ಕೋಲಾರ: 74ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ನೇತಾಜಿ ಯುವಕರ ಕ್ರೀಡಾ ಸಂಘದ ವತಿಯಿಂದ ಕೋಲಾರದ ಶತಶೃಂಗ ಪರ್ವತ ಶ್ರೇಣಿಯ ತೇರಹಳ್ಳಿಯಲ್ಲಿ ಬೃಹತ್ ತ್ರಿವರ್ಣ ಧ್ವಜವನ್ನ ಹಾರಿಸಲಾಯಿತು.
ಕಳೆದ 18 ವರ್ಷಗಳಿಂದ 120 ಅಡಿ ಉದ್ದದ ಧ್ವಜ ಸ್ತಂಭದಲ್ಲಿ 60 ಅಡಿ ಉದ್ದ ಹಾಗೂ 40 ಅಡಿ ಅಗಲದ ಬೃಹತ್ ತ್ರಿವರ್ಣ ಧ್ವಜವನ್ನು ತೇರಹಳ್ಳಿ ಬೆಟ್ಟದ ಮೇಲೆ ಹಾರಿಸಲಾಗುತ್ತದೆ. ಪ್ರತಿವರ್ಷದಂತೆ ಈ ವರ್ಷವೂ ಮಧ್ಯರಾತ್ರಿಯಲ್ಲಿ ಧ್ವಜ ಹಾರಿಸುವ ಮೂಲಕ ಯುವಕರು ದೇಶ ಪ್ರೇಮವನ್ನು ಮೆರೆದಿದ್ದಾರೆ.
Advertisement
Advertisement
ನಮ್ಮನ್ನ ಆಳುತ್ತಿದ್ದ ಆಂಗ್ಲರು ನಮಗೆ ಸ್ವಾತಂತ್ರ್ಯ ನೀಡಿದ್ದು ಮದ್ಯರಾತ್ರಿ 12 ಗಂಟೆಗೆ. ಇದರ ನೆನಪಿಗಾಗಿ ಪ್ರತಿ ವರ್ಷವೂ ಮಧ್ಯರಾತ್ರಿ ಧ್ವಜವನ್ನು ಹಾರಿಸುತ್ತೇವೆ. ಈ ಮೂಲಕ ಕತ್ತಲಲ್ಲಿ ನೀಡಿದ ಸ್ವಾತಂತ್ರ್ಯವನ್ನು ಸ್ಫೂರ್ತಿಯಾಗಿ ಕತ್ತಲಿಂದ ಬೆಳಕಿನೆಡೆಗೆ ನಮ್ಮ ಜೀವನ ಸಾಗಲಿ ಅನ್ನೋ ಸಂದೇಶ ಸಾರಲಾಗುತ್ತದೆ ಎಂದು ಯುವಕರು ಹೇಳಿದ್ದಾರೆ.
Advertisement
Advertisement
ಮಧ್ಯರಾತ್ರಿ 12 ಗಂಟೆಗೆ ಧ್ವಜಾರೋಹಣ ಮಾಡಿ, ಇಡೀ ಕೋಲಾರ ನಗರ ಸ್ವಾತಂತ್ರ್ಯೋತ್ಸವದ ದಿನ ಕಣ್ತೆರದಾಕ್ಷಣ ಅವರ ಕಣ್ಣುಗಳಲ್ಲಿ ಮುಗಿಲೆತ್ತರಕ್ಕೆ ರಾರಾಜಿಸುತ್ತಿರುವ ತ್ರಿವರ್ಣ ಧ್ವಜ ಕಾಣಬೇಕು. ಆ ಮೂಲಕ ಅವರಲ್ಲಿ ದೇಶಭಕ್ತಿ ಮೂಡಬೇಕು ಅನ್ನೋ ಆಶಯ ಇವರದ್ದಾಗಿದೆ. ಸದ್ಯ ಕೊರೊನಾ ಸಂಕಷ್ಟದ ನಡುವೆ ಈ ಬಾರಿ ಸರಳವಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಣೆ ಮಾಡಲಾಗಿದೆ.