ಹಾವೇರಿ: ಮೀಸಲಾತಿ ನಿಮ್ಮಪ್ಪನ ಮನೆ ಆಸ್ತಿಯಲ್ಲ. ನಾವು ನಿಮ್ಮಪ್ಪನ ಮನೆ ಆಸ್ತಿ ಕೇಳ್ತಿಲ್ಲ. ಮೀಸಲಾತಿ ನಮ್ಮ ಸಂವಿಧಾನಬದ್ಧ ಹಕ್ಕು. ಮೀಸಲಾತಿ ವಿಚಾರದಲ್ಲಿ ನಮ್ಮ ಕಿವಿಗೆ ಹೂವು ಇಡ್ತಿದ್ದಾರೆ. ಇನ್ಮುಂದೆ ಕಿವಿಗೆ ಹೂವು ಇಡಲು ಬಂದ್ರೆ ನಾವು ನಿಮ್ಮ ಕೆಳಗೆ ಹೂವು ಇಡ್ತೀವಿ ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಹಾವೇರಿಯಲ್ಲಿ ಮಾತನಾಡಿದ ಅವರು ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಮೀಸಲಾತಿ ಹೆಚ್ಚಳ ಮಾಡ್ತೀನಿ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದರು. ಚುನಾವಣೆ ಬಂದಾಗ ಮೀಸಲಾತಿ ಹೆಚ್ಚಳದ ಮಾತು ಬರುತ್ತೆ. ನಾವು ಹೋರಾಟ ಕೈಗೆತ್ತಿಕೊಂಡ್ರೆ ನಿಮ್ಮ ಅಸ್ತಿತ್ವಕ್ಕೆ ಧಕ್ಕೆ ಬರೋದು ಗ್ಯಾರಂಟಿ. ವಾಲ್ಮೀಕಿ ಸಮಾಜವನ್ನ ಎಬ್ಬಿಸೋದು ಕಷ್ಟ, ಸಮಾಜ ಎದ್ದರೆ ಹಿಡಿಯಲು ನಿಮಗೆ ಆಗೋದಿಲ್ಲ. ನಮ್ಮೆಲ್ಲರ ಶಾಪದಿಂದ ಸಮ್ಮಿಶ್ರ ಸರ್ಕಾರ ಬಿದ್ದು ಹೋಯಿತು. ಬೇಡರ ಶಾಪ ತಟ್ಟಿ ಸಮ್ಮಿಶ್ರ ಸರ್ಕಾರ ಅಧಿಕಾರ ಕಳೆದುಕೊಂಡಿತು ಎಂದರು.
Advertisement
Advertisement
ಕೂಡಲೇ ಸಿಎಂ ಯಡಿಯೂರಪ್ಪ ಕ್ಯಾಬಿನೆಟ್ ಸಭೆ ಕರೆದು ಮೀಸಲಾತಿ ಕುರಿತ ವರದಿ ಅನುಷ್ಠಾನ ತರುವಂತೆ ಒತ್ತಾಯಿಸಿದರು. ಅಕ್ಟೋಬರ್ 21ರಿಂದ ಪರಿಶಿಷ್ಟ ಪಂಗಡಕ್ಕೆ 7.5 ಮೀಸಲಾತಿ ಜಾರಿಗಾಗಿ ಬೆಂಗಳೂರಿನಲ್ಲಿ ಅಕ್ಟೋಬರ್ 31ರವರೆಗೆ ಒಬ್ಬನೇ ಧರಣಿ ಕೂರುತ್ತೇವೆ ಎಂದರು.
Advertisement