ಮದ್ವೆ ವಾರ್ಷಿಕೋತ್ಸವಕ್ಕೆ ಶುಭಕೋರಿ ತಂದೆ-ತಾಯಿಗೆ ರಾಧಿಕಾ ಪಂಡಿತ್ ಧನ್ಯವಾದ

Public TV
1 Min Read
RADHIKA PANDIT

ಬೆಂಗಳೂರು: ಇಂದು ಸ್ಯಾಂಡಲ್‍ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ತಂದೆ ಹಾಗೂ ತಾಯಿಯ ಮದುವೆ ವಾರ್ಷಿಕೋತ್ಸವವಾಗಿದೆ. ಈ ಹಿನ್ನೆಲೆಯಲ್ಲಿ ನಟಿ ಅಪ್ಪ-ಅಮ್ಮನಿಗೆ ಶುಭಕೋರುವ ಜೊತೆಗೆ ಧನ್ಯವಾದವನ್ನು ತಿಳಿಸಿದ್ದಾರೆ.

RADHIKA medium

ಹೌದು. ಈ ಸಂಬಂಧ ತಮ್ಮ ಇನ್ ಸ್ಟಾ ಖಾತೆಯಲ್ಲಿ ಭಾವನಾತ್ಮಕವಾಗಿ ರಾಧಿಕಾ ಬರೆದುಕೊಂಡು ವಿಶ್ ಮಾಡಿದ್ದಾರೆ. ಅಲ್ಲದೆ ನಿಮ್ಮ ಮಗಳಾಗಿ ಹುಟ್ಟಿದ್ದಕ್ಕೆ ಹೆಮ್ಮೆಯಾಗುತ್ತಿದೆ ಎಂದು ತಿಳಿಸಿದ್ದಾರೆ. ಆದರೆ ಎಷ್ಟನೇ ವರ್ಷದ ವಿವಾಹ ವಾರ್ಷಿಕೋತ್ಸವ ಎಂಬುದನ್ನು ನಟಿ ತಿಳಿಸಿಲ್ಲ. ರಾಧಿಕಾ ಅವರು ತಂದೆ-ತಾಯಿ ಫೋಟೋ ಅಪ್ಲೋಡ್ ಮಾಡಿ ವಿಶ್ ಮಾಡುತ್ತಿದ್ದಂತೆಯೇ ನಟಿಯ ಅಭಿಮಾನಿಗಳು ಕೂಡ ಶುಭಕೋರಿದ್ದಾರೆ. ಅಲ್ಲದೆ ಯಶ್ ಹಾಗೂ ರಾಧಿಕಾರಂತೆ ಇವರು ಕೂಡ ಕ್ಯೂಟ್ ಜೋಡಿ ಎಂದು ಅಭಿಮಾನಿಗಳು ಬಣ್ಣಿಸಿದ್ದಾರೆ.

RADHIKA 1 medium

ಆತ್ಮೀಯ ಮಾ ಮತ್ತು ಪಪ್ಪಾ, ನಾವು ನಿಮ್ಮನ್ನು ಎಷ್ಟು ಪ್ರೀತಿಸುತ್ತೇವೆ ಎಂಬುದನ್ನು ವಿವರಿಸಲು ಪದಗಳೇ ಸಾಲಲ್ಲ. ನನ್ನ ಮಕ್ಕಳನ್ನು ಬೆಳೆಸಲು ನೀವು ನನಗೆ ಸಹಾಯ ಮಾಡಿದ್ದಕ್ಕಾಗಿ ಧನ್ಯವಾದಗಳು. ನಾವು ಇಂದು ಏನಾಗಿದ್ದೇವೆ, ಅದಕ್ಕೆ ನಿಮ್ಮ ಆಶೀರ್ವಾದವಿದೆ. ನಿಮಗೆ ನಾವು ಯಾವತ್ತೂ ಚಿರಖುಣಿಯಾಗಿರುತ್ತೇವೆ. ನನಗೆ ಹಾಗೂ ಗೌರಂಗ್ ಪಂಡಿತ್‍ಗೆ ನೀವು ಹೆತ್ತವರಾಗಿರುವುದಕ್ಕೆ ನಿಜಕ್ಕೂ ಹೆಮ್ಮೆಯಾಗುತ್ತಿದೆ. ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ಎಂದು ರಾಧಿಕಾ ವಿಶ್ ಮಾಡಿದ್ದಾರೆ. ಇದನ್ನೂ ಓದಿ: ಸಂಚಾರಿ ವಿಜಯ್ ಇದ್ದಿದ್ರೆ ಯಾವ ಸಿನಿಮಾಗಳಲ್ಲಿ, ಯಾವ್ಯಾವ ಅವತಾರದಲ್ಲಿ ಕಾಣಿಸಿಕೊಳ್ತಿದ್ರು?

RADHIKA 2 medium

ಒಟ್ಟನಲ್ಲಿ ನಟಿ ರಾಧಿಕಾ ಪಂಡಿತ್ ಅವರು ಸದ್ಯ ಮಕ್ಕಳ ಲಾಲನೆ-ಪಾಲನೆಯಲ್ಲಿ ತಲ್ಲೀನರಾಗಿದ್ದಾರೆ. ಅದರಲ್ಲೂ ಲಾಕ್‍ಡೌನ್‍ನಿಂದಾಗಿ ನಟ ಯಶ್ ಕೂಡ ಯಾವುದೇ ಶೂಟಿಂಗ್‍ಗೆ ಹೋಗದೆ ಮನೆಯಲ್ಲೇ ಇದ್ದಾರೆ. ಅವರು ಕೂಡ ಮಕ್ಕಳೊಂದಿಗೆ ಸಮಯ ಕಳೆಯುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *