– ವಿಮಾನ ಏರುವ ಮುನ್ನ ಮದ್ಯ ಸೇವನೆ
– ಸೀಟ್ ಬೆಲ್ಟ್ ಹಾಕಲು ಒಪ್ಪದ ಮಹಿಳೆ
ಲಂಡನ್: ಕೊರೊನಾ ಮಹಾಮಾರಿ ಇಡೀ ಜೀವನಶೈಲಿಯನ್ನೇ ಬದಲಾಯಿಸಿದೆ. ಹಲವು ಕುಟುಂಬ ಹಾಗೂ ಜೀವನವನ್ನು ನಾಶ ಮಾಡಿದೆ. ಆದರೂ ಕೊರೊನಾ ವಿಚಾರವಾಗಿ ಜನ ಎಚ್ಚರಿಕೆಗೊಳ್ಳುತ್ತಿಲ್ಲ. ಇತ್ತೀಚೆಗೆ ಕುಡಿದ ಮತ್ತಿನಲ್ಲಿ ಮಾಸ್ಕ್ ಧರಿಸಲು ನಿರಾಕರಿಸಿದ 34 ವರ್ಷದ ಮಹಿಳೆಯೊಬ್ಬಳನ್ನು ರಯಾನ್‍ಏರ್ ವಿಮಾನದಿಂದ ಹೊರಹಾಕಲಾಗಿದೆ.
Advertisement
ಹೇಲಿ ಬಾಕ್ಸ್ ಎಂಬ ಮಹಿಳೆ ವೃತ್ತಿಯಲ್ಲಿ ಬ್ಯೂಟಿಷಿಯನ್ ಆಗಿದ್ದು, ಮೃತಪಟ್ಟ ಸ್ನೇಹಿತನ ಪ್ರೀತಿಪಾತ್ರರಿಗೆ ಸಾಂತ್ವನ ಹೇಳಲು ಇಬಿಜಾಗೆ ತೆರಳುತ್ತಿದ್ದಳು. ವಿಮಾನ ಹತ್ತುವ ಮೊದಲು ಹೇಲಿ ಬಾಕ್ಸ್ ಮ್ಯಾಂಚೆಸ್ಟರ್ ವಿಮಾನ ನಿಲ್ದಾಣದ ಕ್ಲೇಟನ್ ಹೋಟೆಲ್‍ನಲ್ಲಿ ಒಂದು ವೈನ್ ಬಾಟಲ್ ಪೂರ್ತಿ ಕುಡಿದು, ಒಂದು ಗಂಟೆ ಮಲಗಿದ್ದಳು. ಬಳಿಕ ವಿಮಾನ ನಿಲ್ದಾಣದಲ್ಲಿ ಮತ್ತೊಂದು ಗ್ಲಾಸ್ ವೈನ್ ಕುಡಿದು ವಿಮಾನ ಏರಿದ್ದಾಳೆ. ತನ್ನ ಸೀಟ್ ಮೇಲೆ ಮಹಿಳೆ ಕುಳಿತ ನಂತರ ಫ್ಲೈಟ್ ಅಟೆಂಡರ್‍ಗಳು ಪದೇ ಪದೇ ಮಾಸ್ಕ್ ಹಾಕಿಕೊಳ್ಳಲು ತಿಳಿಸಿದ್ದಾರೆ.
Advertisement
Advertisement
ಕೊನೆಗೆ ಕ್ಯಾಬಿನ್ ಮ್ಯಾನೆಜರ್ ಮಾಸ್ಕ್ ಧರಿಸದೇ ಇದ್ದರೆ ಪೊಲೀಸರ ಬಳಿ ಕರೆಯುವುದಾಗಿ ಎಚ್ಚರಿಕೆ ನೀಡಿದ್ದಾರೆ. ಆದರೆ ಹೇಲಿ ಬಾಕ್ಸ್ ಇದ್ಯಾವುದಕ್ಕೂ ಕಿವಿ ಕೊಡದೇ ಸೀಟ್ ಬೆಲ್ಟ್ ಧರಿಸಲು ಕೂಡ ನಿರಾಕರಿಸಿದ್ದಾಳೆ. ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ನಂತರ ಅದೇ ವಿಮಾನದಲ್ಲಿ ಹೇಗಾದರೂ ಪ್ರಯಾಣಿಸಲು ಹೇಲಿ ಬಾಕ್ಸ್‍ಪ್ರಯತ್ನಿಸಿದಳು. ಆದರೆ ಫ್ಲೈಟ್‍ನ ಅಧಿಕಾರಿಗಳು ಹಾಗೂ ಸಿಬ್ಬಂದಿ ಅವಳನ್ನು ವಿಮಾನದಿಂದ ಹೊರಹಾಕಿದ್ದಾರೆ.
Advertisement
ಈ ಕುರಿತಂತೆ ಪ್ರಾಸಿಕ್ಯೂಟರ್ ರಾಚೆಲ್ ಡಿಕ್ಸನ್, ಮೊದಲಿಗೆ ಕ್ಯಾಬಿನೆಟ್ ಮ್ಯಾನೇಜರ್ ಸೂಚನೆಗಳನ್ನು ಪಾಲಿಸುವಂತೆ ಸಮಾಧಾನದಿಂದ ಕೇಳಿದ್ದಾರೆ. ಹೇಲಿ ಬಾಕ್ಸ್ ಪಾಸ್‍ಪೋರ್ಟ್ ನೀಡುವಂತೆ ಹಲವಾರು ಬಾರಿ ವಿನಂತಿಸಿದ್ದಾರೆ. ಆದರೆ ಇದ್ಯಾವುದಕ್ಕೂ ಮಹಿಳೆ ಕಿವಿಕೊಡಲಿಲ್ಲ. ಕೊನೆಗೆ ಕ್ಯಾಬಿನೆಟ್ ಮ್ಯಾನೇಜರ್ ಆಕೆಯನ್ನು ವಿಮಾನದಿಂದ ಹೊರಹಾಕಲು ನಿರ್ಧರಿಸಿದರು ಎಂದು ಸೋಮವಾರ ತಿಳಿಸಿದ್ದಾರೆ.
ನಂತರ ಘಟನೆ ವಿಚಾರವಾಗಿ ಹೇಲಿ ಬಾಕ್ಸ್, ನನಗೆ ಯಾವುದು ಕೂಡ ನೆನಪಾಗುತ್ತಿಲ್ಲ. ನಿದ್ರೆಯ ಕೊರತೆಯಿಂದ ಹಾಗೂ ಆಹಾರವನ್ನು ಸೇವಿಸದೇ ಬೆಳಗ್ಗೆಯೇ ವೈನ್ ಸೇವಿಸಿದ್ದರಿಂದ ಘಟನೆ ನಡೆದಿದೆ ಎಂದು ಪ್ರತಿಕ್ರಿಯಿಸಿದ್ದಾಳೆ.