಸಂಚಾರಿ ಪ್ರಕೃತಿಯ ಸೌಂದರ್ಯವನ್ನು ಸವಿದಿದ್ದಾರೆ.
Advertisement
Advertisement
ಕೊಳ್ಳೇಗಾಲದ ಬಫರ್ ವಲಯದಲ್ಲಿ ದೊಡ್ಡಮಾಕಳಗಿ ಅರಣ್ಯ ಪ್ರದೇಶ ಬರುತ್ತದೆ. ಕರ್ನಾಟಕ ಅರಣ್ಯ ಇಲಾಖೆಯ ರಾಯಭಾರಿ ಆಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಲ್ಲಿನ ಸ್ಥಳ ಹಾಗೂ ಪರಿಸರ ವೈವಿದೈತೆಯ ಕುರಿತು ಡಿಎಫ್‍ಒ ಅವರಿಂದ ಮಾಹಿತಿ ಪಡೆದಿದ್ದಾರೆ. ಈ ವೇಳೆ ನಟ ಚಿಕ್ಕಣ್ಣ ಅವರು ದರ್ಶನ್ ಅವರಿಗೆ ಸಾಥ್ ನೀಡಿದ್ದಾರೆ. ಅರಣ್ಯ ಭೇಟಿ ಬಳಿಕ ಮಲೆಮಹದೇಶ್ವರ ವನ್ಯಧಾಮದ ಡಿಎಫ್‍ಒ ಕಚೇರಿ ಸಮೀಪ ಎರಡು ಗಿಡ ನೆಟ್ಟಿದ್ದಾರೆ. ಈ ಕುರಿತು ಡಿಎಫ್‍ಒ ಎಡುಕೂಂಡಲ ಮಾಹಿತಿ ನೀಡಿದ್ದಾರೆ.
Advertisement
Advertisement
ರಾಬರ್ಟ್ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಸಿಕ್ಕ ವಿರಾಮದ ಸಮಯದಲ್ಲಿ ನಟ ದರ್ಶನ್ ಉತ್ತರಾಖಂಡದ ಕಾಡಿಗೆ ಭೇಟಿ ನೀಡಿ, ಸ್ವತಃ ವ್ಯನ್ಯ ಜೀವಿಗಳ ಫೋಟೋ ಕ್ಲಿಕ್ಕಿಸಿದ್ದರು. ಇದಕ್ಕೂ ಮುನ್ನ ಕೀನ್ಯಾ ಸೆರೆಂಗೆಟ್ಟಿ ಕಾಡಿಗೆ ಭೇಟಿ ನೀಡಿದ್ದರು. ಆ ವೇಳೆ ಅವರು ಕ್ಲಿಕ್ಕಿಸಿದ್ದ ಫೋಟೋಗಳನ್ನು ಮಾರಾಟ ಮಾಡಿ ಅರಣ್ಯವಾಸಿಗಳ ಕಲ್ಯಾಣಕ್ಕೆ ನೀಡಿದ್ದರು.