ಮಂಡ್ಯ: ಬೆಂಗಳೂರಿನಿಂದ ಮಳವಳ್ಳಿಗೆ ಕಾರ್ಯಕ್ರಮಕ್ಕೆ ಬರುತ್ತಿದ್ದಾಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಗ ಮಧ್ಯದಲ್ಲಿ ಗಾಡಿನಿಲ್ಲಿಸಿ ಮದ್ದೂರು ವಡೆ ಸವಿದಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಆಹಾರ ಪದಾರ್ಥಗಳು ಎಂದರೆ ಎಲ್ಲಿಲ್ಲದ ಪ್ರೀತಿ. ಮಂಸಹಾರ ಮತ್ತು ಕುರುಕಲು ತಿಂಡಿಗಳು ಎಂದರೆ ಪಂಚಪ್ರಾಣ. ಹೀಗಾಗಿ ಅವರು ಮಾರ್ಗ ಮಧ್ಯದಲ್ಲಿ ಸಿಗುವ ಅಂಗಡಿಯಲ್ಲಿ ಮದ್ದೂರು ವಡೆಯ ಟೇಸ್ಟ್ ನೋಡಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರಿನ ಶಿವಪುರದ ಬಳಿ ಇರುವ ಮದ್ದೂರು ಟಿಫಾನಿಸ್‍ನ ಮದ್ದೂರು ವಡೆ ಎಂದರೆ ಸಿದ್ದರಾಮಯ್ಯ ಅವರಿಗೆ ತುಂಬಾ ಇಷ್ಟವಾಗಿದೆ. ಈ ಭಾಗದಲ್ಲಿ ಹೋಗುವಾಗ ಮದ್ದೂರು ಟಿಫಾನಿಸ್‍ನ ಮದ್ದೂರು ವಡೆಯ ಟೇಸ್ಟ್ ನೋಡದೇ ಮುಂದೆ ಹೋಗೋದೆ ಇಲ್ಲ.
ಇಂದು ಬೆಂಗಳೂರಿನಿಂದ ಮಳವಳ್ಳಿಗೆ ಕಾರ್ಯಕ್ರಮದ ನಿಮಿತ್ತ ಬರುವಾಗ ಮಾರ್ಗ ಮಧ್ಯದಲ್ಲಿ ಮದ್ದೂರು ಟಿಫಾನಿಸ್ ಬಳಿ ಕಾರು ನಿಲ್ಲಿಸಿ ಮದ್ದೂರು ವಡೆಯನ್ನು ಚಟ್ನಿ ಜೊತೆ ಸವಿದಿದ್ದಾರೆ. ಈ ವೇಳೆ ಕಾಂಗ್ರೆಸ್ ಮುಖಂಡರು ಸಹ ಅವರೊಂದಿಗೆ ಇದ್ದರು. ಕಳೆದ ಶನಿವಾರವು ಸಹ ಮದ್ದೂರು ಟಿಫಾನಿಸ್‍ನಲ್ಲಿ ವಡೆಯನ್ನು ಸವಿದಿದ್ದರು.