ಅಹ್ಮದಾಬಾದ್: ಬಹುತೇಕರು ಸಪ್ಪೆ ಮುಖದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ಮುಖದ ತುಂಬ ನಗುವಿನೊಂದಿಗೆ ತೆರಳಿ, ಸಿಕ್ಕಾಪಟ್ಟೆ ನಗುತ್ತಲೇ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
Advertisement
ಗುಜರಾತ್‍ನ ಅಹ್ಮದಾಬಾದ್‍ನಲ್ಲಿರುವ ಶಬರಮತಿ ನದಿಗೆ ಜಿಗಿದು ಆಯೇಶಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನದಿಗೆ ಹಾರುವುದಕ್ಕೂ ಮುನ್ನ ಮಹಿಳೆ ವೀಡಿಯೋ ಮೂಲಕ ಜಗತ್ತಿಗೆ ಕಡೆಯ ಸಂದೇಶ ನೀಡಿದ್ದು, ನಾನು ಒತ್ತಡದಿಂದಾಗಿ ಈ ರೀತಿ ಮಾಡುತ್ತಿಲ್ಲ, ಅಲ್ಲಾನೆಡೆಗೆ ತೆರಳಲು ಸಂತೋಷದಿಂದ ತೆರಳುತ್ತಿದ್ದೇನೆ ಎಂದು ಹೇಳಿದ್ದಾರೆ. ರೆಕಾರ್ಡ್ ಮಾಡಿದ ವೀಡಿಯೋವನ್ನು ಅವರ ಕುಟುಂಬಸ್ಥರಿಗೆ ಕಳುಹಿಸಿದ್ದಾಳೆ. ಬಳಿಕ ಸೇತುವೆ ಮೇಲಿಂದ ನದಿಗೆ ಜಿಗಿದಿದ್ದಾಳೆ.
Advertisement
Advertisement
ತಕ್ಷಣವೇ ಈ ವಿಡಿಯೋವನ್ನು ಕುಟುಂಬಸ್ಥರು ಗಮನಿಸಿದ್ದು, ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಷ್ಟೊತ್ತಿಗಾಗಲೇ ಮಹಿಳೆ ನದಿಗೆ ಹಾರಿದ್ದಳು. ಅಗ್ನಿಶಾಮಕ ಸಿಬ್ಬಂದಿ ಹಾಗೂ ರಕ್ಷಣಾ ತಂಡ ಕಾರ್ಯಾಚರಣೆ ನಡೆಸಿ ಆಯೇಶಾಳ ದೇಹವನ್ನು ನದಿಯಿಂದ ತೆಗೆದಿದ್ದಾರೆ.
Advertisement
ವೀಡಿಯೋದಲ್ಲಿ ಏನು ಹೇಳಿದ್ದಾಳೆ?
ನಮಸ್ಕಾರ, ನನ್ನ ಹೆಸರು ಆಯೇಶಾ ಆರಿಫ್ ಖಾನ್, ನಾನೂ ಸ್ವ ಇಚ್ಛೆಯಿಂದಲೇ ಈ ಕೆಲಸ ಮಾಡುತ್ತಿದ್ದೇನೆ. ನನ್ನ ಮೇಲೆ ಯಾವುದೇ ಒತ್ತಡ ಇಲ್ಲ. ಈಗ ನಾನು ಏನು ಹೇಳುತ್ತಿದ್ದೇನೆ ಎಂದರೆ, ಅಲ್ಲಾ ನೀಡಿದ ಜೀವನವು ದೀರ್ಘಾವಧಿಯದ್ದಾಗಿದೆ. ಈ ಸಣ್ಣ ಜೀವವನ್ನು ನಾನು ತುಂಬಾ ಶಾಂತಿಯುತವಾಗಿ ಕಳೆದಿದ್ದೇನೆ ಎಂದು ತಿಳಿಯಿರಿ. ಅಪ್ಪಾ ನೀವು ಎಲ್ಲಿಯವರೆಗೆ ಹೋರಾಡುತ್ತೀರಿ, ಪ್ರಕರಣವನ್ನು ಹಿಂಪಡೆಯಿರಿ ಎಂದು ಕೇಳಿಕೊಂಡಿದ್ದಾಳೆ.
ನಾನು ಇದನ್ನು ಮತ್ತೆಂದೂ ಮಾಡಲ್ಲ, ಆಯೇಶಾ ಯುದ್ಧಗಳನ್ನು ಮಾಡಿಲ್ಲ, ನಾನು ಆರಿಫ್‍ನನ್ನು ಪ್ರೀತಿಸುತ್ತೇನೆ. ಹೀಗಾಗಿ ಯಾಕೆ ತೊಂದರೆ ನೀಡಲಿ, ಅವನು ಸ್ವಾತಂತ್ರ್ಯ ಬಯಸಿದ್ದಾನೆ, ಸ್ವತಂತ್ರನಾಗಿರಬೇಕು. ಹೇಗೂ ನನ್ನ ಜೀವನ ಇಲ್ಲಿ ಕೊನೆಗೊಳ್ಳುತ್ತಿದೆ. ನಾನು ಅಲ್ಲಾನನ್ನು ಭೇಟಿಯಾಗುತ್ತಿರುವುದಕ್ಕೆ ಸಂತೋಷವಿದೆ. ನಾನು ಎಲ್ಲಿ ತಪ್ಪು ಮಾಡಿದ್ದೇನೆ ಎಂದು ಅವನನ್ನು ಕೇಳುತ್ತೇನೆ. ನನ್ನ ತಪ್ಪಾದರೂ ಏನು? ನನ್ನ ಹೆತ್ತವರು ತುಂಬಾ ಒಳ್ಳೆಯವರು, ಸ್ನೇಹಿತರು ತುಂಬಾ ಒಳ್ಳೆಯವರು. ಆದರೆ ನನ್ನಲ್ಲೇ ಏನೋ ಕೊರತೆ ಇದೆ, ಅದೃಷ್ಟ ಸರಿ ಇಲ್ಲ. ನಾನು ಸಂತೋಷವಾಗಿದ್ದೇನೆ. ಶಾಂತಿಯುತವಾಗಿ ಹೋಗುತ್ತೇನೆ. ಮನುಷ್ಯರ ಮುಖಗಳನ್ನು ಇನ್ನೆಂದೂ ನನಗೆ ತೋರಿಸದಂತೆ ಅಲ್ಲಾನನ್ನು ಪ್ರಾರ್ಥಿಸುತ್ತೇನೆ ಎಂದು ಹೇಳಿ ಜಿಗಿದ್ದಾಳೆ.