ಬೆಂಗಳೂರು: ಮಹಾಮಾರಿ ಕೊರೊನಾ ಇಂದು ರಾಜ್ಯದಲ್ಲಿ 16 ಜನರನ್ನು ಬಲಿ ಪಡೆದುಕೊಂಡಿದ್ದು, ಮರಣಕೇಕೆ ಮುಂದುವರಿಸಿದೆ. ರಾಜ್ಯದಲ್ಲಿ ಇಂದು 1,267 ಪ್ರಕರಣಗಳು ಬೆಳಕಿಗೆ ಬಂದಿದ್ದು, ಸೋಂಕಿತರ ಸಂಖ್ಯೆ 13,190ಕ್ಕೇರಿಕೆಯಾಗಿದೆ.
ಸಾವನ್ನಪ್ಪಿದವರ ವಿವರ:
ಬೆಂಗಳೂರಿನಲ್ಲಿ ನಾಲ್ವರು (ರೋಗಿ-8691, ರೋಗಿ-9014, ರೋಗಿ 9321 ರೋಗಿ-11,993) ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಧಾರವಾಡದ 71 ವರ್ಷದ ವೃದ್ಧೆ (ರೋಗಿ-6257), ಹಾಸನದ 60 ವರ್ಷದ ವೃದ್ಧೆ (ರೋಗಿ-7743), ಬಾಗಲಕೋಟೆಯ 50 ವರ್ಷದ ಪುರುಷ (ರೋಗಿ-12078), 55 ವರ್ಷದ ಪುರುಷ (ರೋಗಿ-10,642).
ದಕ್ಷಿಣ ಕನ್ನಡದ 51 ವರ್ಷದ ಮಹಿಳೆ (ರೋಗಿ 12398) 42 ವರ್ಷದ ಮಹಿಳೆ (ರೋಗಿ-11,386), ಮೈಸೂರಿನ 70 ವರ್ಷದ ವೃದ್ಧ (ರೋಗಿ 11,942), ತುಮಕೂರಿನ 76 ವರ್ಷದ ವೃದ್ಧೆ (ರೊಗಿ-11948), 40 ವರ್ಷದ ಪುರುಷ (ರೋಗಿ-11949), ಬಳ್ಳಾರಿಯ 57 ವರ್ಷದ ಪುರುಷ (ರೋಗಿ-12272), ಕಲಬುರಗಿಯ 65 ವರ್ಷದ ಪುರುಷ (ರೋಗಿ-12306).
ಇಂದು ಬಿಡುಗಡೆಯಾದ ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬೆಂಗಳೂರು ನಗರ 783, ದಕ್ಷಿಣ ಕನ್ನಡ 97, ಬಳ್ಳಾರಿ 71, ಉಡುಪಿ 40, ಕಲಬುರಗಿ 34, ಹಾಸನ 31, ಗದಗ 30, ಬೆಂಗಳೂರು ಗ್ರಾಮಾಂತರ 27, ಧಾರವಾಡ 18, ಮೈಸೂರು 18, ಬಾಗಲಕೋಟೆ 17, ಉತ್ತರ ಕನ್ನಡ 14, ಹಾವೇರಿ 12, ಕೋಲಾರ 11, ಬೆಳಗಾವಿ 8, ಬೀದರ್ 7, ಚಿತ್ರದುರ್ಗ 7, ರಾಯಚೂರು 6, ಮಂಡ್ಯ 6, ದಾವಣಗೆರೆ 6, ವಿಜಯಪುರ 5, ಶಿವಮೊಗ್ಗ 4, ಚಿಕ್ಕಬಳ್ಳಾಪುರ, ಕೊಪ್ಪಳ, ಚಿಕ್ಕಮಗಳೂರು, ಕೊಡಗು ತಲಾ ಮೂರು, ತುಮಕೂರು 2 ಮತ್ತು ಯಾದಗಿರಿಯಲ್ಲಿ ಒಂದು ಪ್ರಕರಣ ಬೆಳಕಿಗೆ ಬಂದಿವೆ.
ರಾಜ್ಯದಲ್ಲಿಂದು 1,267 ಕೊರೊನಾ ಪ್ರಕರಣ- ಬೆಂಗ್ಳೂರಿನಲ್ಲಿ 783 ಮಂದಿಗೆ ಸೋಂಕು
– ಕೊರೊನಾ ಹೊಡೆತಕ್ಕೆ ರಾಜಧಾನಿ ಗಢ ಗಢ
– ಡೆಡ್ಲಿ ವೈರಸ್ ಸುಳಿಯಲ್ಲಿ ಸಿಲಿಕಾನ್ ಸಿಟಿhttps://t.co/RTuFAlRxZf#CoronaVirus #COVID19 #Karnataka #Bengaluru
— PublicTV (@publictvnews) June 28, 2020