– ರಾಗಿಣಿಗೆ ಜೈಲ್‍ನಲ್ಲಿ ವಿಚಾರಣಾಧೀನ ಕೈದಿ ನಂಬರ್
ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ ಮಾಫಿಯಾ ಕೇಸಲ್ಲಿ ನಟಿ ರಾಗಿಣಿ ದ್ವಿವೇದಿ ಜೈಲು ಪಾಲಾಗಿದ್ದಾರೆ. ಸಿಸಿಬಿ ಕಸ್ಟಡಿಯ ಅಂತ್ಯವಾದ ಹಿನ್ನೆಲೆಯಲ್ಲಿ ರಾಗಿಣಿಯನ್ನು 1ನೇ ಎಸಿಎಂಎಂ ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸ್ತು. ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟಿ ರಾಗಿಣಿ ಮೊದಲ ದಿನ ಸರಿಯಾಗಿ ನಿದ್ದಯಿಲ್ಲದೆ ಕಳೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಡ್ರಗ್ಸ್ ಕೇಸ್‍ನಲ್ಲಿ ಕನ್ನಡದ ಮೊದಲ ನಟಿ ಜೈಲಿಗೆ – ಕೋರ್ಟಿನಲ್ಲಿ ಇಂದು ಏನೇನಾಯ್ತು?
Advertisement
ಜೈಲಿನಲ್ಲಿ ರಾತ್ರಿ ಸಿಸಿಬಿಯವರು ಕೊಟ್ಟಿದ್ದ ರಾತ್ರಿ ಊಟ ತಿಂದಿದ್ದಾರೆ. ರೋಟಿ, ದಾಲ್ ತಿಂದು ಜೈಲು ರಾತ್ರಿಯ ವಾಸ್ತವ್ಯಕ್ಕೆ ನಟಿ ಅಣಿಯಾಗಿದ್ದು, ಮೊದಲ ಬಾರಿ ಜೈಲು ಸೇರಿದ ನಟಿಗೆ ತಡ ರಾತ್ರಿವರೆಗೂ ನಿದ್ದೆ ಬಂದಿಲ್ಲವಂತೆ. ಜೈಲಾಧಿಕಾರಿಗಳು ಜಂಖಾನ, ಒಂದು ಬೆಡ್ ಶೀಟ್ ಮತ್ತು ದಿಂಬು ಕೊಟ್ಟಿದ್ದರು. ಕ್ವಾರೆಂಟೈನ್ ವಾರ್ಡಿನಲ್ಲಿ ಫ್ಯಾನ್ ಬಿಟ್ಟರೆ ಬೇರೆ ಯಾವ ಸವಲತ್ತು ಇಲ್ಲ. ಹೀಗಾಗಿ ನೆಲದ ಮೇಲೆ ಜಂಖಾನ ಹಾಸಿಕೊಂಡು ಮಧ್ಯರಾತ್ರಿಯ ನಂತರ ನಟಿ ರಾಗಿಣಿ ನಿದ್ದೆಗೆ ಜಾರಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಜೈಲುಪಾಲಾದ ರಾಗಿಣಿಗೆ ಕಣ್ಣೀರ ವಿದಾಯ ಹೇಳಿದ ಸಂಜನಾ
Advertisement
Advertisement
ತುಂಬಾ ಸಮಯದವರೆಗೂ ಮಹಿಳಾ ವಾರ್ಡಿನ ಕ್ವಾರೆಂಟೈನ್ ರೂಮಿನಲ್ಲಿ ನಟಿ ರಾಗಿಣಿ ಅಳುತ್ತಿದ್ದರು ಎಂದು ತಿಳಿದುಬಂದಿದೆ. ಬಳಿಕ ಜೈಲಿಗೆ ಬರುವ ಮುನ್ನ ತಂದಿದ್ದ ಪುಸ್ತಕವನ್ನು ಓದಿದ್ದಾರೆ. ತಡರಾತ್ರಿಯ ನಂತರ ನಿದ್ದೆ ಮಾಡಿದ್ದಾರೆ. ಮುಂಜಾನೆ ಆಗುತ್ತಿದ್ದಂತೆ ಕನ್ನಡ, ಇಂಗ್ಲೀಷ್ ಪೇಪರ್ ಓದಿದ್ದಾರೆ. ರಾಗಿಣಿ ಸೆಲೆಬ್ರಿಟಿ ಆಗಿರುವುದರಿಂದ ಜೈಲ್ ಕ್ವಾರಂಟೈನ್‍ನಲ್ಲಿ ಇತರೆ ಆರೋಪಿಗಳು ಅವರನ್ನು ಮಾತನಾಡಿಸಲು ಯತ್ನಿಸಿದ್ದಾರೆ. ಆದರೆ ಜೈಲು ಕ್ವಾರಂಟೈನ್‍ನಲ್ಲಿ ರಾಗಿಣಿ ಹೆಚ್ಚಾಗಿ ಯಾರನ್ನು ಮಾತನಾಡಿಸಿಲ್ಲ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಡ್ರಗ್ಸ್ ಕೇಸ್ – ರಾಗಿಣಿ 14 ದಿನ ಜೈಲುಪಾಲು
Advertisement
ಕಳೆದ 12 ದಿನಗಳಿಂದ ಸಿಸಿಬಿ ಕಸ್ಟಡಿಯಲ್ಲಿದ್ದ ನಟಿ ರಾಗಿಣಿ ಮುಂದಿನ 14 ದಿನ ಅಂದರೆ ಸೆಪ್ಟೆಂಬರ್ 28ರವರೆಗೆ ಪರಪ್ಪನ ಅಗ್ರಹಾರ ಜೈಲಲ್ಲಿ ಇರಲಿದ್ದಾರೆ. ಸಿಸಿಬಿ ಅಧಿಕಾರಿಗಳು ತಮ್ಮ ಕಸ್ಟಡಿಗೆ ಕೇಳದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ರಾಗಿಣಿಯನ್ನು ಪರಪ್ಪನ ಅಗ್ರಹಾರದಲ್ಲಿರೋ ಸೆಂಟ್ರಲ್ ಜೈಲಿಗೆ ಕಳಿಸಿದ್ದಾರೆ. ಮಡಿವಾಳದ ಎಫ್‍ಎಸ್‍ಎಲ್ ಕೇಂದ್ರದಿಂದ ಸೋಮವಾರ ಸಂಜೆ 7 ಗಂಟೆ ಹೊತ್ತಿಗೆ ನಟಿ ರಾಗಿಣಿ ಸೇರಿ ಐವರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿತ್ತು.
ಮಡಿವಾಳದ ಎಫ್‍ಎಸ್‍ಎಲ್ ಕೇಂದ್ರದಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಗಿಣಿಯನ್ನು 1ನೇ ಎಸಿಎಂಎಂ ಕೋರ್ಟ್ ಜಡ್ಜ್ ಎದುರು ಹಾಜರು ಪಡಿಸಲಾಗಿತ್ತು. ಈ ವೇಳೆ ರಾಗಿಣಿ ತಮಗೆ ಆರೋಗ್ಯ ಸಮಸ್ಯೆ ಇದೆ. ಖಾಸಗಿ ಆಸ್ಪತ್ರೆಗೆ ಅವಕಾಶ ಕೊಡಿ ಎಂದಿದ್ದಾರೆ. ಆದರೆ ಜಡ್ಜ್ ಇದಕ್ಕೆ ನಿರಾಕರಿಸಿದ್ದಾರೆ.
ಡ್ರಗ್ಸ್ ಕೇಸಲ್ಲಿ ರಾಗಿಣಿ ಜೊತೆ ಇನ್ನೂ ಐವರು ಕೂಡ ಪರಪ್ಪನ ಅಗ್ರಹಾರ ಸೇರಿದ್ದಾರೆ. ಆರೋಪಿನ ನಂಬರ್ 2 ರಾಗಿಣಿ ಜೊತೆಗೆ, ಆರೋಪಿ 4 ಪ್ರಶಾಂತ್ ರಾಂಕಾ, ಆರೋಪಿ 7 ಇಂಟರ್ ನ್ಯಾಷನಲ್ ಡ್ರಗ್ಸ್ ಸಪ್ಲೈಯರ್ ಲೂಮ್ ಪೆಪ್ಪರ್, ಸಂಜನಾ ಆಪ್ತ ಆರೋಪಿ ನಂಬರ್ 11ರ ರಾಹುಲ್ ಶೆಟ್ಟಿ ಹಾಗೂ ಆರೋಪಿ ನಂಬರ್ 13 ನಿಯಾಜ್ ಅಹ್ಮದ್ ಒಟ್ಟಿಗೆ ಐದು ಜನ ಕಂಬಿ ಎಣಿಸುತ್ತಿದ್ದಾರೆ.