ಬೆಂಗಳೂರು: ಮಧ್ಯ ಪ್ರದೇಶ ರಾಜ್ಯದ ಬೆತುಲ್ ಸಮೀಪದ ರೈಲ್ವೇ ಹಳಿಗಳ ಮೇಲೆ ಪತ್ತೆಯಾಗಿದ್ದ ಮೃತದೇಹದ ತಲೆ ಬೆಂಗಳೂರಿನಲ್ಲಿ ಸಿಕ್ಕಿರುವ ಘಟನೆ ನಡೆದಿದೆ.
ಅಕ್ಟೋಬರ್ 3ರಂದು ಬೆತುಲ್ ರೈಲ್ವೆ ಸ್ಟೆಷನ್ ಸಮೀಪದ ರೈಲ್ವೆ ಹಳಿಯ ಮೇಲೆ ಗುರುತು ಸಿಗದ ವ್ಯಕ್ತಿಯ ಮೃತ ದೇಹ ತಲೆ ಇಲ್ಲದೇ ಪತ್ತೆಯಾಗಿತ್ತು. ತನಿಖೆ ನಡೆಸಿದ ಪೊಲೀಸರಿಗೆ ಮೃತದೇಹದ ತಲೆ ಹಾಗೂ ಕೆಲ ಭಾಗಗಳು ಎಲ್ಲಿ ಹೋಯ್ತು ಎಂಬ ಸಣ್ಣ ಸುಳಿವು ಕೂಡ ಸಿಕ್ಕಿರಲಿಲ್ಲ. ಆದರೆ ಇಂದು ಬೆಂಗಳೂರು ರೈಲ್ವೆ ಸ್ಟೇಷನ್‍ನಲ್ಲಿ ದೆಹಲಿ-ಬೆಂಗಳೂರು ರಾಜಧಾನಿ ಎಕ್ಸ್ ಪ್ರೆಸ್ ರೈಲಿನ ಇಂಜಿನ್‍ಗೆ ಸಿಕ್ಕಿಹಾಕಿಕೊಂಡಿದ್ದ ಮನುಷ್ಯನ ತಲೆಯನ್ನು ಗುರುತಿಸಿ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು.
Advertisement
Advertisement
ಅಕ್ಟೋಬರ್ 4 ರಂದು ಮೃತದೇಹದ ಫೋಟೋವನ್ನು ರೈಲು ಪ್ರಯಾಣಿಸಿದ ಮಾರ್ಗದ ಎಲ್ಲಾ ಪೊಲೀಸ್ ಠಾಣೆಗಳಿಗೆ ಕಳುಹಿಸಲಾಗಿತ್ತು. ಆ ವೇಳೆ ಮಧ್ಯ ಪ್ರದೇಶದ ಬೆತುಲ್ ಸಮೀಪದ ಸಿಕ್ಕ ವ್ಯಕ್ತಿಯ ಗುರುತನ್ನು ಪೊಲೀಸರು ಪತ್ತೆ ಮಾಡಿದ್ದರು. 28 ವರ್ಷದ ರವಿ ಮೃತದೇಹ ರೈಲ್ವೇ ಹಳಿ ಮೇಲೆ ಪತ್ತೆಯಾಗಿತ್ತು.
Advertisement
ರಾಜಧಾನಿ ಎಕ್ಸ್ ಪ್ರೆಸ್ ರೈಲು ರವಿ ದೇಹದ ಮೇಲೆ ಹರಿದ ಪರಿಣಾಮ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಆದರೆ ಇದು ಅಪಘಾತವೇ, ಕೊಲೆಯೇ ಅಥವಾ ಆತ್ಮಹತ್ಯೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಪ್ರಕರಣದ ತನಿಖೆ ನಡೆಸಲು ಪೊಲೀಸ್ ತಂಡವೊಂದು ಬೆಂಗಳೂರಿಗೆ ಆಗಮಿಸಿದೆ.
Advertisement
ಆರ್ಥಿಕ ಕಾರಣದಿಂದ ಮೃತನ ಕುಟುಂಬಸ್ಥರು ಬೆಂಗಳೂರಿಗೆ ಆಗಮಿಸಲು ಸಾಧ್ಯವಾಗದ ಕಾರಣ ಪೊಲೀಸರೇ ತಲೆಯನ್ನು ಸಮಾಧಿ ಮಾಡಿದ್ದು, ಉಳಿದಿರುವ ದೇಹದ ಭಾಗಗಳನ್ನು ಅಂತ್ಯಸಂಸ್ಕಾರ ನಡೆಸಲು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.