ವಾಷಿಂಗ್ಟನ್: ಇನ್ನೊಂದು ವಾರದಲ್ಲಿ ಅಮೆರಿಕ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲಿರುವ ಡೊನಾಲ್ಡ್ ಟ್ರಂಪ್ ಮತ್ತೊಂದು ಕುಖ್ಯಾತಿಗೆ ಪಾತ್ರರಾಗಿದ್ದಾರೆ. ಕ್ಯಾಪಿಟೊಲ್ ಮೇಲಿನ ದಾಳಿಗೆ ಟ್ರಂಪ್ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ಡೆಮಾಕ್ರಟೆಕ್ ಮಂಡಿಸಿದ ವಾಗ್ದಂಡನೆಗೆ ಜನಪ್ರತಿನಿಧಿಗಳ ಸಭೆ ಅನುಮೋದನೆ ನೀಡಿದೆ.
232-197 ಮತಗಳ ಅಂತರದಲ್ಲಿ ಜನಪ್ರತಿನಿಧಿಗಳ ಸಭೆ ವಾಗ್ದಂಡನೆ ನಿಲುವಳಿಗೆ ಅಂಗೀಕಾರ ನೀಡಿತು. ಈ ಹಿನ್ನೆಲೆಯಲ್ಲಿ ಅಮೆರಿಕ ಇತಿಹಾಸದಲ್ಲಿಯೇ ಜನಪ್ರತಿನಿಧಿಗಳ ಸಭೆಯಲ್ಲಿ ಎರಡು ಬಾರಿ ವಾಗ್ದಂಡನೆಗೆ ಗುರಿಯಾದ ಮೊದಲ ಅಧ್ಯಕ್ಷ ಎಂಬ ಕುಖ್ಯಾತಿಗೆ ಟ್ರಂಪ್ ಪಾತ್ರರಾದರು.
ವಾಗ್ದಂಡನೆಯ ಗ್ಗೆ ಸೆನೆಟ್‍ನಲ್ಲಿ ಚರ್ಚೆ ನಡೆಯಲಿದೆ. ಜನವರಿ 19ಕ್ಕೆ ಸೆನೆಟ್ ಸಭೆ ಸೇರಲಿದೆ. ಸೆನೆಟ್‍ನಲ್ಲಿ ವಾಗ್ದಂಡನೆ ನಿಲುವಳಿ ಅನುಮೋದನೆ ಹೊಂದಲು ಡೆಮೆಕ್ರಾಟಿಕ್‌ಗೆ 17 ಮತಗಳ ಕೊರತೆ ಇದೆ. ರಿಪಬ್ಲಿಕನ್ ಪಕ್ಷದ ಕೆಲವರು ಈ ನಿಲುವಳಿಯನ್ನು ಬೆಂಬಲಿಸುವ ಸುಳಿವು ನೀಡಿದ್ದಾರೆ. ಜನವರಿ 20ಕ್ಕೆ ಬೈಡನ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಟ್ರಂಪ್ ವಿಚಾರಣೆ ನಡೆಯುವ ಸಂಭವ ಇದೆ.
ಟ್ರಂಪ್ ಟ್ವಿಟ್ಟರ್ ಖಾತೆಯನ್ನು ತೊಲಗಿಸಿದ ಕ್ರಮ ಸರಿಯಾದುದ್ದೇ ಎಂದು ಟ್ವಿಟ್ಟರ್ ಸಿಇಓ ಜಾಕ್ ಡೋರ್ಸೇ ಸಮರ್ಥಿಸಿಕೊಂಡಿದ್ದಾರೆ.