ಸಾಮಾನ್ಯವಾಗಿ ಸಾಂಪ್ರಾದಾಯಿಕ ಆಭರಣ ತೊಡದೇ ಮದುಮಗಳ ನೋಟವು ಪರಿಪೂರ್ಣಗೊಳ್ಳವುದೇ ಇಲ್ಲ. ಹಿಂದಿನ ಕಾಲದಲ್ಲಿ ಮದುವೆಯ ಸಮಯದಲ್ಲಿ ವಧು ಸಿಂಗಾರಗೊಳಿಸಲು ಮುಡಿಯಿಂದ ಪಾದದವರೆಗೂ 16 ಆಭರಣಗಳನ್ನು ಹಾಕಲಾಗುತ್ತಿತ್ತು. ಆದರೆ ಇಂದಿನ ಕಾಲದ ವಧು 16 ಆಭರಣಗಳನ್ನು ಧರಿಸಲೇ ಬೇಕೆಂಬ ಅಗತ್ಯವಿಲ್ಲ. ಹೀಗಾಗಿ ಅವರ ಪೂರ್ವಜರು ನೀಡಿದ ಅಥವಾ ತಮ್ಮ ನೆಚ್ಚಿನ ಅಂಗಡಿಗಳಲ್ಲಿ ಆಭರಣ ಖರೀದಿಸಿ ಕಡಿಮೆ ಆಭರಣವನ್ನು ತೊಟ್ಟು ವಧುವಿನಂತೆ ಮಿಂಚುತ್ತಾರೆ.
ಆದರೆ ಎಷ್ಟೋ ಮಹಿಳೆಯರಿಗೆ ಮದುವೆಯ ಸಮಯದಲ್ಲಿ ವಧುವಿನಂತೆ ಕಾಣಿಸಿಕೊಳ್ಳಲು ಮುಖ್ಯವಾಗಿ ಧರಿಸಬೇಕಾದ ಆಭರಣಗಳು ಯಾವುದೆಂಬುವುದರ ಬಗ್ಗೆ ತಿಳಿದಿರುವುದಿಲ್ಲ. ಅಂತಹವರಿಗೆ ಕೆಲವೊಂದು ಮಾಹಿತಿ ಈ ಕೆಳಗಿನಂತಿದೆ.
ವಧುವಿನ ಸೆಟ್: ವಧುವಿನ ಸೆಟ್‍ನಲ್ಲಿ ನೆಕ್ಲೆಸ್ ಹಾಗೂ ಜುಮ್ಕಿ ಸೇರಿದಂತೆ ಕೆಲವು ಬೇಸಿಕ್ ಆಭರಣಗಳು ಇರುತ್ತದೆ. ಮದುವೆ ಸಮಯದಲ್ಲಿ ವಧುವಿಗೆ ಹೆಚ್ಚಾಗಿ ಹಲವಾರು ಶೈಲಿಯ ಹಾರದ ಸರಗಳನ್ನು ಹಾಕುತ್ತಾರೆ.
ಬೈತಲೆ ಬೊಟ್ಟು: ವಧುವಿಗೆ ತೊಡಿಸುವ ಆಭರಣಗಳಲ್ಲಿ ಬೈತಲೆ ಬೊಟ್ಟು ಕೂಡ ಒಂದು. ಕೂದಲಿನ ಮಧ್ಯೆ ಕ್ರಾಫ್ ತೆಗೆದು ಹಣೆಯ ಮಧ್ಯೆ ಇದನ್ನು ಸಿಗಿಸಲಾಗುತ್ತದೆ. ಹಿಂದೂ ಪುರಾಣದಲ್ಲಿ ಇದನ್ನು ಮೂರನೇ ಕಣ್ಣು ಅಥವಾ ಆತ್ಮದ ಶಕ್ತಿ ಎಂದು ಪ್ರತಿನಿಧಿಸಲಾಗುತ್ತದೆ. ಇದು ಮಹಿಳೆ ಹಾಗೂ ಪುರುಷ ಮಧ್ಯೆ ಇರುವ ಆಧ್ಯಾತ್ಮಿಕ, ದೈಹಿಕ ಮತ್ತು ಭಾವನಾತ್ಮಕ ಮಟ್ಟದ ಪವಿತ್ರ ಒಕ್ಕೂಟವನ್ನು ಸೂಚಿಸುವ ಸಂರಕ್ಷಣೆಯ ಕೇಂದ್ರವಾಗಿದೆ.
ಹಾಥ್ ಪೂಲ್: ಯಾವುದೇ ಆಭರಣಗಳನ್ನು ಧರಿಸಿದರು ವಧುವಿನ ಕೈ ಮತ್ತು ಬೆರಳುಗಳ ಮೇಲೆ ಹ್ಯಾಥ್‍ಪೂಲ್‍ನಂತೆ ಸುಂದರವಾಗಿ ಯಾವುದು ಕಾಣಿಸಲು ಸಾಧ್ಯವಿಲ್ಲ. ಹ್ಯಾಥ್‍ಫೂಲ್ ಎಂದರೆ ಫ್ಲವರ್ ಆಫ್ ದಿ ಆ್ಯಂಡ್ (ಕೈ ಮೇಲೆ ಹೂವು) ಎಂದರ್ಥ. ಹಸ್ತದ ಹಿಂಭಾಗ ಹೂವಿನಂತೆ ಆಭರಣವನ್ನು ವಿನ್ಯಾಸಗೊಳಿಸಲಾಗಿದ್ದು, ಮುತ್ತು, ರತ್ನ, ಕಮಲ, ಸರಗಳಿಂದ ತಯಾರಿಸಲಾಗಿದೆ. ಈ ಆಭರಣವು ವಧುವುಗೆ ಗ್ಲಾಮರ್ ಲುಕ್ ನೀಡುತ್ತದೆ.
ಮೂಗು ಬೊಟ್ಟು (ನೋಸ್ ರಿಂಗ್): ವೃತ್ತಾಕಾರದ ಮುಗುತಿ ವಧುವಿನ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಈ ರೀತಿಯ ಮೂಗುತಿಯನ್ನು ಪಾರ್ವತಿ ದೇವರು ಮದುವೆಯ ಸಮಯದಲ್ಲಿ ಧರಿಸಿದ್ದರು ಎಂದು ಪುರಾಣದಲ್ಲಿ ತಿಳಿಸಲಾಗಿದೆ. ಈ ರೀತಿಯ ಮುಗುತಿ ಭಾರವಿರುವುದರಿಂದ ನಿಮಗೆ ಧರಿಸಲು ಆನ್‍ಕಂಫರ್ಟ್‍ಟೇಬಲ್ ಫೀಲ್ ಆದಲ್ಲಿ ಧರಿಸುವ ಅಗತ್ಯವಿಲ್ಲ. ಇದೀಗ ಕಡಿಮೆ ತೂಕದ ಮುಗುತಿ ಹಾಗೂ ಪ್ರೆಸಿಂಗ್ ಮೂಗು ಬೊಟ್ಟು ದೊರೆಯುತ್ತದೆ.
ಬಳೆಗಳು: ವಧು ಬಳೆಗಳನ್ನು ತೊಡದೇ ಮದುವೆಯ ಸಂಪೂರ್ಣಗೊಳ್ಳುವುದಿಲ್ಲ. ಬಳೆಗಳು ಭಾರತೀಯ ಸಂಸ್ಕøತಿಯ ಒಂದು ಭಾಗವಾಗಿದೆ. ಇಂದಿನ ಮಾಡ್ರೆನ್ ವಧುಗಳು ಕೆಂಪು ಮತ್ತು ಹಸಿರಿನ ಸಾಂಪ್ರದಾಯಿಕ ಬಳೆಯನ್ನೇ ತೊಡಬೇಕೆಂದಿಲ್ಲ. ಮುತ್ತಿನ, ಚಿನ್ನದ ಮತ್ತು ವಜ್ರದ ಬಳೆಗಳನ್ನು ತೊಡುತ್ತಾರೆ. ಅಲ್ಲದೆ ತಮ್ಮ ಉಡುಪಿಗೆ ಹೊಂದಿಕೊಳ್ಳುವಂತಹ ಬಳೆಗಳನ್ನು ಹಾಕಿಕೊಂಡು ವಧು ಮದುವೆಯ ಸಮಯದಲ್ಲಿ ಕಂಗೋಳಿಸುತ್ತಾರೆ. ಬಳೆ ನಿಮ್ಮ ಕೈಗಳನ್ನು ಪೂರ್ಣಗೊಳಿಸುವುದಲ್ಲದೇ ಸುಂದರವಾಗಿ ಕಾಣುವಂತೆ ಮಾಡುತ್ತದೆ.
ಗೆಜ್ಜೆ : ಸರಳವಾದಂತಹ ಗೆಜ್ಜೆಯನ್ನು ಧರಿಸಿದರು ವಧುವಿನ ಕಾಲುಗಳು ಸುಂದರವಾಗಿ ಕಾಣಿಸುತ್ತದೆ. ಬೆಳ್ಳಿ ಲೋಹ ಮತ್ತು ಚಿಕ್ಕ ಮಣಿಯಂತಿರುವ ಗಂಟೆಗಳನ್ನು ಅಳವಡಿಸುವ ಮೂಲಕ ಗೆಜ್ಜೆಯನ್ನು ತಯಾರಿಸಲಾಗುತ್ತದೆ. ವಧು ನಡಿಯುವಾಗ ಗೆಜ್ಜೆ ಸದ್ದು ಮಾಡುತ್ತದೆ. ಅಲ್ಲದೆ ಗೆಜ್ಜೆ ಧರಿಸಿ ವಧು ಹಸೆಮಣೆಯತ್ತ ಬರುವಾಗ ಸಾಕ್ಷತ್ ಲಕ್ಷ್ಮಿ ದೇವಿ ಪ್ರವೇಶಿಸಿದಂತೆ ತೋರುತ್ತದೆ.