ಮತ್ತೊಮ್ಮೆ ರಸ್ತೆ ಬದಿ ಟೀ ಮಾರಿ ಸುದ್ದಿಯಾದ ಮಮತಾ ಬ್ಯಾನರ್ಜಿ

Public TV
1 Min Read
MAMTA BANARJEE

ಕೋಲ್ಕತ್ತಾ: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಮತ್ತೊಮ್ಮೆ ರಸ್ತೆ ಬದಿಯಲ್ಲಿ ಟೀ ಮಾರಾಟ ಮಾಡಿ ಸುದ್ದಿಯಾಗಿದ್ದಾರೆ.

ಹೌದು. ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮುನ್ನ ದಿನವಾದ ಇಂದು ಮಮತಾ ಅವರು ರಸ್ತೆ ಬದಿಯ ಅಂಗಡಿಗೆ ತೆರಳಿ ಇತತರಿಗೆ ಟೀ ಕೊಟ್ಟು ಬಳಿಕ ತಾವೂ ಕುಡಿದಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ವೀಡಿಯೋದಲ್ಲಿ ಏನಿದೆ…?
ಸ್ಥಳೀಯ ಜನರ ಜೊತೆ ಸಂವಹನ ನಡೆಸಲು ತೆರಳಿದ್ದ ಮಮತಾ ಅವರು ರಸ್ತೆ ಬದಿಯಲ್ಲಿದ್ದ ಟೀ ಸ್ಟಾಲ್ ಗೆ ತೆರಳಿದ್ದಾರೆ. ನಂತರ ಅಲ್ಲಿದ್ದ ಪೇಪರ್ ಗ್ಲಾಸುಗಳಿಗೆ ತಾವೇ ಟೀ ಹೊಯ್ದು ಅದನ್ನು ಸುತ್ತಮುತ್ತ ಇದ್ದವರಿಗೆ ನೀಡಿದ್ದಾರೆ. ಕೊನೆಗೆ ತಾವು ಕೂಡ ಕುಡಿದಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.

ಮಮತಾ ಅವರು ಸಾರ್ವಜನಿಕ ಸ್ಥಳಗಳಲ್ಲಿ ಟೀ ಸರ್ವ್ ಮಾಡುವುದು ಇದೇ ಮೊದಲಲ್ಲ. ಈ ಹಿಂದೆಯೂ ಅಂದರೆ 2019ರ ಆಗಸ್ಟ ತಿಂಗಳಲ್ಲಿಯೂ ದುತ್ತಾಪುರ ಗ್ರಾಮದಲ್ಲಿ ಟೀ ಸ್ಟಾಲ್ ಗೆ ತೆರಳಿದ್ದರು. ಅಲ್ಲದೆ ಸ್ವತಃ ತಾವೇ ಟೀ ಮಾಡಿ ಇತರರಿಗೆ ನೀಡಿ ಸುದ್ದಿಯಾಗಿದ್ದರು.

ಕೆಲವು ಬಾರಿ ನಾವು ಮಾಡುವ ಚಿಕ್ಕ ಚಿಕ್ಕ ಕೆಲಸಗಳು ಕೂಡ ನಮಗೆ ಅತ್ಯಂತ ಸಂತಸವನ್ನು ನೀಡುತ್ತವೆ. ಅವುಗಳಲ್ಲಿ ಉತ್ತಮವಾದ ಟೀ ಮಾಡಿ ಅದನ್ನು ಹಂಚುವುದಾಗಿದೆ ಎಂದು ಮಮತಾ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಬರೆದುಕೊಂಡಿದ್ದರು.

ಇದೀಗ ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ನಂದಿಗ್ರಾಮ್ ನಲ್ಲಿ ಎರಡು ದಿನಗಳ ಕ್ಯಾಂಪೇನ್ ಮಾಡಲು ಆಗಮಿಸಿದ್ದರು. ಈ ವೇಳೆ ಮತ್ತೊಮ್ಮೆ ಟೀ ಸ್ಟಾಲ್ ಗೆ ತೆರಳಿ ಟೀ ನೀಡುವ ಮೂಲಕ ಕ್ಷೇತ್ರದ ಜನರನ್ನು ತನ್ನತ್ತ ಸೆಳೆಯುವ ಪ್ರಯತ್ನ ಮಾಡಿದ್ದಾರೆ.

8 ಹಂತಗಳಲ್ಲಿ ಚುನಾವಣೆ: ಪಶ್ಚಿಮ ಬಂಗಾಳದಲ್ಲಿ 8 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್.27, ಏಪ್ರಿಲ್.1, ಏಪ್ರಿಲ್.6, ಏಪ್ರಿಲ್.10, ಏಪ್ರಿಲ್.17, ಏಪ್ರಿಲ್.22, ಏಪ್ರಿಲ್.26 ಮತ್ತು ಏಪ್ರಿಲ್.29ರಂದು ಮತದಾನ ನಡೆಯಲಿದೆ. ಮೇ.2ರಂದು ಚುನಾವಣೆಯ ಅಂತಿಮ ಫಲಿತಾಂಶ ಹೊರ ಬೀಳಲಿದೆ.

Share This Article
Leave a Comment

Leave a Reply

Your email address will not be published. Required fields are marked *