ಲಕ್ನೋ: ಮನೆ ಕೆಲಸ ಮಾಡುವ ಮಹಿಳೆ ಮೇಲೆ ವ್ಯಕ್ತಿಯೊರ್ವ ಹಲ್ಲೆ ನಡೆಸಿ ಅತ್ಯಾಚಾರ ನಡೆಸಿರುವ ಘಟನೆ ಮೀರತ್ ಬಳಿಯ ಸರ್ಧಾನಾ ತಹಸಿಲ್ನ ಮೊಹಲ್ಲಾ ಘಾನ್ಶ್ಯಾಮ್ನಲ್ಲಿ ನಡೆದಿದೆ.
ವ್ಯಕ್ತಿ ಮನೆಯಿಂದ ತಪ್ಪಿಸಿಕೊಂಡು ಪೊಲೀಸ್ ಠಾಣೆಗೆ ತಲುಪಿದ ಮಹಿಳೆ, ತಾನು ಒಂಟಿಯಾಗಿ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ವ್ಯಕ್ತಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದು, ಅತ್ಯಾಚಾರವನ್ನು ವಿರೋಧಿಸಿದಾಗ ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಿದ್ದಾಳೆ.
Advertisement
Advertisement
ಈ ವಿಚಾರವಾಗಿ ತನಿಖೆ ನಡೆಸಿದ ಪೊಲೀಸರಿಗೆ ಮಹಿಳೆ ಪನ್ವಾರಿಯಲ್ಲಿರುವ ತನ್ನ ಸೋದರ ಮಾವನ ಮನೆಯಲ್ಲಿ ವಾಸಿಸುತ್ತಿದ್ದು, ಉದ್ಯೋಗಕ್ಕಾಗಿ ಹುಡುಕುತ್ತಿದ್ದೆ. ಈ ವೇಳೆ ಪ್ರತಿದಿನ ತನ್ನ ಸೋದರ ಮಾವನ ಮನೆಗೆ ಬರುತ್ತಿದ್ದ ಯುವಕ ಅವನ ಮನೆಯಲ್ಲಿ ಕೆಲಸ ಮಾಡುವುದಾಗಿ ಹೇಳಿದ್ದನು. ಹಾಗಾಗಿ ಯುವಕನ ಮನೆಯಲ್ಲಿ ಕೆಲಸ ಮಾಡುವುದಾಗಿ ಒಪ್ಪಿಕೊಂಡಿದ್ದೆ.
Advertisement
ಫೆಬ್ರವರಿ 4ರಂದು ಯುವಕ ಮತ್ತು ಆತನ ತಾಯಿ ಕೆಲಸದ ಮೇಲೆ ಹೊರಗೆ ಹೋಗಿದ್ದ ವೇಳೆ ತಾನು ಮನೆಯಲ್ಲಿ ಒಂಟಿಯಾಗಿ ಕೆಲಸ ಮಾಡುತ್ತಿರುವುದನ್ನು ತಿಳಿದ ಯುವಕನ ತಂದೆ ತನ್ನನ್ನು ಕೋಣೆಗೆ ಎಳೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ತಾನು ಅತ್ಯಾಚಾರವನ್ನು ವಿರೋಧಿಸಿದಾಗ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವಿಚಾರವಾಗಿ ಯುವಕ ಮತ್ತು ಆತನ ತಾಯಿ ಬಳಿ ವಿವರಿಸಿದಾಗ ಅವರು ಯಾರ ಬಳಿ ವಿಚಾರ ಬಹಿರಂಗ ಮಾಡಬೇಡ ಎಂದು ಹೇಳಿ ತನ್ನ ಬಳಿ ಇದ್ದ ಮೊಬೈಲ್ನನ್ನು ವಶ ಪಡಿಸಿಕೊಂಡಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾಳೆ.
Advertisement
ಇದೀಗ ಘಟನೆ ಕುರಿತಂತೆ ಪೊಲೀಸರು ಐಪಿಸಿ ಸೆಕ್ಷನ್ 376(ಅತ್ಯಾಚಾರ) ಸೇರಿದಂತೆ ಹಲವು ಸೆಕ್ಷನ್ಗಳ ಅಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಮತ್ತು ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.