ತಿರುವನಂತಪುರಂ: ದಕ್ಷಿಣ ಭಾರತದ ನಟಿ ಶಮ್ನಾ ಕಾಸಿಮ್ ಅವರಿಗೆ ಬೆದರಿಕೆ ಹಾಕಿ ಹಣ ಸುಲಿಗೆ ಮಾಡಲು ಯತ್ನಿಸಿದ್ದ ನಾಲ್ವರು ಆರೋಪಿಗಳನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ನಟಿ ಕಾಸಿಮ್‍ನ ತಂದೆ ಪೊಲೀಸರಿಗೆ ದೂರು ನೀಡಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳು ಕೆಲವು ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ನಟಿಯ ತಂದೆ ದೂರಿನಲ್ಲಿ ಉಲ್ಲೇಖಿಸಿದ್ದರು. ನಾಲ್ವರು ಆರೋಪಿಗಳು ತ್ರಿಶೂರ್ ಮೂಲದವರಾಗಿದ್ದು, ನಟಿಗೆ ಮದುವೆ ಆಗುವುದಾಗಿ ನಂಬಿಸಿ ಹಣ ಸೂಲಿಗೆ ಮಾಡಲು ಮುಂದಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Advertisement
Advertisement
Advertisement
ಮಾರ್ಚ್ ತಿಂಗಳಲ್ಲಿ ಮದುವೆಯ ಬಗ್ಗೆ ಮಾತನಾಡಲು ಈ ಗ್ಯಾಂಗ್‍ನ ಒಬ್ಬ ವ್ಯಕ್ತಿ ನಟಿಯ ತಂದೆಯನ್ನು ಭೇಟಿ ಮಾಡಿದ್ದನು. ಈ ವೇಳೆ ವರ ದುಬೈನಲ್ಲಿ ಬಿಸಿನೆಸ್ ಮಾಡುತ್ತಿದ್ದಾನೆ. ಕೇರಳದ ಕೋಳಿಕೋಡ್‍ನಲ್ಲಿ ಕುಟುಂಬದವರು ವಾಸಿಸುತ್ತಿದ್ದಾರೆ ಎಂದು ನಂಬಿಸಿದ್ದಾನೆ. ನಕಲಿ ಪ್ರೋಫೈಲ್ ಕೂಡ ರೆಡಿ ಮಾಡಿದ್ದು, ನಟಿ ಕಾಸಿಮ್‍ಗೆ ಅಲ್ವರ್ ಅಲಿ ಎಂದು ಪರಿಯಚ ಮಾಡಿಕೊಂಡು ಫೋನಿನಲ್ಲಿ ಮಾತನಾಡಿದ್ದಾನೆ.
Advertisement
ನಂತರ ಈ ಗ್ಯಾಂಗ್ ಕೊಚ್ಚಿಯಲ್ಲಿರುವ ನಟಿಯ ಮನೆಗೆ ಭೇಟಿ ನೀಡಿ ಮದುವೆ ಬಗ್ಗೆ ಮಾತುಕತೆ ಮಾಡಿದ್ದರು. ಮಾತುಕತೆ ಮುಗಿಸಿ ಮನೆಯಿಂದ ಹೋಗುವಾಗ ಅವರ ಮನೆ ಮತ್ತು ಕಾರ್ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡು ಹೋಗಿದ್ದರು.
ನಂತರ ಗ್ಯಾಂಗ್‍ನ ಓರ್ವ ಫೋನ್ ಮಾಡಿ ನಟಿಗೆ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಒಂದು ವೇಳೆ ಹಣ ನೀಡಲು ನಿರಾಕರಿಸಿದರೆ ಹಳೆಯ ಕೆಲವು ವಿಡಿಯೋಗಳನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಆದರೆ ನಟಿ ಹಣ ಕೊಡಲು ನಿರಾಕರಿಸಿದ್ದಾರೆ. ಆಗ ಆರೋಪಿ ತಂದೆಗೆ ನಿರಂತರವಾಗಿ ಫೋನ್ ಮಾಡಿ ಹಣ ನೀಡುವಂತೆ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊನೆಯ ನಟಿಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ತಂದೆ ಮತ್ತು ನಟಿಗೆ ಮಾಡಿದ ಫೋನ್ ಡಿಟೈಲ್ಸ್ ಮೂಲಕ ಆರೋಪಿಗಳನ್ನು ಪೊಲೀಸರು ಪತ್ತೆ ಮಾಡಿ ಬಂಧಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಆರೋಪಿಗಳನ್ನು ವಿಚಾರಣೆ ಮಾಡುತ್ತಿದ್ದಾರೆ.
ನಮ್ಮಂತೆ ಬೇರೆ ಯಾರೂ ಇಂತಹವರ ಮೋಸದ ಬಲೆಗೆ ಬೀಳಬಾರದು. ಅದಕ್ಕಾಗಿಯೇ ನಾನು ನನ್ನ ಪೋಷಕರಿಗೆ ದೂರು ನೀಡಲು ಹೇಳಿದೆ. ಅವರು ಹಣ ಸುಲಿಗೆ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ ಎಂದು ನಟಿ ಹೇಳಿದ್ದಾರೆ.
ನಟಿ ಶಮ್ನಾ ಕಾಸಿಮ್ ಅವರು ಪೂರ್ಣ ಹೆಸರಿನ ಮೂಲಕ ಚಿತ್ರರಂಗದಲ್ಲಿ ಖ್ಯಾತಿ ಪಡೆದಿದ್ದಾರೆ. 2007ರಲ್ಲಿ ನಟನಾ ವೃತ್ತಿಜೀವನವನ್ನು ಪ್ರಾರಂಭಿಸಿದ ನಟಿ ಮಲಯಾಳಂ, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ 40ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ‘ಜೋಶ್’ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಖ್ಯಾತಿ ಪಡೆದುಕೊಂಡಿದ್ದಾರೆ.