ಬಿಗ್‍ಬಾಸ್ ಮನೆಯ ಪ್ರೇಮ ಪಕ್ಷಿಗಳಾದ ದಿವ್ಯಾ ಅರವಿಂದ್ ಇಬ್ಬರು ಒಟ್ಟಿಗೆ ಕುಳಿತು ತಮ್ಮ ಜೀವನದ ಕುರಿತಾಗಿ ಮಾತನಾಡಿಕೊಳ್ಳುತ್ತಿದ್ದಾರೆ. ಬಿಗ್‍ಬಾಸ್ ಮನೆಯ ಹೊರಗಿನ ಜೀವನ ಕುರಿತಾಗಿ ಪರಸ್ಪರ ತಮ್ಮ ಅಭಿಪ್ರಾಯಗಳ ಕುರಿತಾಗಿ ಮಾತನಾಡಿಕೊಂಡಿದ್ದಾರೆ.
ನನ್ನ ವಯಸ್ಸು 35 ಎಂದು ಅರವಿಂದ್ ದಿವ್ಯಾ ಬಳಿ ಹೇಳುವಾಗ ದಿವ್ಯಾ ನನೆಗ ಗೊತ್ತು ನಿಮ್ಮ ಬಗ್ಗೆ ಸ್ಪಲ್ಪ ಗೊತ್ತು ನನಗೆ ನಿಮ್ಮ ಸ್ಕೂಲ್, ಪ್ಯಾಮಿಲಿ ಎಲ್ಲಾ ಸ್ಪಲ್ಪ ಗೊತ್ತು ಎಂದು ದಿವ್ಯಾ ಹೇಳಿದ್ದಾರೆ. ಎಲ್ಲಾ ಗೊತ್ತಿರ ಬೇಕು ಎಂದು ನನಗೆ ಅನ್ನಿಸುತ್ತದೆ. ಆಗ ಇಬ್ಬರಿಗೂ ಒಳ್ಳೆಯದು ಆಗುತ್ತದೆ. ಇಬ್ಬರು ಚೆನ್ನಾಗಿರಬೇಕು ಎಂದ್ರೆ ತಿಳಿದುಕೊಂಡಿರಬೇಕು ಎಂದು ಅರವಿಂದ್ ಹೇಳಿದ್ದಾರೆ.
ನಿಮ್ಮ ಬಗ್ಗೆ ಸ್ವಲ್ಪ ಸ್ವಲ್ಪ ತಿಳಿದು ಕೊಂಡಿರುವ ನನಗೆ ಪೂರ್ತಿ ವಿಷಯ ತಿಳಿದರೆ ನಾನು ಹೇಗೆ ವರ್ತಿಸುತ್ತೇನೆ ಎಂದು ನೀವು ಅಂದುಕೊಂಡಿದ್ದೀರಾ? ಎಂದು ದಿವ್ಯಾ ರವಿಂದ್‍ನನ್ನು ಪ್ರಶ್ನಿಸುವಾಗ ಅರವಿಂದ್ ನಾನು ಆ ಕುರಿತಾಗಿ ಯೋಚನೆ ಮಾಡಲು ಹೋಗುವುದೆ ಇಲ್ಲ. ನಾವು ನ್ಯಾಯುತವಾಗಿ ಇರಬೇಕು. ಇಲ್ಲಾ ಎಂದರೆ ಜೀವನಕ್ಕೆ ತೊಂದರೆ ಆಗುತ್ತದೆ ಎನ್ನುವ ರೀತಿಯಲ್ಲಿ ಅರವಿಂದ್ ಮಾತನಾಡಿದ್ದಾರೆ. ದಿವ್ಯಾ ಮತ್ತು ಅರವಿಂದ್ ಇಬ್ಬರು ಬಿಗ್‍ಬಾಸ್ ನಿಂದ ಹೊರಗೆ ಹೋಗಿ ಜೀವನ ಹೇಗೆ ಎನ್ನುವುದ ಕುರಿತಾಗಿ ಮಾತನಾಡಿದ್ದಾರೆ.
ಬಿಗ್‍ಬಾಸ್ ಮನೆಯ ಜೋಡಿ ಟಾಸ್ಕ್‍ನಿಂದ ಒಂದಾಗಿರುವ ಈ ಜೋಡಿ ಮೊದಲಿನಿಂದಲೂ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಲೇ ಬರುತ್ತಿದೆ. ಈ ಜೋಡಿ ಲವ್‍ನಲ್ಲಿದ್ದಾರೆ ಎನ್ನುವುದು ಮೇಲ್ನೊಟಕ್ಕೆ ಹೌದು ಎಂದು ಅನ್ನಿಸುತ್ತದೆ. ಇದಕ್ಕೆ ಪೂರಕ ಎನ್ನುವಂತೆ ಈ ಜೋಡಿ ಬಿಗ್‍ಬಾಸ್ ಮನೆಯ ಹೊರಗಿನ ತಮ್ಮಜೀವನದ ಕುರಿತಾಗಿ ಮಾತನಾಡಿಕೊಳ್ಳುತ್ತಿದ್ದಾರೆ. ಮುಂದೆ ಏನೆಲ್ಲಾ ಟ್ವೀಸ್ಟ್ ಸಿಗಲಿವೆ ಎಂಬುದನ್ನು ಕಾದುನೋಡಬೇಕಿದೆ.