ಚೆನ್ನೈ: ನಟಿ ಸಾಯಿಪಲ್ಲವಿ ಲಾಕ್‍ಡೌನ್ ದಿನಗಳನ್ನು ಸಖತ್ ಎಂಜಾಯ್ ಮಾಡುತ್ತಿದ್ದು, ಸಂಬಂಧಿಕರ ಮದುವೆ ಸಮಾರಂಭಗಳಲ್ಲಿ ಭಾಗವಹಿಸಿ, ಕುಟುಂಬಸ್ಥರು ಹಾಗೂ ಸ್ನೇಹಿತರೊಂದಿಗೆ ಆನಂದದ ಕ್ಷಣಗಳನ್ನು ಕಳೆಯುತ್ತಿದ್ದಾರೆ.
ಈ ಫೋಟೋಗಳನ್ನು ಇದೀಗ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಚಿತ್ರಗಳನ್ನು ನೋಡಿದ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಅಲ್ಲದೆ ಸಾಯಿ ಪಲ್ಲವಿ ಕನ್ನಡ ಬಳಕೆ ಬಗ್ಗೆ ಕನ್ನಡಿಗರು ಸಹ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
View this post on Instagram
ಸಹೋದರಿ ಪೂಜಾ ಕಣ್ಣನ್ ಹಾಗೂ ಇತರ ಸೋದರ ಸಂಬಂಧಿಗಳೊಂದಿಗೆ ಫುಲ್ ಮಜಾ ಮಾಡಿರುವ ಫೊಟೋವನ್ನು ಪೋಸ್ಟ್ ಮಾಡಿದ್ದಾರೆ. ಮೇಕಪ್ ಹಾಕಿಕೊಳ್ಳದೆ, ಜೀನ್ಸ್ ಹಾಗೂ ಸ್ಲೀವ್‍ಲೆಸ್ ಟಿ ಶರ್ಟ್ ಧರಿಸಿ ಫೋಟೋಗೆ ಪೋಸ್ ನೀಡಿದ್ದಾರೆ. ಒಟ್ಟು ಎರಡು ಪೋಸ್ಟ್ ಮಾಡಿದ್ದು, ಒಂದು ಪೋಸ್ಟ್ ನಲ್ಲಿ ‘ಮದುವೆ ಸ್ಕ್ವಾಡ್’ ಎಂದು ಬರೆದಿದ್ದಾರೆ. ಈ ಮೂಲಕ ಮದುವೆ ಕನ್ನಡ ಪದವನ್ನು ಬಳಸಿದ್ದಾರೆ.
View this post on Instagram
ಮದುವೆ ಎಂಬ ಪದ ಬಳಸಿದ್ದಕ್ಕೆ ಹಲವು ಅಭಿಮಾನಿಗಳು ಸಂಬಂಧಿಕರ ವಿವಾಹದಲ್ಲಿ ಭಾಗವಹಿಸಿರಬಹುದು ಎಂದು ಊಹಿಸಿದ್ದಾರೆ. ಸಾಯಿ ಪಲ್ಲವಿ ಅವರು ಮೂಲತಃ ತಮಿಳುನಾಡಿನ ನಿಲ್ಗಿರಿಸ್ ಜಿಲ್ಲೆಯವರಾಗಿದ್ದು, ಇವರ ಮಾತೃ ಭಾಷೆ ಬಡಗ. ಆದರೆ ಕನ್ನಡದಲ್ಲಿ ಮದುವೆ ಎಂದು ಬರೆದುಕೊಂಡಿರುವ ಬಗ್ಗೆ ಫ್ಯಾನ್ಸ್ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.
View this post on Instagram
ಇತ್ತೀಚೆಗೆ ಸಾಯಿ ಪಲ್ಲವಿ ಸ್ಕೈ ಬ್ಲ್ಯೂ ಸೀರೆಯುಟ್ಟು ಮಿಂಚಿದ್ದರು. ಈ ಫೋಟೋಗಳನ್ನು ಸಹ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಪೋಸ್ಟ್ ನೋಡಿದ ಅಭಿಮಾನಿಗಳು ಲೈಕ್, ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಮದುವೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ.