– ಪತ್ನಿ ಕೊಲೆಗೈದು ಪೊಲೀಸ್ರಿಗೆ ಶರಣಾದ ಪತಿರಾಯ
ತುಮಕೂರು: ಪತ್ನಿಯಿಂದಲೇ ಪತ್ನಿ ಬರ್ಬರ ಹತ್ಯೆ ನಡೆದ ಘಟನೆಯೊಂದು ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣದಲ್ಲಿ ನಡೆದಿದೆ.
ಹಜರತ್ ಭಾನು(32) ಕೊಲೆಯಾದ ದುರ್ದೈವಿ. ಈಕೆ ಕ್ಷುಲ್ಲಕ ವಿಚಾರಕ್ಕೆ ಪತಿ ಚಾಂದ್‍ಪಾಷನಿಂದಲೇ ಹತ್ಯೆಯಾಗಿದ್ದಾಳೆ. ಪತ್ನಿಯನ್ನು ಕೊಲೆ ಮಾಡಿದ ಬಳಿಕ ಆರೋಪಿ ಪತಿ ನೇರವಾಗಿ ಠಾಣೆಗೆ ತೆರಳಿ ಪೊಲೀಸರ ಮುಂದೆ ಶರಣಾಗಿದ್ದಾನೆ.
ಚಾಂದ್‍ಪಾಷ ಹಾಗೂ ಹಜರತ್ ಭಾನು ಮಧ್ಯೆ ಸೈಟ್ ವಿಚಾರಕ್ಕೆ ಜಗಳ ನಡೆದಿತ್ತು. ಇದೇ ಕಾರಣದಿಂದ ಕೋಪೋದ್ರಿಕ್ತನಾಗಿದ್ದ ಪತಿ, ಹಜರತ್ ಭಾನು ಹಾಗೂ ಮಗ ಮೊಹಮ್ಮದ್ ಅಲಿ ಮಲಗಿದ್ದ ವೇಳೆ ದೊಣ್ಣೆಯಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಪರಿಣಾಮ ಹಜರತ್ ಭಾನು ಸ್ಥಳದಲ್ಲೇ ಸಾವನ್ನಪ್ಪಿದರೆ, ಮಗ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.