ಚೆನ್ನೈ: ಮನೆಯೊಳಗೆ ಮಲಗಿದ್ದ 8 ತಿಂಗಳ ಮಗುವನ್ನು ಮಂಗವೊಂದು ಎಳೆದೊಯ್ದ ಘಟನೆ ತಮಿಳುನಾಡಿನ ತಂಜಾಪೂರಿನಲ್ಲಿ ನಡೆದಿದೆ.
ಮಂಗಗಳು ಈ ಭಾಗದಲ್ಲಿ ಹೆಚ್ಚಾಗಿವೆ. ಇಷ್ಟು ದಿನ ಮನೆಯೊಳಗೆ ನುಗ್ಗಿ ಆಹಾರ ಪದಾರ್ಥಗಳನ್ನು ತೆಗೆದುಕೊಂಡು ಹೋಗುತ್ತಿದ್ದವು. ಆದರೆ ಇದೀಗ ಮಂಗನಿಂದ ಒಂದು ಹಸೂಗೂಸಿನ ಪ್ರಾಣ ಹೋಗಿದೆ.
ಮೇಲ್ಚಾವಣಿ ತೆರೆದು ಮನೆಯೊಳಕ್ಕೆ ನುಗ್ಗಿಬಂದಿರುವ ಮಂಗ ಮಲಗಿರುವ ಮಗುವನ್ನು ಎತ್ತಿಕೊಂಡು ಹೋಗಿದೆ. ಆಗ ಮಗು ಅಳಲು ಪ್ರಾರಂಭಿಸಿದೆ. ಅಳುವಿನ ಶಬ್ಧವನ್ನು ಕೇಳಿ ತಾಯಿದ ಓಡಿಬಂದಿದ್ದಾರೆ. ಅದಾಗಲೇ ಮಗುವನ್ನು ಎತ್ತಿಕೊಂಡು ಮಂಗ ಪರಾರಿಯಾಗಿತ್ತು.
ತಾಯಿ ಜೋರಾಗಿ ಅಳಲು ಪ್ರಾರಂಭಿಸಿದ್ದಾಳೆ. ಅಕ್ಕಪಕ್ಕದವರು ಬಂದು ಜೋರಾಗಿ ಗಲಾಟೆ ಮಾಡಿದ್ದಾರೆ. ಈ ವೇಳೆ ಭಯಗೊಂಡಿರುವ ಮಂಗ ಮಗುವನ್ನು ಅಲ್ಲಿಯೇ ಎಸೆದುಹೋಗಿದೆ. ಮಗುವನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮಗು ಸಾವನ್ನಪ್ಪಿತ್ತು. ಈ ಘಟನೆಯಿಂದಾಗಿ ಜನರು ಭಯಭೀತರಾಗಿದ್ದಾರೆ.