ಭೋಪಾಲ್: ಮದುವೆಯಾಗಿ ಮಾರನೆ ದಿನ ಮನೆ ಬಿಟ್ಟ ಸೊಸೆ ಹೋಗುತ್ತಾ ಹಣ, ಒಡವೇನೂ ಅಬೇಸ್ ಮಾಡಿಕೊಂಡು ಹೋಗಿರುವ ಘಟನೆ ಮಧ್ಯಪ್ರದೇಶದ ಚತ್ರಾಪುರದಲ್ಲಿ ನಡೆದಿದೆ.
ಮದುವೆ ಮಾಡಿಕೊಂಡು ಗಂಡನ ಮನೆಗೆ ಹೋಗಿ ಚೆನ್ನಾಗೆ ಜೀವನನಡೆಸಿಕೊಂಡು ತನ್ನದೆಯಾದ ಒಂದು ಕುಟುಂಬ ಕಟ್ಟೋದು ಒಂದು ಹೆಣ್ಣಿನ ಜವಾಬ್ದಾರಿ. ಆದರೆ ಇಲ್ಲೊಬ್ಬ ಸೊಸೆ ಮದುವೆಯಾದ ಮರುದಿನವೇ ಕಳ್ಳತನ ಮಾಡಿ ಪೊಲೀಸರ ಅಥಿತಿಯಾಗಿದ್ದಾಳೆ.
ಮದುವೆಯಾಗಿ ಮನೆಗೆ ಬಂದ ಮಾರನೇ ದಿನವೆ ಅತ್ತೆಯ ಎಲ್ಲಾ ಒಡವೆ, ದುಡ್ಡನ್ನು ದೋಚಿ ಸೊಸೆ ಎಸ್ಕೇಪ್ ಆಗಿದ್ದಾಳೆ. ಈ ಮಹಿಳೆ ಗ್ರಾಮೀಣ ಭಾಗದ ಪುರುಷರನ್ನು ಮದುವೆಯಾಗುವುದು. ಮದುವೆ ನಂತರ ಮನೆ ಹೋಗಿ ಇರುವ ಹಣ, ಒಡವೆಯನ್ನು ಕದ್ದು ಅಲ್ಲಿಂದ ಓಡುವುದು ಬೇರೆ ಕಡೆ ಮತ್ತೆ ಹೀಗೆ ಬೇರೆ ಮನೆ ಸೇರಿಕೊಳ್ಳುತ್ತಿದ್ದಳು. ಈ ರೀತಿ ಸುಮಾರು ಬಾರಿ ಮಾಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ಇದೀಗ ಮಹಿಳೆಯನ್ನು ಬಮಿತಾ ಪೊಲೀಸರು ಅರೆಸ್ಟ್ ಮಾಡಿ ವಿಚಾರಣೆ ಮಾಡಿದ್ದಾರೆ.
ಈ ಪ್ರಕರಣ ಒಂದು ದೊಡ್ಡ ಪ್ಲ್ಯಾನ್ ಆಗಿರುತ್ತದೆ. ಮಹಿಳೆ ಗ್ರಾಮೀಣ ಪ್ರದೇಶದ ಪುರುಷರನ್ನು ಮದುವೆಯಾಗುತ್ತಾಳೆ. ಆಕೆ ತಾಯಿಯ ಮನೆಗೆ ಭೇಟಿ ನೀಡುವ ನೆಪದಲ್ಲಿ ನಗದು ಮತ್ತು ಆಭರಣಗಳೊಂದಿಗೆ ಪರಾರಿಯಾಗುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.