ಮದ್ಯಪ್ರಿಯನ ಮೇಲೆ ಕ್ಯಾಶಿಯರ್ ಹಲ್ಲೆ-ಬಾರ್ ಮುಂದೆ ಮಹಿಳೆಯರ ಹೈಡ್ರಾಮಾ

Public TV
1 Min Read
CKB BAR GALATE AV 2.jpeg

ಚಿಕ್ಕಬಳ್ಳಾಪುರ: ಕಂಠಪೂರ್ತಿ ಮದ್ಯ ಸೇವಿಸಿ ದುಡ್ಡು ಕೊಡಲಿಲ್ಲ ಅಂತ ಕ್ಯಾಶಿಯರ್ ಓರ್ವನ ಮೇಲೆ ಹಲ್ಲೆ ನಡೆಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಗಣೇಶ್ ಬಾರ್ ನಲ್ಲಿ ನಡೆದಿದೆ. ಹಲ್ಲೆ ಖಂಡಿಸಿ ಮಹಿಳೆಯರು ಬಾರ್ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ.

CKB BAR GALATE AV 3.jpeg

ಮೆಹಬೂಬ್ ನಗರದ ಅಮಜದ್ ಎಂಬಾತನ ಮೇಲೆ ಬಾರ್ ಕ್ಯಾಶಿಯರ್ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಗಾಯಾಳು ಅಮಜದ್ ನನ್ನು ಚಿಂತಾಮಣಿ ತಾಲೂಕು ಆಸ್ಪತ್ರೆಗೆ ದಾಖಲಾಗಿಸಲಾಗಿದೆ. ವಿಷಯ ತಿಳಿದ ಅಮ್ಜಜದ್ ಸಂಬಂಧಿಕರು ಏಕಾಏಕಿ ಬಾರ್ ಮೇಲೆ ದಾಳಿ ಮಾಡಿದ್ದಾರೆ. ಮಹಿಳೆಯರು ಬಾರ್ ಕ್ಲೋಸ್ ಮಾಡಿಸಿ ನಡು ರಸ್ತೆಯಲ್ಲಿ ಅಡ್ಡಲಾಗಿ ಕುಳಿತು ತಮ್ಮ ಆಕ್ರೋಶವನ್ನ ಹೊರಹಾಕಿದ್ದಾರೆ.

CKB BAR GALATE AV 1.jpeg

ಅಮಜದ್ ಕುಡಿದು ಹಣ ಇರದ್ದಕ್ಕೆ ಮೊಬೈಲ್ ಒತ್ತೆ ಇಟ್ಟಿದ್ದ ಎನ್ನಲಾಗಿದ್ದು, ಇಂದು ಹಣ ನೀಡಿದಾಗ ಮೊಬೈಲ್ ನೀಡಿಲ್ಲ ಎನ್ನಲಾಗಿದೆ. ಈ ವಿಚಾರದಲ್ಲಿ ಬಾರ್ ಕ್ಯಾಶಿಯರ್ ಹಾಗೂ ಅಮಜದ್ ನಡುವೆ ಗಲಾಟೆ ನಡೆದಿದೆ ಅಂತ ತಿಳಿದು ಬಂದಿದೆ. ಘಟನೆ ನಂತರ ಅಮಜದ್ ಕುಟುಂಬಸ್ಥರು ಬಾರ್ ಮೇಲೆ ದಾಳಿ ಮಾಡಿ ಧ್ವಂಸ ಮಾಡಲು ಯತ್ನಿಸಿದ್ದು ಸ್ಥಳಕ್ಕೆ ಬಂದ ಚಿಂತಾಮಣಿ ನಗರ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Share This Article