– ಆಸ್ಪತ್ರೆಯಿಂದ ಬಂದ ನಂತ್ರ ಪತ್ನಿಯ ಕೊಲೆ
– ಮಕ್ಕಳ ಕಿರುಚಾಟ ಕೇಳಿ ನೆರೆಹೊರೆಯವರು ಓಡಿ ಬಂದ್ರು
ಚೆನ್ನೈ: ವ್ಯಕ್ತಿಯೊಬ್ಬ ತನ್ನ ಮಕ್ಕಳ ಮುಂದೆಯೇ ಪತ್ನಿಯನ್ನು ಕೊಲೆ ಮಾಡಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಪುದುಚೇರಿಯಲ್ಲಿ ನಡೆದಿದೆ.
ಸುಬ್ರಮಣಿ (41) ಪತ್ನಿ ಮೇನಕಾ (36)ಳನ್ನು ಕೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ದಂಪತಿಗೆ ಅನೇಕ ವರ್ಷಗಳ ಹಿಂದೆ ಮದುವೆಯಾಗಿದ್ದು, ಇವರಿಗೆ 10 ವರ್ಷದ ಮಗಳು ಮತ್ತು ಐದು ವರ್ಷದ ಮಗ ಇದ್ದಾನೆ.
ಮೃತ ಸಬ್ರಮಣಿ ಮಾನಸಿಕ ಅಸ್ವಸ್ಥತೆನಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ಪತ್ನಿ ಮೇನಕಾ ಆಗಾಗ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬರುತ್ತಿದ್ದಳು. ಸೋಮವಾರ ಬೆಳಗ್ಗೆ ದಂಪತಿ ಇಬ್ಬರು ಆಸ್ಪತ್ರೆಗೆ ಹೋಗಿ ವೈದ್ಯರನ್ನು ಭೇಟಿಯಾಗಿ ಸುಮಾರು 11:30ಕ್ಕೆ ಮನೆಗೆ ವಾಪಸ್ ಬಂದಿದ್ದರು.
ಮನೆಯಲ್ಲಿ ಸುಬ್ರಮಣಿ ಮೇಲಿನ ರೂಮಿನಲ್ಲಿ ಮಲಗಿದ್ದನು. ಆದರೆ ಮಧ್ಯಾಹ್ನ ರೂಮಿನಿಂದ ಬಂದು ಏಕಾಏಕಿ ಮಲಗಿದ್ದ ಪತ್ನಿಯ ತಲೆ ಮೇಲೆ ಗ್ಯಾಸ್ ಸಿಲಿಂಡರ್ ತಂದು ಎತ್ತಿ ಹಾಕಿದ್ದಾನೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಮೇನಕಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಈ ವೇಳೆ ಮಕ್ಕಳು ಅಳುತ್ತಿರುವುದನ್ನು ನೋಡಿ ತಕ್ಷಣ ರೂಮಿಗೆ ಹೋಗಿ ಬಾಗಿಲನ್ನು ಮುಚ್ಚಿಕೊಂಡಿದ್ದಾನೆ.
ಆಗ ಮಕ್ಕಳು ಜೋರಾಗಿ ಕಿರುಚಿಕೊಂಡಿದ್ದಾರೆ. ಮಕ್ಕಳ ಕಿರುಚಾಟ ಕೇಳಿ ನೆರೆಹೊರೆಯವರು ಬಂದು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ರೂಮಿನ ಬಾಗಿಲು ಮುರಿದು ಒಳಗೆ ಹೋಗಿದ್ದಾರೆ. ಅಷ್ಟರಲ್ಲಿ ಸುಬ್ರಮಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸದ್ಯಕ್ಕೆ ಪೊಲೀಸರು ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವಗೆಸಿದ್ದಾರೆ. ಮೃತ ಸುಬ್ರಮಣಿ ಮಾನಸಿಕ ಒತ್ತಡದಿಂದಾಗಿ ತನ್ನ ಪತ್ನಿಯನ್ನ ಕೊಲೆ ಮಾಡಿದ್ದಾನ? ಅಥವಾ ಬೇರೆ ಬೇರೆ ಕಾರಣಗಗೆ ಕೊಲೆ ಮಾಡಿದ್ದಾನ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.