ಧಾರವಾಡ: ಮಕ್ಕಳಿಗೆ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ನೀಡಲು ಹೋಗುತ್ತಿದ್ದ ಮಹಿಳೆಗೆ ಲಾಕ್‍ಡೌನ್ ಕಾರಣದಿಂದ ಊಟದ ಸಮಸ್ಯೆ ಎದುರಾಗಿತ್ತು. ಧಾರವಾಡ ನಗರದ ಗಾಂಧಿಚೌಕಿನ ಜೂಬಾಯಿ ಚಾಳ್ ನಿವಾಸಿಯಾದ ರೂಪಾ ಮಿರಜಕರ್ ಎಂಬುವವರು ಪಬ್ಲಿಕ್ ಟಿವಿಯ ಮನೆಯೇ ಮಂತ್ರಾಲಯ ಕಾರ್ಯಕ್ರಮಕ್ಕೆ ಕರೆ ಮಾಡಿ ತಮ್ಮ ಅಳಲನ್ನು ತೊಡಿಕೊಂಡಿದ್ದರು.
ಪತಿ ಟೈಲರಿಂಗ್ ಮಾಡುತ್ತಿದ್ದರು. ಆದರೆ ಲಾಕ್‍ಡೌನ್ ಕಾರಣಿದಿಂದ ಅವರಿಗೂ ಕೂಡಾ ಕೆಲಸ ಇರಲಿಲ್ಲ. ಇತ್ತ ರೂಪಾ ಅವರು ಕೆಲಸ ಇಲ್ಲದೇ ಮನೆ ನಡೆಸುವುದು ಕಷ್ಟವಾಗಿತ್ತು. ಅಲ್ಲದೇ ಕೋವಿಡ್-19 ಪಾಸಿಟಿವ್ ಪ್ರಕರಣ ಪತ್ತೆಯಾದ ಕಾರಣದಿಂದ ಮಹಿಳೆ ವಾಸಿಸುತ್ತಿದ್ದ ಬಡಾವಣೆಯೇ ಸೀಲ್‍ಡೌನ್ ಮಾಡಲಾಗಿತ್ತು. ಪರಿಣಾಮ ಯಾರು ಮನೆಯಿಂದ ಹೊರಗೆ ಬರಲು ಆಗದೇ ಸಮಸ್ಯೆ ಎದುರಿಸಿದ್ದರು.
Advertisement
Advertisement
ಮನೆಯೇ ಮಂತ್ರಾಲಯಕ್ಕೆ ರೂಪಾ ಅವರು ಕರೆ ಸಮಸ್ಯೆ ಹೇಳಿಕೊಂಡಿದ್ದ ಗಮನಿಸಿದ್ದ ಧಾರವಾಡದ ವ್ಯಾಪಾರಿ ಅನಿಲ ಢಾಂಗೆ ಅವರು, ರೂಪಾ ಅವರಿಗೆ ಇಂದು ಎರಡು ತಿಂಗಳ ದಿನಸಿಯನ್ನು ನೀಡಿ ಸಹಾಯ ಮಾಡಿದ್ದಾರೆ. ಸಹಾಯ ಪಡೆದ ರೂಪಾ ಅವರು, ಪಬ್ಲಿಕ್ ಟಿವಿ ಹಾಗೂ ಸಹಾಯ ಮಾಡಿದವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಇತ್ತ ಅನಿಲ ಢಾಂಗೆ ಅವರು ಕೂಡ ಮುಂದೆಯೂ ಈ ರೀತಿ ಸಹಾಯ ಮಾಡುವ ಭರವಸೆ ನೀಡಿದ್ದಾರೆ.