ಬೆಂಗಳೂರು: ಕೊರೊನಾ ವೈರಸ್ ತಡೆಗಟ್ಟಲು ಮಾಡಲಾಗಿದ್ದ ಲಾಕ್‍ಡೌನ್ ಅನ್ನು ಸರ್ಕಾರ ಕೆಲ ನಿಯಮವನ್ನು ಜಾರಿಗೆ ತರುವ ಮೂಲಕ ಹಂತ ಹಂತವಾಗಿ ಸಡಿಲಗೊಳಿಸುತ್ತಿದೆ. ಈ ಹಿನ್ನೆಲೆ ಮದುವೆ ಸಮಾರಂಭಗಳಿಗೂ ಕೆಲ ನಿಯಮಗಳನ್ನು ಸರ್ಕಾರ ಜಾರಿಗೆ ತಂದಿದ್ದು, ಇದನ್ನು ಮದುವೆ ಆಗೋರು ಹಾಗೂ ಸಮಾರಂಭದಲ್ಲಿ ಭಾಗಿಯಾಗುವ ಮಂದಿ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆ ಹೊರಡಿಸಿದೆ.
Advertisement
ಸರ್ಕಾರ 17 ನಿಯಮಗಳನ್ನು ಪಟ್ಟಿ ಮಾಡಿದ್ದು, ಈ ನಿಯವನ್ನು ಮದುವೆ ಆಗೋರು ಹಾಗೂ ಸಮಾರಂಭದಲ್ಲಿ ಭಾಗಿಯಾಗುವ ಮಂದಿ ಪಾಲಿಸಬೇಕು ಎಂದು ತಿಳಿಸಿದೆ. ಮುಂಜಾಗೃತಾ ಕ್ರಮವಾಗಿ ಸರ್ಕಾರ ಈ 17 ನಿಯಮಗಳನ್ನು ರೂಪಿಸಿದ್ದು, ಸಾಮೂಹಿಕವಾಗಿ ಕೊರೊನಾ ವೈರಸ್ ಹಬ್ಬಬಾರದು ಎಂಬ ಉದ್ದೇಶದಿಂದ ಸರ್ಕಾರ ಈ ನಿಯಮ ಜಾರಿಗೆ ತಂದಿದೆ.
Advertisement
Advertisement
17 ನಿಯಮಗಳು ಯಾವುದು?
– ಮದುವೆಗಳಿಗೆ ಸ್ಥಳೀಯ ಆಡಳಿತ ಸಂಸ್ಥೆಗಳಿಂದ ಅನುಮತಿ ಕಡ್ಡಾಯ.
– ಒಂದು ಮದುವೆಯಲ್ಲಿ 50 ಜನಕ್ಕಿಂತ ಹೆಚ್ಚು ಜನ ಸೇರುವ ಹಾಗಿಲ್ಲ.
– ಸೂಕ್ತ ಸಾರ್ವಜನಿಕ ಸ್ಥಳ ಮತ್ತಿ ನೈಸರ್ಗಿಕ ವಾತಾವರಣ ಇರುವೆಡೆ ಮದುವೆ.
– ಮದುವೆಗಳಲ್ಲಿ ಎಸಿಗಳು ನಿರ್ಬಂಧ.
Advertisement
– ಗರ್ಭಿಣಿಯರು, 65 ವರ್ಷ ಮೇಲ್ಪಟ್ಟ ವೃದ್ಧರು, 10 ವರ್ಷದೊಳಗಿನ ಮಕ್ಕಳಿಗೆ ನಿರ್ಬಂಧ.
– ಕಂಟೈನ್ಮೆಂಟ್ ವಲಯದವರಿಗೆ ನಿರ್ಬಂಧ.
– ಮದುವೆ ಸ್ಥಳಗಳ ಪ್ರವೇಶ ದ್ವಾರದಲ್ಲಿ ಸ್ಯಾನಿಟೈಸರ್ ವ್ಯವಸ್ಥೆ.
– ಮದುವೆಗೆ ಬರೋರಿಗೆ ಮಾಸ್ಕ್ ಕಡ್ಡಾಯ.
– ಎಲ್ಲರಿಗೂ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ. 99.5 ಸೆಲ್ಸಿಯಸ್ ಉಷ್ಣತೆ, ಜ್ವರ, ಕೆಮ್ಮು, ನೆಗಡಿ, ಉಸಿರಾಟ ಸಮಸ್ಯೆ ಇರೋರನ್ನು ನಿರ್ಬಂಧಿಸಲಾಗಿದೆ. ಹೀಗಾಗಿ ಅವರನ್ನು ಆಸ್ಪತ್ರೆಗೆ ಕಳಿಸಬೇಕು.
– ಒಂದು ಮೀಟರ್ ಸಾಮಾಜಿಕ ಅಂತರ.
– ಸಾಬೂನಿನಲ್ಲಿ ಹ್ಯಾಂಡ್ ವಾಷ್ ಗೆ ವ್ಯವಸ್ಥೆ ಇರಬೇಕು.
– ಸಾರ್ವಜನಿಕವಾಗಿ ಉಗುಳುವಂತಿಲ್ಲ.
– ಮದುವೆಗಳಲ್ಲಿ ಒಬ್ಬ ನೋಡಲ್ ಅಧಿಕಾರಿಯಿರುವುದು ಕಡ್ಡಾಯ.
– ಮದುವೆಗೆ ಬಂದವರ ಲಿಸ್ಟ್ ನೋಡಲ್ ಅಧಿಕಾರಿಗೆ ಸಲ್ಲಿಸಬೇಕು.
– ಮದುವೆಗೆ ಬರೋರು ಆರೋಗ್ಯ ಸೇತು ಆಪ್ ಡೌನ್ ಲೋಡ್ ಮಾಡಿಕೊಳ್ಳಬೇಕು.
– ಮದುವೆ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡಬೇಕು.
– ಮದ್ಯ, ಪಾನ್, ಗುಟ್ಕಾ, ತಂಬಾಕು ಸೇವನೆ ನಿಷಿದ್ಧ.