– 50 ರೂ.ಗೆ ಪೇಂಟಿಂಗ್ ಮಾರಿ ಜೀವನ ಸಾಗಿಸುತ್ತಿರುವ ವೃದ್ಧ
ಕೋಲ್ಕತ್ತಾ: ಇತ್ತೀಚೆಗೆ ಬಾಬಾ ಕಾ ಢಾಬಾ ಕುರಿತು ಸುದ್ದಿ ವೈರಲ್ ಆಗಿತ್ತು. ಇದೀಗ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಅಂತಹದ್ದೇ ಪ್ರಕರಣ ನಡೆದಿದ್ದು, ಮಕ್ಕಳು ಮನೆಯಿಂದ ಹೊರ ಹಾಕಿದ್ದಕ್ಕೆ 80 ವರ್ಷದ ವೃದ್ಧ 50-100 ರೂ.ಗೆ ತಾನು ಮಾಡಿದ ಪೇಂಟಿಂಗ್ ಮಾರಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಅವರಿಗೆ ಗ್ರಾಹಕರ ಕೊರತೆ ಕಾಡುತ್ತಿದೆ. ಹೀಗಾಗಿ ನೆಟ್ಟಿಗರು ಈ ಕುರಿತು ಬೆಳಕು ಚೆಲ್ಲಿದ್ದಾರೆ.
This is an artist, Sunil Pal. He sells his paintings in Kolkata, Gol Park near Axis bank. He is in his 80’s & has been abandoned by children. He’s struggling to have customers. His work cost only around 50-100 Rs.
Please buy paintings. Help him so that he can earn some money pic.twitter.com/O4usEFLD3l
— Aarif Shah (@aarifshaah) November 7, 2020
Advertisement
ಕಲಾವಿದರಾದ ಸುನಿಲ್ ಪಾಲ್ ಅವರಿಗೆ 80 ವರ್ಷ ವಯಸ್ಸಾಗಿದ್ದು, ತಮ್ಮ ಸುಂದರವಾದ ಪೇಂಟಿಂಗ್‍ಗಳೊಂದಿಗೆ ಕೋಲ್ಕತ್ತಾದ ಗೋಲ್ ಪಾರ್ಕ್ ಬಳಿಯ ಗರಿಯಾಹತ್ ರಸ್ತೆಯ ಆಕ್ಸಿಸ್ ಬ್ಯಾಂಕ್ ಬಳಿ ಕುಳಿತಿರುತ್ತಾರೆ. ತಾವೇ ರಚಿಸಿದ ಪೇಂಟಿಂಗ್‍ಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿರುವ ಸುನಿಲ್ ಪಾಲ್ ಅವರು, ಗ್ರಾಹಕರಿಲ್ಲದೆ ಕಷ್ಟ ಅನುಭವಿಸುತ್ತಿದ್ದಾರೆ. ಇದನ್ನು ಕಂಡ ನೆಟ್ಟಿಗರು ಅವರ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಅಲ್ಲದೆ ಅವರ ಬಳಿ ಪೇಂಟಿಂಗ್ ಕೊಳ್ಳುವಂತೆ ಮನವಿ ಮಾಡಿದ್ದಾರೆ.
Advertisement
Advertisement
ಸುನಿಲ್ ಪಾಲ್ ಅವರ ಬಳಿ ಅತ್ಯದ್ಭುತ ಪೇಂಟಿಂಗ್ ಕಲೆ ಇದ್ದು, ಇದೇ ಚಿತ್ರಗಳನ್ನು ಬೇರೆಡೆ ಮಾರಿದರೆ ಸಾವಿರಾರು ರೂಪಾಯಿ ಸಂಪಾದಿಸಬಹುದು. ಆದರೆ ಸೂಕ್ತ ಮಾರುಕಟ್ಟೆ ಸಿಗದೆ ಸುನಿಲ್ ಅವರು ರಸ್ತೆ ಬದಿ ಮಾರಾಟ ಮಾಡುತ್ತಿದ್ದಾರೆ. ಅದೂ ಸಹ ಕೇವಲ 50-100 ರೂ.ಗೆ ಮಾರುತ್ತಿದ್ದು, ಇಷ್ಟಾದರೂ ಯಾರೂ ಕೊಳ್ಳುತ್ತಿಲ್ಲ. ಅವರು ತುತ್ತು ಅನ್ನಕ್ಕೂ ಪರದಾಡುವಂತಾಗಿದೆ.
Advertisement
View this post on Instagram
ಪಾಲ್ ಅವರನ್ನು ಮಕ್ಕಳು ಮನೆಯಿಂದ ಹೊರ ಹಾಕಿದ್ದಾರೆ. ಮನೆಯಿಂದ ಹೊರ ಬಂದ ಬಳಿಕ ಹತಿ ಬಗಾನ್‍ನಲ್ಲಿ ವಾಸಿಸುತ್ತಿದ್ದಾರೆ. ಅಲ್ಲದೆ ಅವರೇ ರಚಿಸಿದ ಪೇಂಟಿಂಗ್‍ಗಳನ್ನು ರಸ್ತೆ ಬದಿಯಲ್ಲಿ ಮಾರಾಟ ಮಾಡುತ್ತಿದ್ದಾರೆ. ದಯವಿಟ್ಟು ಯಾರಾದರೂ ಈ ವೃದ್ಧಗೆ ಸಹಾಯ ಮಾಡಿ, ಬುಧವಾರ ಹಾಗೂ ಶನಿವಾರ ಇವರು ಗೋಲ್ ಪಾರ್ಕ್ ಬಳಿ ಕುಳಿತಿರುತ್ತಾರೆ ಎಂದು ಜಾಲತಾಣದಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.
Thank you somuch for Sharing.I will definitely buy from him next time .
— আয়ান স্পার্টান (@AyanRonchi) November 9, 2020
ಜಾಲತಾಣಗಳಲ್ಲಿ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಹಲವರು ಕಮೆಂಟ್ ಮಾಡುತ್ತಿದ್ದು, ಖಂಡಿತವಾಗಿಯೂ ನಾವು ಅವರನ್ನು ಭೇಟಿಯಾಗುತ್ತೇವೆ. ಪೇಂಟಿಂಗ್ಸ್ ಕೊಳ್ಳುವ ಮೂಲಕ ಅವರಿಗೆ ಸಹಾಯ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ.