ಕಲಬುರಗಿ: ಮನೆಗಳ್ಳನನ್ನ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಮಹೇಶ್ ಚಿಡರಗುಂಪಿ (38) ಕೊಲೆಯಾದ ದುರ್ದೈವಿಯಾಗಿದ್ದಾನೆ. ಕಳೆದ ರಾತ್ರಿ ನಗರದ ಹೊರವಲಯದ ಕೆರೆ ಭೋಸಗಾ ಕ್ರಾಸ್ ಬಳಿ ಶವ ಪತ್ತೆಯಾಗಿದೆ. ಹಳೆ ದ್ವೇಷ ಹಿನ್ನಲೆ ಯಾರೋ ದುಷ್ಕರ್ಮಿಗಳು ಆತನನ್ನು ಮನಬಂದಂತೆ ಥಳಿಸಿ ನಂತರ ಚಾಕುವಿನಿಂದ ಇರಿದು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಮನೆ ಬಿಟ್ಟು ಹೋದ ಪತ್ನಿ- ನೇಣಿಗೆ ಶರಣಾದ ಪತಿ
ಈತ ನಗರದಲ್ಲಿ ಹಾಡುಹಗಲೇ ಮನೆಗಳ್ಳತನ ಮಾಡುವುದರಲ್ಲಿ ನಿಸ್ಸೀಮನಾಗಿದ್ದನು ಅಲ್ಲದೆ ಈತನಿಗೆ ಜೈಲೇ ಮನೆಯಾಗಿತ್ತು. ಕಳೆದ ಎರಡು ದಿನಗಳ ಹಿಂದಷ್ಟೆ ಜೈಲಿನಿಂದ ಹೊರ ಬಂದಿದ್ದ ಮನೆಗೆ ಹೋಗಿರಲಿಲ್ಲ. ಈತನ ಮೇಲೆ ಕಲಬುರಗಿ ನಗರದ ಬಹುತೇಕ ಎಲ್ಲಾ ಠಾಣೆಗಳಲ್ಲೂ ಈತನ ವಿರುದ್ಧ ಕಳ್ಳತನದ ಕೇಸ್ ದಾಖಲಾಗಿವೆ. ಮಹೇಶ್ ಕೊಲೆಗೆ ಕಾರಣ, ಕೊಲೆಗಾರರು ಯಾರು ಎನ್ನುವುದು ಇನ್ನೂ ನಿಗೂಢವಾಗಿದ್ದು, ಕಲಬುರಗಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.