ಮತ್ತೆ ನಿಜವಾಯ್ತು ಅರ್ಚರ್ ಭವಿಷ್ಯ- ವೈರಲ್ ಆಯ್ತು ಓಲ್ಡ್ ಟ್ವೀಟ್

Public TV
2 Min Read
gayle 1

ಅಬುಧಾಬಿ: ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕ್ರಿಸ್ ಗೇಲ್ 99 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದು, ಜೋಫ್ರಾ ಅರ್ಚರ್ ಎಸೆದ ಯಾರ್ಕರ್ ರನ್ನು ಎದುರಿಸಲು ಗೇಲ್ ವಿಫಲರಾಗಿದ್ದರು. ಸದ್ಯ ಈ ಕುರಿತಂತೆ ಜೋಫ್ರಾ ಅರ್ಚರ್ ಮಾಡಿದ್ದ ಹಳೆಯ ಟ್ವೀಟ್ ಒಂದು ಸಖತ್ ವೈರಲ್ ಆಗುತ್ತಿದೆ.

ಪಂದ್ಯದಲ್ಲಿ 99 ರನ್ ಗಳಿಗೆ ವಿಕೆಟ್ ಒಪ್ಪಿಸಿದ ಗೇಲ್, ಐಪಿಎಲ್‍ನಲ್ಲಿ 2 ಬಾರಿ 99 ರನ್ ಗಳಿಗೆ ಔಟಾದ ಆಟಗಾರ ಎನಿಸಿಕೊಂಡಿದ್ದಾರೆ. ಗೇಲ್ ವಿಕೆಟ್ ಪಡೆದ ಜೋಫ್ರಾ ಇಂದಿಗೂ ಗೇಲ್ ಬಾಸ್ ಎಂದು ಟ್ವೀಟ್ ಮಾಡಿ ಅವರೊಂದಿಗೆ ಇದ್ದ ಫೋಟೋವನ್ನು ಹಂಚಿಕೊಂಡಿದ್ದಾರೆ.

ನಾನು ಬೌಲಿಂಗ್ ಮಾಡಿದರೆ, ಆತ ಶತಕ ಗಳಿಸುವುದಿಲ್ಲ ಎಂದು 2013ರಲ್ಲಿ ಜೋಪ್ರಾ ಮಾಡಿದ್ದ ಟ್ವೀಟನ್ನು ರೀಟ್ವೀಟ್ ಮಾಡಿರುವ ರಾಜಸ್ಥಾನ ರಾಯಲ್ಸ್ ತಂಡ ಟ್ವೀಟ್ ವೈರಲ್ ಮಾಡಿದೆ. 2013ರ ಫೆಬ್ರವರಿಯಲ್ಲಿ ಟೀಂ ಇಂಡಿಯಾ, ಆಸ್ಟ್ರೇಲಿಯಾ ನಡುವೆ ನಡೆದ ಟೆಸ್ಟ್ ಪಂದ್ಯ ಉದ್ದೇಶಿಸಿ ಜೋಫ್ರಾ ಟ್ವೀಟ್ ಮಾಡಿದ್ದರು. ಜೋಫ್ರಾ ಅರ್ಚರ್ ಈ ಹಿಂದೆ ಮಾಡಿದ್ದ ಟ್ವೀಟ್ ಸದ್ಯದ ಪಂದ್ಯಗಳಿಗೆ ಹೋಲಿಕೆ ಆಗುತ್ತಿರುವುದು ಗಮನರ್ಹವಾಗಿದೆ. ಸತತ ನಾಲ್ಕು ಸಿಕ್ಸರ್, ಒಂದೇ ಓವರಿನಲ್ಲಿ 30 ರನ್ ಸೇರಿದಂತೆ ಜೋಫ್ರಾ ಮಾಡಿದ ಹಲವು ಟ್ವೀಟ್‍ಗಳು ಸಾಕಷ್ಟು ವೈರಲ್ ಆಗಿತ್ತು.

ಕ್ರಿಸ್ ಗೇಲ್ ಅವರು ಟಿ-20 ಮಾದರಿಯ ಕ್ರಿಕೆಟ್‍ಗೆ ಹೇಳಿ ಮಾಡಿಸಿದಂತ ಬ್ಯಾಟ್ಸ್ ಮನ್ ಆಗಿದ್ದಾರೆ. ಹೊಡಿಬಡಿ ಆಟಕ್ಕೆ ಹೊಂದಿಕೊಳ್ಳುವಂತೆ ಬ್ಯಾಟ್ ಬೀಸುವ ಗೇಲ್ ಸಿಕ್ಸರ್ ಸಿಡಿಸುವುದರಲ್ಲಿ ನಿಸ್ಸೀಮರು. ಸದ್ಯ ಟಿ-20ಯಲ್ಲಿ ಮೊದಲ ಬಾರಿಗೆ 1 ಸಾವಿರ ಸಿಕ್ಸರ್ ಸಿಡಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಗೇಲ್ ಪಾತ್ರರಾಗಿದ್ದಾರೆ. ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ 2ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಗೇಲ್, 63 ಎಸೆತದಲ್ಲಿ ಆರು ಬೌಂಡರಿ ಮತ್ತು ಎಂಟು ಭರ್ಜರಿ ಸಿಕ್ಸರ್ ಸಮೇತ ಬರೋಬ್ಬರಿ 99 ರನ್ ಬಾರಿಸಿ ಔಟಾದರು. ಈ ಮೂಲಕ ಟಿ-20ಯಲ್ಲಿ ಸಾವಿರ ಸಿಕ್ಸರ್ ಸಿಡಿಸಿದರು. ವೆಸ್ಟ್ ಇಂಡೀಸ್ ಪರ ಅಂತಾರಾಷ್ಟ್ರೀಯ ಟಿ-20 ಪಂದ್ಯ, ಐಪಿಎಲ್ ಮತ್ತು ಬಿಗ್ ಬ್ಯಾಷ್ ಸೇರಿದಂತೆ ಗೇಲ್ ಹಲವಾರು ಟಿ-20 ಟೂರ್ನಿಗಳನ್ನು ಆಡಿದ್ದಾರೆ. ಈ ಎಲ್ಲ ಪಂದ್ಯಗಳಿಂದ ಕೇವಲ ಟಿ-20 ಪಂದ್ಯಗಳಲ್ಲೇ 10 ಸಾವಿರ ರನ್ ಸಿಡಿಸಿದ್ದಾರೆ. ಜೊತೆಗೆ ಐಪಿಎಲ್‍ನಲ್ಲಿ 349 ಸಿಕ್ಸ್ ಮತ್ತು 4760 ರನ್ ಬಾರಿಸಿದ್ದಾರೆ.

Chris Gayle 1

Share This Article