ಮನೆಕೆಲಸದಾಕೆಗೆ ಹಿಂಸೆ ನೀಡಿ ಕೊಂದ ಒಡತಿ ಜೈಲು ಪಾಲು

Public TV
1 Min Read
domestic worker crime

– ಊಟ ಕೊಡದೆ, ಗುದ್ದಿ, ಕಟ್ಟಿಹಾಕಿ ಚಿತ್ರಹಿಂಸೆ
– ಕಸದ ಬುಟ್ಟಿಯಲ್ಲಿದ್ದ ಆಹಾರವನ್ನು ತಿನ್ನುತ್ತಿದ್ದ ಮಹಿಳೆ

ಸಿಂಗಪುರ್: ಮನೆಕೆಲಸದಾಕೆಗೆ ಮನೆ ಒಡತಿ ಊಟನೀಡದೆ ಇರುದವುದುದು, ಕಾಲಲ್ಲಿ ಹಾಕಿ ತುಳಿಯುವುದು, ಗುದ್ದುವುದು ಹೀಗೆ ಚಿತ್ರಹಿಂಸೆ ನೀಡಿಕೊಂದ ಘಟನೆ ಸಿಂಗಪುರ್‍ನಲ್ಲಿ ನಡೆದಿದೆ.

ಪಿಯಾಂಗ್ ನಾ ಡಾನ್(40) ಮೃತ ಮಹಿಳೆಯಾಗಿದ್ದಾಳೆ. ತನ್ನ 3 ವರ್ಷದ ಮಗುವನ್ನು ಬೆಳಸುವ ಸಲುವಾಗಿ ಮ್ಯಾನ್ಮಾರ್ ನಿಂದ ಸಿಂಗಪುರಕ್ಕೆ ಬಂದು ಮನೆಕೆಲಸ ಮಾಡುತ್ತಿದ್ದಳು. ಒಡತಿ ಗಾಯತ್ರಿ ಮುರುಗಯನ್(24) ಕೆಲಸದಾಕೆಗೆ ಹಿಂಸೆ ನೀಡಿ ಕೊಂದು ಜೈಲು ಸೇರಿದ್ದಾಳೆ.

domestic worker crime1

ಗಾಯತ್ರಿ ಮನೆಕೆಲಸಕ್ಕೆ ಒಬ್ಬ ಮಹಿಳೆಯನ್ನು ತೆಗೆದುಕೊಂಡಿದ್ದಳು. ಪಿಯಾಂಗ್ ಅಚ್ಚುಕಟ್ಟಾಗಿ ಮನೆಕೆಲಸವನ್ನು ಮಾಡಿಕೊಂಡುಹೋಗುತ್ತಿದ್ದಳು. ಆದರೆ 5 ತಿಂಗಳ ನಂತರ ಗಾಯತ್ರಿ ಆಕೆಗೆ ಹಿಂಸೆ ನೀಡಲು ಪ್ರಾರಂಭಿಸಿದಳು. ಊಟಕೊಡದೆ ಇರುವುದು, ಗುದ್ದುವುದು, ಕಾಲಲ್ಲಿ ಹಾಕಿ ತುಳಿಯುವುದು, ಕಸದ ಬುಟ್ಟಿಯಲ್ಲಿದ್ದ ಆಹಾರವನ್ನು ಹೆಕ್ಕಿ ತಿನ್ನುವಂತೆ ಮಾಡುತ್ತಿದ್ದಳು. ಈಕೆ ನೀಡುತ್ತಿದ್ದ ಹಿಂಸೆಯನ್ನು ಸಹಿಸಿಕೊಂಡು ಪಿಯಂಗ್ ಕೆಲಸ ಮಾಡಿಕೊಂಡು ಹೋಗುತ್ತಿದ್ದಳು.

domestic worker crime3

ಆದರೆ ದಿನ ಕಳೆದಂತೆ ಈಕೆ ನೀಡುವ ಹಿಂಸೆ ಹೆಚ್ಚಾಗ ತೊಡಗಿತ್ತು. ಗಾಯತ್ರಿ ನೀಡುತ್ತಿದ್ದ ಕಿರುಕುಳಕ್ಕೆ ಪಿಯಾಂಗ್ ದೇಹದ ತೂಕ 24 ಕೆಜಿ ಬಂದು ತಲುಪಿತ್ತು. ಒಂದು ದಿನ ಗಾಯತ್ರಿ ಮೆದುಳಿಗೆ ಹಾಗೂ ಕುತ್ತಿಗೆಗೆ ತೀವ್ರವಾಗಿ ಗಾಯ ಮಾಡಿ ಊಟ ನೀಡದೆ ಕಿಟಕಿಗೆ ಕಟ್ಟಿ ಹಾಕಿದ್ದಾಳೆ. ಈ ನೋವನ್ನು ತಾಳಲಾರದೆ ಪಿಯಾಂಗ್ ನೆರಳಿ ಪ್ರಾಣ ಬಿಟ್ಟಿದ್ದಾಳೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Police Jeep

ಈ ವಿಚಾರವಾಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಗಾಯತ್ರಿ ವಿರುದ್ಧ 87 ಆರೋಪಗಳು ಕೇಳಿ ಬಂದಿವೆ. ಆದರೆ 28 ಆರೋಪಗಳನ್ನು ಗಾಯಿತ್ರಿ ಒಪ್ಪಿಕೊಂಡಿದ್ದಾಳೆ. ಈಕೆಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *