– ಪತಿಯಲ್ಲಿ ಮನೆಯಲ್ಲೇ ಸೂಸೈಡ್
ಲಕ್ನೋ: ಮದುವೆಯಾದ ಎರಡೇ ದಿನಕ್ಕೆ 21 ವರ್ಷದ ವಧು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಮುಜಾಫರ್ನಗರದಲ್ಲಿ ನಡೆದಿದೆ.
ಚಾರ್ತವಾಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಟೇಸ್ರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನೇಹಾ ಆತ್ಮಹತ್ಯೆ ಮಾಡಿಕೊಂಡ ನವ ವಧು. ನೇಹಾ ಸೋಮವಾರ 22 ವರ್ಷದ ಸಚಿನ್ ಜೊತೆ ಮದುವೆಯಾಗಿದ್ದಳು. ಎರಡು ಕುಟುಂಬದವರ ಒಪ್ಪಿಗೆ ಮೇರೆಗೆ ನೇಹಾ ಮದುವೆಯಾಗಿದ್ದಳು ಎಂದು ತಿಳಿದುಬಂದಿದೆ.
Advertisement
Advertisement
ಬುಧವಾರ ಸಂಜೆ ನೇಹಾ ತನ್ನ ರೂಮಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಅಲ್ಲದೇ ಕನ್ನಡಿಯಲ್ಲಿ ಡೆತ್ನೋಟ್ ಬರೆದಿದ್ದಾಳೆ. ಡೆತ್ನೋಟ್ನಲ್ಲಿ ತನ್ನ ಪತಿಯ ಮನೆಯವರು ನಿರಪರಾಧಿಗಳು ಮತ್ತು ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆದಿದ್ದಾಳೆ.
Advertisement
ನೇಹಾ ತುಂಬಾ ಸಮಯವಾದರೂ ರೂಮಿನಿಂದ ಹೊರಗೆ ಬರದಿದ್ದಾಗ ಆಕೆಯ ಅತ್ತೆಯ ಮನೆಯವರು ಹೋಗಿ ನೋಡಿದ್ದಾರೆ. ಆಗ ನೇಹಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ನೇಹಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಆದರೆ ನೇಹಾ ಸಾವಿಗೆ ಇನ್ನೂ ನಿಖರವಾದ ಕಾರಣ ತಿಳಿದು ಬಂದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.