ನವದೆಹಲಿ: ನಗರದಲ್ಲಿ ಕೋವಿಡ್-10 ನಿರ್ಬಂಧಗಳು ಜಾರಿಯಲ್ಲಿರುವುದರಿಂದ ಭಾರತೀಯ ಮದ್ಯ ಮತ್ತು ವಿದೇಶಿ ಮದ್ಯಗಳನ್ನು ಹೋಂ ಡೆಲಿವರಿ ಮಾಡಲು ದೆಹಲಿ ಸರ್ಕಾರ ಅನುಮತಿ ನೀಡಿದೆ.
Advertisement
ದೆಹಲಿಯ ಹೊಸ ಅಬಕಾರಿ ನಿಯಮಗಳ ಅನುಗುಣವಾಗಿ ಆನ್‍ಲೈನ್ ಹಾಗೂ ಪೋರ್ಟಲ್‍ಗಳ ಮೂಲಕ ಮದ್ಯವನ್ನು ಆರ್ಡರ್ ಮಾಡಿ ಹೋಂ ಡೆಲಿವರಿ ಪಡೆಯಬಹುದು ಎಂದು ತಿಳಿಸಲಾಗಿದೆ. ಈ ಹಿಂದೆ ಕೂಡ ಮದ್ಯವನ್ನು ಹೋಂ ಡೆಲಿವರಿ ನೀಡಲಾಗುತ್ತಿತ್ತು. ಆದರೆ ಎಲ್-13 ಪರವಾನಗಿ ಹೊಂದಿದವವರಿಗೆ ಮಾತ್ರ ಹೋಂ ಡೆಲಿವರಿ ಮಾಡಲಾಗುತ್ತಿತ್ತು.
Advertisement
Advertisement
ಅದರಂತೆ ಈ ಬಾರಿ ಹೊಸ ಅಬಕಾರಿ ನಿಯಮಗಳ ಪ್ರಕಾರ ಎಲ್-14 ಪರವನಾಗಿ ಹೊಂದಿರುವವರಿಗೆ ಮಾತ್ರ ದೆಹಲಿಯಲ್ಲಿ ಮದ್ಯವನ್ನು ಹೋಂ ಡೆಲಿವರಿ ಮಾಡಲು ಅವಕಾಶ ನೀಡಲಾಗಿದೆ. ಇದನ್ನು ಓದಿ: ಲಸಿಕೆ ತೆಗೆದುಕೊಳ್ಳದವರಿಗೆ ಮದ್ಯ ಸಿಗಲ್ಲ – ಎಣ್ಣೆ ಪ್ರಿಯರಿಗೆ ಶಾಕ್
Advertisement
ಕಳೆದ ವರ್ಷ ಮೊದಲ ಬಾರಿ ಲಾಕ್‍ಡೌನ್ ಘೋಷಿಸಿದ ಬಳಿಕ ಅಂಗಡಿಗಳಲ್ಲಿ ಮದ್ಯಕೊಳ್ಳಲು ಜನ ಮುಗಿಬಿದ್ದಿದ್ದರು. ಈ ವೇಳೆ ಕೊರೊನಾ ಸೋಂಕಿನ ಹರಡುವಿಕೆ ಭೀತಿಯಿಂದ ಸುಪ್ರೀಂ ಕೋರ್ಟ್ ಮದ್ಯವನ್ನು ಹೋಂ ಡೆಲಿವರಿ ಮಾಡಲು ಸಲಹೆ ನೀಡಿತ್ತು.