ಮನೆಗೆ ನುಗ್ಗಿ ಕತ್ತು ಕೊಯ್ದು ದಂತ ವೈದ್ಯೆಯ ಬರ್ಬರ ಹತ್ಯೆ

Public TV
1 Min Read
UP Doctor Murder 3

– ಎಂಟು ವರ್ಷದ ಮಗಳ ಮಂದೆಯೇ ಅಮ್ಮನ ಕೊಲೆ
– ಕೇಬಲ್ ಆಪರೇಟರ್ ಗಳ ಹೆಸರಲ್ಲಿ ಮನೆಗೆ ಎಂಟ್ರಿ
– ಅಪಾಯದಿಂದ ಪಾರಾದ ವೈದ್ಯೆಯ ಮಕ್ಕಳು

ಲಕ್ನೋ: ಮನೆಗೆ ನುಗ್ಗಿದ ಕಿರಾತಕ ದಂತ ವೈದ್ಯೆಯ ಕತ್ತು ಸೀಳಿ ಕೊಲೆಗೈದಿರುವ ಭಯಾನಕ ಘಟನೆ ಉತ್ತರ ಪ್ರದೇಶದ ಆಗ್ರಾದ ಕಾವೇರಿ ಕುಂಜ್ ಕಾಲೋನಿಯಲ್ಲಿ ಶುಕ್ರವಾರ ನಡೆದಿದೆ. ಆರೋಪಿಯ ಸಂಪೂರ್ಣ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

UP Doctor Murder 1

ಡಾ. ನಿಶಾ ಸಿಂಘಾಲ್ ಕೊಲೆಯಾದ ದಂತ ವೈದ್ಯೆ. ಮಹಿಳೆಯ ಎಂಟು ವರ್ಷದ ಪುತ್ರಿ ಅನಿಶಾ ಮತ್ತು ನಾಲ್ಕು ವರ್ಷದ ಪುತ್ರ ಅದ್ವಯ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಿಶಾ ಅವರ ಕೊಲೆಯಾದ ಮಕ್ಕಳು ಮತ್ತೊಂದು ಕೋಣೆಯಲ್ಲಿ ಆಟವಾಡುತ್ತಿದ್ದರು. ಆರೋಪಿ ಮಕ್ಕಳ ಮೇಲೆಯೂ ಹಲ್ಲೆ ನಡೆಸಿದ್ದು, ಆದ್ರೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಇಂದು ಬೆಳಗ್ಗೆ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

UP Police

ನಿಶಾ ಪತಿ ಸಹ ವೈದ್ಯರಾಗಿದ್ದು ದಾಳಿ ವೇಳೆ ಆಸ್ಪತ್ರೆಯಲ್ಲಿದ್ದರು. ಆರೋಪಿ ದರೋಡೆಯ ಸಂಚು ರೂಪಿಸಿ ಕೇಬಲ್ ಟೆಕ್ನಿಷಿಯನ್ ಅಂತ ಹೇಳಿಕೊಂಡು ಮನೆಗೆ ಬಂದಿದ್ದಾನೆ. ಮನೆಯಲ್ಲಿದ್ದ ನಿಶಾ ಅವರ ಕತ್ತು ಸೀಳಿ ಕೊಲೆಗೈದು ಮಕ್ಕಳ ಮೇಲೆ ಹಲ್ಲೆ ನಡೆಸಿ ಸುಮಾರು ಒಂದು ಗಂಟೆಯ ಬಳಿಕ ಮನೆಯಿಂದ ಹೊರ ಹೋಗಿದ್ದಾನೆ.

UP Doctor Murder 4

ಮನೆಗೆ ಬಂದಿದ್ದ ಆ ಅಂಕಲ್ ರಕ್ತಮಯವಾದ ಚಾಕು ಹಿಡಿದು ನನ್ನ ಬಳಿ ಬಂದಿದ್ದನು. ತಮ್ಮ ಅದ್ವಯ್ ಜೋರಾಗಿ ಅಳಲು ಆರಂಭಿಸಿದನು. ಸುಮ್ಮನಿರಿ, ಇಲ್ಲವಾದ್ರೆ ಅಮ್ಮನ ರೀತಿ ನಿಮ್ಮನ್ನು ಕೊಲ್ಲುತ್ತೇನೆ ಎಂದು ಕತ್ತಿನ ಭಾಗದಲ್ಲಿ ಚಾಕು ಇಟ್ಟಿದ್ದನು. ತಮ್ಮ ಜೋರಾಗಿ ಅತ್ತಿದ್ದರಿಂದ ಚಾಕು ಜೋರಾಗಿ ಒತ್ತಿದ. ಹಾಗಾಗಿ ಕತ್ತಿನ ಭಾಗದಲ್ಲಿ ರಕ್ತ ಬಂತು ಎಂದು ವೈದ್ಯ ಪುತ್ರಿ ಅನಿಶಾ ಪೊಲೀಸರ ಮುಂದೆ ತನ್ನ ಹೇಳಿಕೆ ದಾಖಲಿಸಿದ್ದಾಳೆ.

Share This Article
Leave a Comment

Leave a Reply

Your email address will not be published. Required fields are marked *