ಬೆಂಗಳೂರು: ಸ್ಯಾಂಡಲ್‍ವುಡ್‍ನ ಕ್ಯೂಟ್ ಕಪಲ್ ಯಶ್, ರಾಧಿಕಾ ಸಂಸಾರಕ್ಕೆ ನಾಲ್ಕು ವರ್ಷ ತುಂಬಿದೆ. ಈ ಖುಷಿಯ ಕ್ಷಣದಲ್ಲಿ ಕ್ಲಿಕ್ಕಿಸಿರುವ ಫೋಟೋವೊಂದನ್ನು ರಾಧಿಕಾ ಪಂಡಿತ್ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಹೌದು. ಯಶ್-ರಾಧಿಕಾ ಪಂಡಿತ್ ಪಾಲಿಗೆ ಡಿ.9 ವಿಶೇಷ ದಿನವಾಗಿತ್ತು. ‘ರಾಕಿಂಗ್’ ದಂಪತಿಗೆ ವಿವಾಹ ವಾರ್ಷಿಕೋತ್ಸವ ಸಂಭ್ರಮವನ್ನು ನಿನ್ನೆ ದಂಪತಿ ಸೆಲೆಬ್ರೆಟ್ ಮಾಡಿದ್ದಾರೆ. ವಾರ್ಷಿಕೋತ್ಸವದ ಸಂಭ್ರಮದ ಫೋಟೋವನ್ನು ಹಂಚಿಕೊಂಡು ‘ಡಿಯರ್ ಹಸ್ಬೆಂಡ್ ಥ್ಯಾಂಕ್ ಯೂ’ ಎಂದು ಬರೆದುಕೊಂಡಿದ್ದಾರೆ. ದಂಪತಿಗೆ ಅಭಿಮಾನಿಗಳು, ಸ್ನೇಹಿತರು ಮತ್ತು ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾ ಮೂಲಕ ಶುಭ ಕೋರಿದ್ದಾರೆ.
ಕಿರುತೆರೆಯಲ್ಲಿ ನಟಿಸುತ್ತಿದ್ದ ನಂದಗೋಕುಲ ಧಾರಾವಾಹಿ ಮೂಲಕ ನಟ ಯಶ್ ಮತ್ತು ನಟಿ ರಾಧಿಕಾ ನಡುವೆ ಪ್ರೀತಿ ಚಿಗುರಿತು. ಆನಂತರ ಇವರಿಬ್ಬರಿಗೆ ಬೆಳ್ಳಿ ಪರದೆಯ ಮೇಲೆ ನಟಿಸುವ ಅವಕಾಶ ಒದಗಿ ಬಂತು. ಡಿಸೆಂಬರ್ 9, 2016ರಂದು ಯಶ್ ಹಾಗೂ ರಾಧಿಕಾ ಪಂಡಿತ್ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಕಿರುತೆರೆಯಿಂದ ಒಂದಾದ ಈ ಜೋಡಿ ಬೆಳ್ಳಿತೆರೆ ಮೇಲೂ ಸಾಕಷ್ಟು ಸಿನಿಮಾಗಳಲ್ಲಿ ಮಿಂಚಿದ್ದಾರೆ. ಈಗ ಪತಿ-ಪತ್ನಿಯರಾಗಿ ಸುಖ ಸಂಸಾರವನ್ನು ನಡೆಸುತ್ತಿದ್ದಾರೆ.
ರಾಧಿಕಾ ಪಂಡಿತ್ ಮತ್ತು ಯಶ್ ಬಹುವರ್ಷಗಳಿಂದ ಪರಸ್ಪರ ಗುಟ್ಟಾಗಿ ಪ್ರೀತಿಸುತ್ತಿದ್ದರು. 2016ರ ಆಗಸ್ಟ್‍ನಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅದೇ ವರ್ಷ ಡಿಸೆಂಬರ್ 9ರಂದು ಬೆಂಗಳೂರಿನ ಖಾಸಗಿ ಹೋಟೆಲ್‍ವೊಂದರಲ್ಲಿ ಅದ್ದೂರಿಯಾಗಿ ಮದುವೆಯಾದರು. ತಮ್ಮ ನೆಚ್ಚಿನ ನಟ-ನಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಅಭಿಮಾನಿಗಳಿಗೆ ಸಖತ್ ಖುಷಿಯನ್ನು ನೀಡಿತ್ತು. ಸ್ಯಾಂಡಲ್‍ವುಡ್‍ನ ಈ ಜೋಡಿ ರಿಯಲ್ ಲೈಫ್‍ನಲ್ಲಿ ಒಂದಾಗಿ ಇಂದಿಗೆ ನಾಲ್ಕು ವರ್ಷ ಕಳೆದಿದೆ.
View this post on Instagram
ಮದುವೆ ಬಳಿಕ ನಟನೆಗಿಂತಲೂ ಹೆಚ್ಚಾಗಿ ರಾಧಿಕಾ ಪಂಡಿತ್ ಕುಟುಂಬದ ಕಡೆಗೆ ಗಮನ ನೀಡಿದ್ದರು. ಹಸೆಮಣೆ ಏರಿದ ನಂತರ ಅವರು ನಟಿಸಿದ ಏಕೈಕ ಸಿನಿಮಾ ಎಂದರೆ ಅದು ‘ಆದಿ ಲಕ್ಷ್ಮೀ ಪುರಾಣ’. ಆ ಬಳಿಕ ಅವರು ಯಾವುದೇ ಸಿನಿಮಾಗಳನ್ನೂ ಒಪ್ಪಿಕೊಳ್ಳಲಿಲ್ಲ. ಈಗ ಯಶ್-ರಾಧಿಕಾ ದಂಪತಿಗೆ ಐರಾ ಯಶ್ ಮತ್ತು ಯಥರ್ವ್ ಯಶ್ ಎಂಬ ಇಬ್ಬರು ಮುದ್ದಾದ ಮಕ್ಕಳು ಇದ್ದಾರೆ. ಮಕ್ಕಳ ತುಂಟಾಟದ ಫೆÇೀಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ದಂಪತಿ ಹಂಚಿಕೊಳ್ಳುತ್ತಿರುತ್ತಾರೆ.
ಸದಾ ಸಿನಿಮಾ ಚಟುವಟಿಕೆಗಳಲ್ಲಿ ಬ್ಯುಸಿ ಆಗಿರುವ ಯಶ್ ಲಾಕ್‍ಡೌನ್ ಕಾರಣದಿಂದ 2020ರಲ್ಲಿ ಕುಟುಂಬದವರ ಜೊತೆ ಹೆಚ್ಚು ಸಮಯವನ್ನು ಕಳೆದಿದ್ದಾರೆ. ಆದರೆ ಚಿತ್ರೀಕರಣಕ್ಕೆ ಸರ್ಕಾರದಿಂದ ಅನುಮತಿ ಸಿಕ್ಕ ನಂತರ ಅವರು ‘ಕೆಜಿಎಫ್ ಚಾಪ್ಟರ್ 2’ ಸಿನಿಮಾದ ಕೊನೇ ಹಂತದ ಶೂಟಿಂಗ್‍ನಲ್ಲಿ ಪಾಲ್ಗೊಂಡಿದ್ದಾರೆ. ಇತ್ತೀಚೆಗಷ್ಟೇ ಹೈದರಾಬಾದ್‍ನಲ್ಲಿ ಅವರ ಮತ್ತು ಸಂಜಯ್ ದತ್ ನಡುವಿನ ಫೈಟಿಂಗ್ ದೃಶ್ಯಗಳನ್ನು ಚಿತ್ರಿಕರಿಸಲಾಗಿದೆ. ಈ ಸಿನಿಮಾದ ಮೇಲೆ ದೇಶಾದ್ಯಂತ ಭಾರೀ ನಿರೀಕ್ಷೆ ಸೃಷ್ಟಿ ಆಗಿದೆ.