-ದೆಹಲಿಯಿಂದ ಮಧ್ಯಪ್ರದೇಶಕ್ಕೆ ಬಂದ ವಧು
ನವದೆಹಲಿ: ಈ ಹಿಂದೆ ಮದುವೆಗಾಗಿ ವರ ಒಬ್ಬನೇ ಬಂದಿರುವ ವರದಿಗಳು ಪ್ರಕಟವಾಗಿದ್ದವು. ಇದೀಗ ವಧು ತಾನೊಬ್ಬಳೆ ದೆಹಲಿಯಿಂದ ಮಧ್ಯಪ್ರದೇಶದ ಮುರೈನಾ ಜಿಲ್ಲೆಯ ಗ್ರಾಮವೊಂದಕ್ಕೆ ಬಂದಿದ್ದು, ಐದರಿಂದ ಆರು ಜನರ ಸಮ್ಮುಖದಲ್ಲಿ ಮದುವೆ ನಡೆದಿದೆ. ಕೇವಲ 10 ನಿಮಿಷದಲ್ಲಿ ಮದುವೆಯ ಎಲ್ಲ ಶಾಸ್ತ್ರಗಳನ್ನು ಮಾಡಲಾಗಿದೆ.
Advertisement
ನಿರ್ಮಲಾ ಮತ್ತು ಗೌರವ್ ಮದುವೆಯಾದ ನವ ಜೋಡಿ. ನಿರ್ಮಲಾ ನೋಯ್ಡಾದ ಸೆಕ್ಟರ್-16ರ ನಿವಾಸಿಯಾಗಿದ್ದು, ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದಾರೆ. ದೆಹಲಿಯಲ್ಲಿ ನಿರ್ಮಲಾ ಮತ್ತು ಗೌರವ್ ಪರಿಚಯವಾಗಿತ್ತು. ಪರಿಚಯ ಪ್ರೇಮವಾಗಿ ಬದಲಾದಾಗ ಇಬ್ಬರು ಮದುವೆಯಾಗಲು ನಿರ್ಧರಿಸಿದ್ದರು. ಕುಟುಂಬಸ್ಥರು ಮದುವೆ ಸಮ್ಮತಿ ಸೂಚಿಸಿದ್ದರಿಂದ ಕೊರೊನಾದಿಂದ ದಿನಾಂಕ ಮುಂದೂಡಲಾಗುತ್ತಿತ್ತು. ಕೊನೆಗೆ ಜೂನ್ 20ಕ್ಕೆ ಇಬ್ಬರ ಮದುವೆ ದಿನಾಂಕ ನಿಗದಿ ಮಾಡಲಾಗಿತ್ತು. ಅದರಂತೆಯೇ ಇಬ್ಬರ ಮದುವೆ ಸಹ ನಡೆದಿದೆ.
Advertisement
Advertisement
ಒಬ್ಬಳೇ ಬಂದಿದ್ದು ಯಾಕೆ? ವಧು ನಿರ್ಮಲಾ ತಂದೆಯಿಲ್ಲದ ಮಗಳು. ತಾಯಿ ಪಾರ್ಶ್ವವಾಯುವಿಗೆ ತುತ್ತಾಗಿದ್ದು, ನಡೆದಾಡಲು ಸಾಧ್ಯವಿಲ್ಲದ ಸ್ಥಿತಿಯಲ್ಲಿದ್ದಾರೆ. ಇತ್ತ ದೆಹಲಿಯಲ್ಲಿ ಕೊರೊನಾ ಆರ್ಭಟ ಹೆಚ್ಚಾಗಿದ್ದರಿಂದ ಜನರು ಆತಂಕಕ್ಕೊಳಗಾಗಿದ್ದಾರೆ. ಹೀಗಾಗಿ ನಿರ್ಮಲಾ ದೆಹಲಿಯಿಂದ ಕಾರ್ ಬಾಡಿಗೆ ಪಡೆದು ವರನ ಮನೆ ತಲುಪಿದ್ದಾಳೆ.