ಮದುವೆ ವೇದಿಕೆಯಲ್ಲಿಯೇ ವರನಿಗೆ ತಿನ್ನಿಸಬೇಕಾಗಿದ್ದ ಸ್ವೀಟ್ನನ್ನು ವಧು ಕೆಳಕ್ಕೆ ಎಸೆದಿರುವ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಪ್ರಸ್ತುತ ಮದುವೆ ಸೀಸನ್ ಆಗಿರುವುದರಿಂದ, ಕೋವಿಡ್ ನಡುವೆಯೂ ದೇಶದ ಹಲವಾರು ಭಾಗಳಲ್ಲಿ ಸಾಕಷ್ಟು ವಿವಾಹ ಸಮಾರಂಭಗಳು ನಡೆಯುತ್ತಿದೆ. ಅದರಲ್ಲಿಯೂ ಭಾರತೀಯ ವಿವಾಹಗಳಲ್ಲಿ ಅನೇಕ ಟ್ವಿಸ್ಟ್ಗಳಿರುತ್ತದೆ. ದಿನನಿತ್ಯ ಅನೇಕ ವಿವಾಹಗಳಲ್ಲಿ ನಡೆದ ಘಟನೆಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಸದ್ಯ ವಿವಾಹ ಸಮಾರಂಭವೊಂದರಲ್ಲಿ ವಧು ವರನಿಗೆ ತಿನ್ನಿಸಬೇಕಾದ ಸ್ವೀಟ್ನನ್ನು ಕೋಪದಿಂದ ಎಸೆದಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Advertisement
Advertisement
ವೀಡಿಯೋದಲ್ಲಿ, ವಧು ವರ ಇಬ್ಬರು ಎದುರಿಗೆ ನಿಂತುಕೊಂಡಿರುತ್ತಾರೆ. ಈ ವೇಳೆ ಕೆಲವು ಮಹಿಳೆಯರು ಸಿಹಿಯನ್ನು ತಂದು ವಧುವಿಗೆ ವರನಿಗೆ ತಿನಿಸುವಂತೆ ನೀಡುತ್ತಾರೆ. ಆಗ ವಧು ಸ್ವೀಟ್ನನ್ನು ತಿನಿಸಲು ಮುಂದಾಗುತ್ತಾಳೆ.. ಈ ವೇಳೆ ವರ ಹಿಂಜರಿಯಲು ಆರಂಭಿಸುತ್ತಾನೆ. ಇದರಿಂದ ಕೋಪಗೊಂಡ ವಧು ಕೈನಲ್ಲಿದ್ದ ಸ್ಟೀಟ್ನನ್ನು ವೇದಿಕೆಯಲ್ಲಿಯೇ ಎಲ್ಲರ ಮುಂದೆ ಕೆಳಗೆ ಎಸೆದಿದ್ದಾಳೆ.
Advertisement
ಈ ವೀಡಿಯೋವನ್ನು ಯೂಟ್ಯೂಬ್ ಇಂಡಿಯಾ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದು, ವೀಡಿಯೋ ವೈರಲ್ ಆಗುತ್ತಿದ್ದಂತೆಯೇ 43,00ಕ್ಕೂ ಅಧಿಕ ಲೈಕ್ಸ್ ಬಂದಿದ್ದು, ಅನೇಕ ಕಮೆಂಟ್ಗಳು ಹರಿದುಬಂದಿದೆ. ಇದನ್ನೂ ಓದಿ: ಚಲಿಸುತ್ತಿರುವ ರೈಲಿನಲ್ಲಿ ಮದುವೆಯಾದ ಪ್ರಣಯ ಪಕ್ಷಿಗಳು
Advertisement
View this post on Instagram