– ಬೆಳಗ್ಗೆ ಪೊಲೀಸರಿಗೆ ಶರಣಾದ ಆರೋಪಿ ಪತಿ
ಹಾಸನ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಮಲಗಿದ್ದ ಪತ್ನಿಯನ್ನು ಕೊಂದು ಪೊಲೀಸರಿಗೆ ಶರಣಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ನಯನ (32) ಕೊಲೆಯಾದ ಮಹಿಳೆ. ಹಾಸನದ ಎಸ್.ಎಂ.ಕೃಷ್ಣನಗರ ಬಡಾವಣೆಯ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಪತ್ನಿಯ ಮೇಲೆ ಅನುಮಾನಗೊಂಡು ಮನೆಯಲ್ಲಿಯೇ ಪತ್ನಿಯ ಕುತ್ತಿಗೆಯನ್ನು ವೇಲ್‍ನಿಂದ ಬಿಗಿದು ಆರೋಪಿ ಲೋಹಿತ್ ಕುಮಾರ್ ಕೊಲೆ ಮಾಡಿದ್ದಾನೆ.
ನಯನ ಮತ್ತು ಆರೋಪಿ ಲೋಹಿತ್ ಗೆ 16 ವರ್ಷಗಳ ಹಿಂದೆ ಮದುವೆಯಾಗಿತ್ತು. ಆರೋಪಿ ಮೂಲತಃ ಚಿತ್ರದುರ್ಗದವನಾಗಿದ್ದು, ಪತ್ನಿಯ ಜೊತೆ ಹಾಸನದಲ್ಲಿ ವಾಸಿಸುತ್ತಿದ್ದನು. ಈ ದಂಪತಿಗೆ ಐದು ವರ್ಷದ ಮಗುವಿದೆ.
ಆರೋಪಿ ಪತ್ನಿ ನಯನ ಮೇಲೆ ಅನುಮಾನ ಪಡುತ್ತಿದ್ದನು. ಈ ಬಗ್ಗೆ ಆಗಾಗ ಗಂಡ-ಹೆಂಡತಿ ಮಧ್ಯೆ ಜಗಳ ನಡೆಯುತ್ತಿತ್ತು. ಆದರೆ ಇಂದು ಮುಂಜಾನೆ ಪತ್ನಿ ಮತ್ತು ಮಗ ಮಲಗಿದ್ದಾಗ ಲೋಹಿತ್ ಕುಮಾರ್ ಪತ್ನಿಯ ಕುತ್ತಿಗೆಯನ್ನು ವೇಲ್‍ನಿಂದ ಬಿಗಿದು ಕೊಲೆ ಮಾಡಿದ್ದಾನೆ. ನಂತರ ತಾನೇ ಹೋಗಿ ಪೊಲೀಸರಿಗೆ ಶರಣಾಗಿದ್ದಾನೆ.
ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ, ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಘಟನೆ ಹಾಸನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.