ಭಾರತದ ಸ್ಟ್ರೀಟ್ ಫುಡ್‍ಗಳಲ್ಲಿ ಸಿಗುವ ಅತ್ಯಂತ ಜನಪ್ರಿಯವಾದ ತಿಂಡಿ ಅಂದರೆ ಗೋಲ್‍ಗಪ್ಪ. ಸಾಮಾನ್ಯವಾಗಿ ಗೋಲ್‍ಗಪ್ಪ ಅಂದರೆ ಎಲ್ಲರಿಗೂ ಇಷ್ಟವಾಗುತ್ತದೆ ಮತ್ತು ಅದನ್ನು ಸವಿಯಲು ಜನ ಕ್ಯೂನಲ್ಲಿ ನಿಂತು ತಿನ್ನುವುದನ್ನು ನೋಡಿದ್ದೇವೆ. ಸದ್ಯ ಗೋಲ್‍ಗಪ್ಪವನ್ನು ಇಷ್ಟಪಡುವ ವಧುಯೊಬ್ಬರು ಗೋಲ್ ಗಪ್ಪವನ್ನೇ ಕಿರೀಟವಾಗಿ ಧರಿಸಿರುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ವೀಡಿಯೋದಲ್ಲಿ ದಕ್ಷಿಣ ಭಾರತದ ಯುವತಿ ವಧುವಿನ ಆಭರಣ ಮತ್ತು ರೇಷ್ಮೆ ಸೀರೆ ಉಟ್ಟು, ಮದುವೆಯ ದಿನ ಗೋಲ್‍ಗಪ್ಪ ಹಾರ ಧರಿಸಿ, ತಟ್ಟೆಯೊಂದರಲ್ಲಿ ಗೋಲ್‍ಗಪ್ಪವನ್ನು ಇಟ್ಟುಕೊಂಡಿರುತ್ತಾರೆ. ಇದೇ ವೇಳೆ ವ್ಯಕ್ತಿಯೊಬ್ಬರು ವಧುವಿನ ತಲೆಯ ಮೇಲೆ ಗೋಲ್‍ಗಪ್ಪ ಕಿರೀಟವನ್ನು ಹಾಕುತ್ತಾರೆ. ಅದನ್ನು ಕಂಡು ವಧು ಜೋರಾಗಿ ನಗಲು ಆರಂಭಿಸುತ್ತಾರೆ. ಇದನ್ನೂ ಓದಿ: ಪಾನಿಪುರಿ C/o ಯಮಪುರಿ-ಪಬ್ಲಿಕ್ ಟಿವಿ ಸ್ಟಿಂಗ್ ಆಪರೇಷನ್
View this post on Instagram
ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಕೆಲವರು ಹುಡುಗಿಯರು ಗೋಲ್‍ಗಪ್ಪವನ್ನು ಯಾಕೆ ಇಷ್ಟಪಡುತ್ತಾರೆ ಎಂದು ಪ್ರಶ್ನಿಸಿದರೆ, ಮತ್ತೆ ಕೆಲವರು ಹಾರ್ಟ್‍ನಂತಹ ಹಲವಾರು ಎಮೋಜಿಗಳನ್ನು ಕಳುಹಿಸಿದ್ದಾರೆ. ಇದನ್ನೂ ಓದಿ: ಗೋಲ್‍ಗಪ್ಪಾದಲ್ಲಿ ರಿಂಗ್ ಇಟ್ಟು ಪ್ರಿಯತಮೆಗೆ ಪ್ರಪೋಸ್ ಮಾಡಿದ ಯುವಕ..!