ಬೆಂಗಳೂರು : ನೀವು ಆರ್ಡರ್ ಮಾಡಿದ ಕೂಡಲೇ ನಿಮಗೆ ಇಷ್ಟವಾದ ಫುಡ್, ವಸ್ತುಗಳು ಮನೆ ಬಾಗಿಲಿಗೆ ಬರುತ್ತೆ. ಎಲ್ಲಾದ್ರೂ ಹೋಗಬೇಕು ಅಂದ್ರೆ ಬುಕ್ ಮಾಡಿದ ಎರಡು ದಿªನಿಮಿಷದಲ್ಲಿ ಕ್ಯಾಬ್ ನಿಮ್ಮ ಮನೆ ಬಾಗಿಲಿಗೆ ಬರುತ್ತೆ. ಇದೇ ರೀತಿಯ ಸೌಲಭ್ಯವನ್ನು ಕಲ್ಪಿಸೋಕೆ ಬಿಬಿಎಂಪಿ ಮುಂದಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಮನೆ ಬಾಗಿಲಿಗೆ ಶಾಲೆ ಬರಲಿದೆ.
Advertisement
ಕೂಲಿ ಕಾರ್ಮಿಕರು ಹೊಟ್ಟೆ ಪಾಡಿಗಾಗಿ ಊರು ಊರು ಅಂತಾ ಓಡಾಡ್ತಾ ಇರತ್ತಾರೆ. ಈ ಕೂಲಿ ಕಾರ್ಮಿಕರ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಸದ್ದುದೇಶದಿಂದ, ಬಿಬಿಎಂಪಿ ಮನೆ ಬಾಗಿಲಿಗೆ ಶಾಲೆ ಯೋಜನೆ ಜಾರಿಗೆ ತರಲು ಸಿದ್ಧತೆ ನಡೆಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕೊಳಗೇರಿ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಸಲುವಾಗಿ ಪಾಲಿಕೆ ಈ ಯೋಜನೆ ರೂಪಿಸುತ್ತಿದೆ. ಸ್ಲಂಗಳಲ್ಲಿರುವ ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು ಮನೆ ಬಾಗಿಲಿಗೆ ಶಾಲೆ ಎಂಬ ಪರಿಕಲ್ಪನೆಯಡಿ ಬಸ್ ಗಳನ್ನೇ ಶಾಲೆಯನ್ನಾಗಿ ಪರಿವರ್ತಿಸಿ ವಿದ್ಯಾಭ್ಯಾಸ ನೀಡಲು ಮುಂದಾಗಿದೆ.
Advertisement
Advertisement
ಈ ಸಂಬಂಧ ಬಿಎಂಟಿಸಿಯಿಂದ ಈಗಾಗಲೇ ಪಾಲಿಕೆಯು 10 ಬಸ್ ಗಳನ್ನು ಪಡೆದಿದ್ದು, ಬಸ್‍ಗಳಿಗೆ ಹೊಸ ರೂಪ ನೀಡಲಾಗಿದೆ. ಪಾಲಿಕೆ ವತಿಯಿಂದಲೇ ಶಿಕ್ಷಕರು ಹಾಗೂ ಚಾಲಕರನ್ನು ನೇಮಕ ಮಾಡಿ ಹೆಚ್ಚು ಮಕ್ಕಳಿರುವ ಕೊಳಗೇರಿ ಪ್ರದೇಶಗಳಿಗೆ ಬಸ್ ಗಳನ್ನು ಕಳುಹಿಸಿ ಪಾಠ ಕಲಿಸಲಾಗುತ್ತದೆ. ಈ ಕಾರ್ಯಕ್ಕೆ ಈಗಾಗಲೇ ಬಿಎಂಟಿಸಿ ಬಸ್ಸುಗಳು ಕೂಡ ಸಿದ್ಧಗೊಂಡಿವೆಂದು ಬಿಎಂಟಿಸಿ ನಿರ್ದೇಶಕರ ಕೆ ಸಂತೋಷ್ ಬಾಬು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.