ಮಾಸ್ಕೋ: ರಷ್ಯಾದ 35 ವರ್ಷದ ಮಹಿಳೆ ತನ್ನ ಮೊದಲ ಮಗುವಿಗೆ ಮಲಮಗನೊಂದಿಗೆ ಜನ್ಮ ನೀಡಿರುವುದಾಗಿ ಘೋಷಿಸಿದ್ದಾಳೆ. ಗಂಡನನ್ನು ತೊರೆದು ಮಲಮಗನನ್ನೇ ವಿವಾಹವಾಗಿ ಮಗುವಿಗೆ ಜನ್ಮ ನೀಡುತ್ತಿರುವ ಈ ಸುದ್ದಿ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
ಮರೀನಾ ಮಾಜಿ ಗಂಡನ ಹೆಣ್ಣು ಮಗುವಿಗೆ ಜನ್ಮ ನೀಡುವ ಮುನ್ನವೇ ಆತನ ಪುತ್ರ ವ್ಲಾಡಿಮಿರ್ ನನ್ನು ವಿವಾಹವಾಗಿದ್ದಾಳೆ. ಇದೀಗ ಮಾಜಿ ಗಂಡನ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಆ ಮಗು 3 ಕೆಜಿ ತೂಕವಿದೆ.
10 ವರ್ಷದಿಂದ ಜೊತೆಗಿದ್ದ ಮಾಜಿ ಪತಿಗೆ ಇದೀಗ ಮರೀನಾ ವಿಚ್ಛೇದನ ನೀಡಿದ್ದಾಳೆ. ವ್ಲಾಡಿಮಿರ್ ರಜೆಯ ದಿನಗಳಲ್ಲಿ ಮನೆಗೆ ಬರುತ್ತಿದ್ದಾಗ ಆಕೆಗೆ ಆತನ ಮೇಲೆ ಪ್ರೇಮವಾಗಿದ್ದು ಈಗ ಆತನನ್ನೆ ಗಂಡನೆಂದು ಘೋಷಿಸಿದ್ದಾಳೆ.
7 ವರ್ಷದಿಂದ ಮರೀನಾ ತನ್ನ ತಂದೆ ಅಲೆಕ್ಸಿ ಶಾವಿರಿನ್(45)ನನ್ನು ಮದುವೆಯಾಗಿದ್ದಳು ಮತ್ತು ಅವರಿಬ್ಬರು 5 ದತ್ತು ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು ಎಂಬ ವಿಚಾರ ಮಲಮಗನಾದ ವ್ಲಾಡಿಮಿರ್ ತಿಳಿದಿತ್ತು.
ಇನ್ ಸ್ಟಾಗ್ರಾಮ್ ನಲ್ಲಿ 5 ಲಕ್ಷ ಫಾಲೋವರ್ ಹೊಂದಿರುವ ಮರೀನಾ ವ್ಲಾಡಿಮಿರ್ ಸೂಚನೆ ಮೇರೆಗೆ ಮಗುವಿನ ಮುಖ ಕಾಣಿಸದಂತೆ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾಳೆ. ತನ್ನ ಹೊಸ ಸಂಗಾತಿಯನ್ನು ಆಕರ್ಷಿಸಲು ಪ್ಲಾಸ್ಟಿಕ್ ಸರ್ಜರಿ ಚಿಕಿತ್ಸೆ ಮಾಡಿಸಿಕೊಂಡಿರುವ ಸತ್ಯವನ್ನು ಬಹಿರಂಗ ಪಡಿಸಿದ್ದಾಳೆ ಮತ್ತು ವಿಶ್ವದಲ್ಲಿಯೇ ತಾನು ಆಕರ್ಷಿತ ನೀಲಿ ಕಣ್ಣುಗಳನ್ನು ಹೊಂದಿರುವುದಾಗಿ ಹೇಳಿಕೊಂಡಿದ್ದಾಳೆ.
ಈ ಹಿಂದೆ ನನಗೆ ಬಹಳಷ್ಟು ಜನರು ಹೊಸ ಸಂಗಾತಿಯನ್ನು ಆಕರ್ಷಿಸಲು ಮೇಕಪ್ ಮಾಡಿಕೊಳ್ಳುವುದಾಗಿ ಸಲಹೆ ನೀಡಿದ್ದರು. ಆದರೆ ಅದರ ಅವಶ್ಯಕತೆ ಇಲ್ಲ. ತನ್ನ ಪ್ಲಾಸ್ಟಿಕ್ ಸರ್ಜರಿ, ಚರ್ಮ ಮತ್ತು ವ್ಯಕ್ತಿತ್ವವನ್ನು ನನ್ನ ಈಗಿನ ಪತಿಯಾಗಿರುವ ವ್ಲಾಡಿಮಿರ್ ಪ್ರೀತಿಸುತ್ತಾನೆ. ನಾನು ಹೀಗೆಯೇ ಇರಲು ಬಯಸುತ್ತೇನೆ ಇದ್ದಕ್ಕಿಂತ ಸುಂದರವಾಗಿ ಕಾಣಲು ಬಯಸುವುದಿಲ್ಲ ಎಂದು ಹೇಳಿಕೊಂಡಿದ್ದಾಳೆ.