ಮದ್ವೆ ಮುಗಿಸಿ ಬರೋವಷ್ಟರಲ್ಲಿ ಮನೆಯಲ್ಲಿದ್ದ ಚಿನ್ನಾಭರಣ ಕಳ್ಳತನ

Public TV
1 Min Read
HBL Theft 1 1

– 380 ಗ್ರಾಂ ಚಿನ್ನ, 15 ಕೆಜಿ ಬೆಳ್ಳಿ, 10 ದುಬಾರಿ ರೇಷ್ಮೆ ಸೀರೆ

ಹುಬ್ಬಳ್ಳಿ: ಮನೆಯವರು ಮದುವೆಗೆ ತೆರಳಿ ವಾಪಸ ಬರೋದರೊಳಗೆ ಅಪಾರ ಪ್ರಮಾಣದ ಚಿನ್ನಾಭರಣ. ನಗದು ರೇಷ್ಮೆ ಸೀರೆಗಳು ಕಳ್ಳತನವಾದ ಘಟನೆ ಹುಬ್ಬಳ್ಳಿಯ ಆದರ್ಶನಗರದಲ್ಲಿ ನಡೆದಿದೆ.

HBL Theft 1 4

ನೀರಾವರಿ ಇಲಾಖೆಯ ನಿವೃತ್ತ ಎಕ್ಸಿಕ್ಯೂಟಿವ್ ಇಂಜಿನಿಯರ್ ಮಹಾದೇವಪ್ಪ ಭೀಮಕ್ಕನವರ ಎಂಬವರ ಮನೆಯಲ್ಲೇ ಕಳ್ಳತನ ನಡೆದಿದೆ. 380 ಗ್ರಾಂ ಚಿನ್ನ, 15 ಕೆಜಿ ಬೆಳ್ಳಿ, 10ಬೆಲೆಬಾಳುವ ರೇಷ್ಮೆ ಸೀರೆ, ಸಾವಿರಾರೂ ರೂಪಾಯಿ ನಗದನ್ನ ದೋಚಿಕೊಂಡು ಪರಾರಿಯಾಗಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಘಟನೆ ನಡೆದಿದ್ದು, ಮದುವೆಗಾಗಿ ಮನೆಯವರು ತೆರಳಿ ಮರಳಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

HBL Theft 1 2

ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಅಶೋಕ್ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ, ಸ್ವತಃ ಪೊಲೀಸ್ ಕಮೀಷನರ ಲಾಬುರಾಮ್ ಕಳ್ಳತನವಾದ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

HBL Theft 1 5

ತಪಾಸಣೆ ನಡೆಸಿದ ನಂತರ ಮಾತನಾಡಿದ ಕಮೀಷನರ್ ಲಾಬುರಾಮ್, ತಕ್ಷಣವೇ ಸಾಕ್ಷಿಗಳಿಗಾಗಿ ಹುಡುಕಾಟ ನಡೆಸಿದ್ದು, ವಿಚಾರಣೆ ನಡೆಸುತ್ತಿದ್ದೇವೆ. ಈ ಕುರಿತು ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.

Share This Article