ಹಾಸನ: ಜಿಲ್ಲೆಯಲ್ಲಿ ಲಾಕ್‍ಡೌನ್ ಆದೇಶ ವಾಪಸ್ ಪಡೆದಿರುವುದಾಗಿ ಉಸ್ತುವಾರಿ ಸಚಿವ ಗೋಪಾಲಯ್ಯ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು ಲಾಕ್‍ಡೌನ್‍ನನ್ನು ತಾತ್ಕಾಲಿಕವಾಗಿ ವಾಪಸ್ ಪಡೆದಿದ್ದೇವೆ. ಕೇಂದ್ರ ಮತ್ತು ರಾಜ್ಯದಿಂದ ನಿರ್ದೇಶನ ಬರುವವರೆಗೂ ಹಿಂದಿನ ರೀತಿ ಮುಂದುವರಿಯಲಿದೆ. ಮಧ್ಯಾಹ್ನ ತೆಗೆದುಕೊಂಡ ನಿರ್ಧಾರ ವಾಪಸ್ ತೆಗೆದುಕೊಂಡಿದ್ದು, ಇದುವರೆಗು ಯಾವ ರೀತಿಯ ಜನತಾ ಕಫ್ರ್ಯೂ ಇತ್ತೋ ಅದು ಎಂದಿನಂತೆ ಹಾಸನದಲ್ಲಿ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
Advertisement
Advertisement
ಏನದು ಆದೇಶ?: ಸೋಮವಾರ, ಬುಧವಾರ ಹಾಗೂ ಶುಕ್ರವಾರ ಮಾತ್ರ ಬೆ.6 ರಿಂದ 10 ರವರೆಗೆ ಅಗತ್ಯ ವಸ್ತುಗಳು ಖರೀದಿಗೆ ಅವಕಾಶ ಜಿಲ್ಲೆಯಲ್ಲಿ ಅವಕಾಶ ನೀಡಲಾಗಿದೆ. ಬಾರ್ ಗಳಿಗೂ ಅದೇ ದಿನಗಳು ಮಾತ್ರ ನಿಗದಿತ ಸಮಯ ತೆರೆಯಬೇಕು. ಆನಂತರ ಸಂಪೂರ್ಣ ಲಾಕ್‍ಡೌನ್ ಮಾಡಲು ಸೂಚಿಸಲಾಗಿತ್ತು. ಉಳಿದ ನಾಲ್ಕು ದಿನಗಳು ಹಾಲಿನ ಡೈರಿ, ಆಸ್ಪತ್ರೆಗಳು, ನರ್ಸಿಂಗ್ ಹೋಂ, ಮೆಡಿಕಲ್ ಶಾಪ್ ಗಳನ್ನು ಬಿಟ್ಟು ಉಳಿದೆಲ್ಲವೂ ಸಂಪೂರ್ಣ ಬಂದ್ ಮಾಡುವಂತೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಆದೇಶ ನೀಡಿದ್ದರು.
Advertisement